For Quick Alerts
ALLOW NOTIFICATIONS  
For Daily Alerts
 

ತಾಯಿಗೆ ಕೊಟ್ಟ ಭಾಷೆಯನ್ನ ಉಳಿಸಿಕೊಂಡ ರೋಮನ್ ಪೊವೆಲ್: ಮನತಟ್ಟುವ ಕಥೆ ಹೇಳಿದ ಇಯಾನ್ ಬಿಷಪ್

Rovman powell

ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್ ಐಪಿಎಲ್ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಆಲ್‌ರೌಂಡರ್ ರೋಮನ್ ಪೊವೆಲ್ ಕುರಿತು ಮನಕಲಕುವ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ. ರೋಮನ್ ತನ್ನ ತಾಯಿಗೆ ಕೊಟ್ಟಿದ ಭಾಷೆಯನ್ನ ತಿಳಿಸುವ ಮೂಲಕ ರೋಮನ್ ಎಷ್ಟು ಕಠಿಣ ಪರಿಶ್ರಮ ಪಟ್ಟು ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟರು ಎಂಬುದನ್ನ ವಿಂಡೀಸ್ ಹಿರಿಯ ಕ್ರಿಕೆಟಿಗ ವಿವರಿಸಿದ್ದಾರೆ.

ವೆಸ್ಟ್‌ ಇಂಡೀಸ್ ಹಾಗೂ ಡಿಸಿ ಆಲ್‌ರೌಂಡರ್ ರೋಮನ್ ಪೊವೆಲ್‌ ಕಡುಬಡತನದ ಕುಟುಂಬದಿಂದ ಬಂದವರಾಗಿದ್ದು, ತನ್ನ ಕುಟುಂಬದವರನ್ನ ಬಡತನದಿಂದ ಮುಕ್ತಗೊಳಿಸುವುದಾಗಿ ಸೆಕೆಂಡರಿ ಶಾಲೆಯ ದಿನಗಳಿದ್ದಾಗಲೇ ತಾಯಿಗೆ ಮಾತು ಕೊಟ್ಟಿದ್ದರು.

ಕೆಕೆಆರ್ ವಿರುದ್ಧ ಅಬ್ಬರಿಸಿದ ಪೊವೆಲ್

ಕೆಕೆಆರ್ ವಿರುದ್ಧ ಅಬ್ಬರಿಸಿದ ಪೊವೆಲ್

ಕಳೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೊವೆಲ್ ಕೇವಲ 16 ಎಸೆತಗಳಲ್ಲಿ ಅಜೇಯ 33 ರನ್ ಕಲೆಹಾಕುವ ಮೂಲಕ ಎರಡು ಬಾರಿಯ ಚಾಂಪಿಯನ್‌ ಕೆಕೆಆರ್ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೇರಿದೆ.

ಉಮೇಶ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಪ್ರಮುಖ ಬ್ಯಾಟರ್‌ಗಳು ನೆಲಕಚ್ಚಿದರೂ ಸಹ ಡೇವಿಡ್ ವಾರ್ನರ್, ಪೊವೆಲ್ ಹಾಗೂ ಅಕ್ಷರ್ ಪಟೇಲ್ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್

ರೋಮನ್ ಪೊವೆಲ್ ಜೀವನದ ಕಥೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಲಿದೆ!

ರೋಮನ್ ಪೊವೆಲ್ ಜೀವನದ ಕಥೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಲಿದೆ!

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್‌ '' ಯಾರಾದರೂ ತಮ್ಮ 10 ನಿಮಿಷಗಳ ಸಮಯವನ್ನ ಉತ್ತಮ ಕಾರಣಕ್ಕಾಗಿ ಬಳಸಬೇಕೆನಿಸಿದ್ರೆ, ರೋಮನ್ ಪೊವೆಲ್ ಅವರ ಜೀವನದ ಕಥೆಯ ಕುರಿತಾದ ವೀಡಿಯೋದಿಂದ ತಿಳಿಯಿರಿ'' ಎಂದು ಹೇಳಿದ್ದಾರೆ. ಯೂಟ್ಯೂಬ್‌ನಲ್ಲಿ ಪೊವೆಲ್ ಕುರಿತಾದ ವೀಡಿಯೋವನ್ನ ನೋಡಿದ ಎಂದು ಬಿಷಪ್ ತಿಳಿಸಿದ್ದಾರೆ.

