Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್

Umran Malik

ಬುಧವಾರ (ಏ.27)ರಂದು ನಡೆದ ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ಪಂದ್ಯದಲ್ಲಿ ಟೈಟನ್ಸ್‌ ರೋಚಕ ಗೆಲುವು ಸಾಧಿಸಿತು. ಎದುರಾಳಿ ತಂಡದ ಉಮ್ರಾನ್ ಮಲ್ಲಿಕ್ ಬೆಂಕಿಯಂತಹ ಬೌಲಿಂಗ್‌ ಎದುರು ಗುಜರಾತ್ ಹ್ಯಾಟ್ರಿಕ್‌ ಸಿಕ್ಸರ್‌ಗಳೊಂದಿಗೆ ಪಂದ್ಯ ಜಯಿಸಿತು.

ಈ ಪಂದ್ಯದಲ್ಲಿ ಕಾಶ್ಮೀರ್ ಎಕ್ಸ್‌ಪ್ರೆಸ್ ಉಮ್ರಾನ್ ಮಲ್ಲಿಕ್ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ಗಳನ್ನು ಕಬಳಿಸಿದರು. ಇವರ ಬೌಲಿಂಗ್‌ನಲ್ಲಿ ನಾಲ್ವರು ಕ್ಲೀನ್ ಬೌಲ್ಡ್ ಆದರು. ಶುಭ್ ಮನ್ ಗಿಲ್ , ಸೂಪರ್ ಫಾರ್ಮ್ ನಲ್ಲಿರುವ ಹಾರ್ದಿಕ್ ಪಾಂಡ್ಯ, ವಿಧ್ವಂಸಕ ಮಿಲ್ಲರ್‌ನನ್ನ ಉಮ್ರಾನ್ ತಮ್ಮ ವೇಗದ ಎಸೆತಗಳಿಂದ ಪೆವಿಲಿಯನ್ ಗೆ ಸೇರಿಸಿದರು.

ಒಂದೇ ಮ್ಯಾಚ್‌ನಲ್ಲಿ ಐದು ವಿಕೆಟ್, ಅದರಲ್ಲಿ ನಾಲ್ಕು ಬೌಲ್ಡ್‌

ಒಂದೇ ಮ್ಯಾಚ್‌ನಲ್ಲಿ ಐದು ವಿಕೆಟ್, ಅದರಲ್ಲಿ ನಾಲ್ಕು ಬೌಲ್ಡ್‌

ಹಾರ್ದಿಕ್ ಹೊರತುಪಡಿಸಿ ಉಳಿದ ನಾಲ್ವರು ಬ್ಯಾಟರ್ಸ್ ಉಮ್ರಾನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ, ಇತರ ಬೌಲರ್‌ಗಳ ಬೆಂಬಲದ ಕೊರತೆಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಸನ್ ರೈಸರ್ಸ್ ತಂಡದ ಆಲ್‌ರೌಂಡರ್ ರಶೀದ್ ಖಾನ್ ಮತ್ತು ವೃದ್ಧಿಮಾನ್ ಸಹಾ ಸೂಪರ್ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯ ಜಯಿಸಿದರು.

ವಿಮಾನದಲ್ಲಿ ಅವರಿಗಾಗಿ ತನ್ನ ಬಿಜಿನೆಸ್‌ ಕ್ಲಾಸ್ ಸೀಟ್‌ಗಳನ್ನೇ, ಬಿಟ್ಟುಕೊಡುತ್ತಿದ್ರಂತೆ ವಿರಾಟ್ ಕೊಹ್ಲಿ!