''ರೋಮನ್ ಪೊವೆಲ್ ತಮ್ಮ ಕ್ರಿಕೆಟ್‌ ಕೌಶಲ್ಯಗಳನ್ನ ತುಂಬಾ ಚೆನ್ನಾಗಿ ಉತ್ತಮಪಡಿಸಿಕೊಂಡಿದ್ದಾರೆ. ಭಾರತದ ವಿರುದ್ಧದ ಆತನ ಬ್ಯಾಟಿಂಗ್ 47.5ರಷ್ಟಿದ್ದು, ಕಳೆದ ಫೆಬ್ರವರಿಯ ಪ್ರವಾಸದಲ್ಲಿ ಸ್ಪಿನ್ನರ್‌ಗಳನ್ನ ಎದುರಿಸಿದ್ದಾರೆ. ಆತನ ಸೀಮ್ ಬೌಲಿಂಗ್‌ಗೂ ಉತ್ತಮವಾಗಿ ಆಡಬಲ್ಲವನಾಗಿದ್ದಾನೆ'' ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

ವಿಮಾನದಲ್ಲಿ ಅವರಿಗಾಗಿ ತನ್ನ ಬಿಜಿನೆಸ್‌ ಕ್ಲಾಸ್ ಸೀಟ್‌ಗಳನ್ನೇ, ಬಿಟ್ಟುಕೊಡುತ್ತಿದ್ರಂತೆ ವಿರಾಟ್ ಕೊಹ್ಲಿ!

2.8 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ

2.8 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ

ಜುಲೈ 23, 1993 ರಂದು ಜನಿಸಿದ ಪೊವೆಲ್ ತನ್ನ ಚಿಕ್ಕಂದಿನ ವಯಸ್ಸಿನಲ್ಲಿ ತಾಯಿ ಮತ್ತು ಕಿರಿಯ ಸಹೋದರಿ ಜೊತೆಗೆ ಬಹಳಷ್ಟು ಕಷ್ಟಗಳನ್ನು ಅನುಭವಿಸಿದರು. ಆದಾಗ್ಯೂ, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಸಮಯದಲ್ಲಿ ಬ್ಯಾಟ್‌ನೊಂದಿಗೆ ಅವರ ಪ್ರದರ್ಶನ, ರಾಷ್ಟ್ರೀಯ ಕರೆಯನ್ನು ತಂದುಕೊಟ್ಟಿತು. ಐಪಿಎಲ್ 2022 ರ ಮೆಗಾ ಹರಾಜಿನ ಸಮಯದಲ್ಲಿ ಡಿಸಿ ಆತನನ್ನ ಖರೀದಿಸಿತು.

ಪೊವೆಲ್ ಚುಟುಕು ಕ್ರಿಕೆಟ್‌ನಲ್ಲಿ 39 ಪಂದ್ಯಗಳನ್ನು ಆಡಿದ್ದಾರೆ ಮತ್ತು 24.76 ರ ಸರಾಸರಿಯಲ್ಲಿ ಒಟ್ಟು 619 ರನ್ ಗಳಿಸಿದ್ದಾರೆ. 20 ಓವರ್‌ಗಳ ಮಾದರಿಯಲ್ಲಿ ಅವರು ಮೂರು ಅರ್ಧಶತಕ ಮತ್ತು ಶತಕಗಳನ್ನು ಸಹ ಹೊಡೆದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರೋಮನ್ ಪೊವೆಲ್ 2.8 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಸೇರಿಕೊಂಡರು.

Story first published: Saturday, April 30, 2022, 10:37 [IST]
Other articles published on Apr 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+