ಉಮ್ರಾನ್ ಮಲ್ಲಿಕ್ ವೇಗಕ್ಕೆ ಹಾರ್ದಿಕ್ ಪಾಂಡ್ಯ ತತ್ತರ

ಉಮ್ರಾನ್ ಮಲ್ಲಿಕ್ ವೇಗಕ್ಕೆ ಹಾರ್ದಿಕ್ ಪಾಂಡ್ಯ ತತ್ತರ

ಇದಕ್ಕೂ ಮೊದಲು ಮಲಿಕ್ ಅವರ ಶಾರ್ಟ್ ಪಿಚ್ ಬಾಲ್ ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಬೌನ್ಸ್ ಆಗಿ ಹಾರ್ದಿಕ್ ಪಾಂಡ್ಯ ಭುಜಕ್ಕೆ ಬಡಿದಿದೆ. ಇದರೊಂದಿಗೆ ಹಾರ್ದಿಕ್ ನೋವಿನಿಂದ ನಿಟ್ಟುಸಿರು ಬಿಟ್ಟರು. ಮಲಿಕ್ ಅವರ ಎಸೆತಗಳಿಗೆ ಬಹುತೇಕ ಹೆದರಿದ ಹಾರ್ದಿಕ್ ತಮ್ಮ ಮುಂದಿನ ಓವರ್ ನಲ್ಲಿ ಕ್ಯಾಚ್ ಔಟ್ ಆಗಿ ಮರಳಿದರು. ಡಗೌಟ್ ಸೇರಿದ ನಂತರವೂ ಹಾರ್ದಿಕ್ ನೋವಿನಿಂದ ಅಸಹನೀಯವಾಗಿ ಕಂಡರು. ಆದರೆ ಪಂದ್ಯದ ನಂತರ ಉಮ್ರಾನ್ ಮಲಿಕ್ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ಅವರನ್ನು ಭೇಟಿಯಾದರು. ಮೈದಾನದಲ್ಲಿ ಮೂವರೂ ಮಾತನಾಡುತ್ತಾ ಖುಷಿಪಟ್ಟರು.

ಈ ಸಂದರ್ಭದಲ್ಲಿ ಎಸೆದ ಶಾರ್ಟ್ ಪಿಚ್ ಬಾಲ್ ಗೆ ಉಮ್ರಾನ್ ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ನಿಲ್ಲದೆ ಗ್ಯಾಲರಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಅವರ ಬಳಿಯೂ ಉಮ್ರಾನ್ ಕ್ಷಮೆಯಾಚಿಸಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ. ಸಾಂದರ್ಭಿಕವಾಗಿ ಮಾತನಾಡುತ್ತಾ.. ಹಾರ್ದಿಕ್ ತನ್ನ ಹೆಂಡತಿ ಮತ್ತು ಮಗ ಗ್ಯಾಲರಿಯಲ್ಲಿದ್ದಾರೆ ಎಂದು ಉಮ್ರಾನ್‌ಗೆ ತೋರಿಸುತ್ತಾನೆ. ಉಮ್ರಾನ್ ನತಾಶಾ ಮೇಲೆ ಕೈ ಮುಗಿದು ನಮಸ್ಕರಿಸಿದ್ದು, ಈ ಫೋಟೋಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಕೊನೆಯ 6 ಎಸೆತಗಳಿಗೆ 23 ರನ್ ಚೇಸ್ ಮಾಡಿ ಗೆದ್ದಿರುವ ಏಕೈಕ ತಂಡವಿದು!

ಉಮ್ರಾನ್ ಮಲಿಕ್ ಈ ಋತುವಿನಲ್ಲಿ ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಯುಜವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮೊದಲಿದ್ದು, ಮಲ್ಲಿಕ್ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನಟರಾಜನ್ ಕೂಡ 15 ವಿಕೆಟ್‌ಗಳೊಂದಿಗೆ ಉಮ್ರಾನ್‌ಗೆ ಸರಿಸಮಾನವಾಗಿದ್ದಾರೆ.

150+ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲ್ಲಿಕ್

150+ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲ್ಲಿಕ್

ಐಪಿಎಲ್‌ನಲ್ಲಿ ಸದ್ಯ 150kmph ಕ್ಕಿಂತ ಹೆಚ್ಚು ಬೌಲಿಂಗ್ ಮಾಡುತ್ತಿರುವ ಏಕೈಕ ಭಾರತೀಯ ಬೌಲರ್ ಅಂದ್ರೆ ಅದು ಉಮ್ರಾನ್ ಮಲ್ಲಿಕ್ ಆಗಿದ್ದಾರೆ. ಅದರಲ್ಲೂ ಗುಜರಾತ್ ಟೈಟನ್ಸ್ ಪರ ವೇಗಿ ಲ್ಯುಕಿ ಫರ್ಗುಸನ್‌ಗೆ ಸಖತ್ತಾಗಿ ಟಕ್ಕರ್ ನೀಡುತ್ತಿರುವ ಉಮ್ರಾನ್‌ ಬೆಂಕಿಯುಂಡೆಯಂತಹ ಎಸೆತಗಳನ್ನ ಹಾಕುತ್ತಿದ್ದಾರೆ.

ಉಮ್ರಾನ್ ಮಲ್ಲಿಕ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ 152.8kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗುಜರಾತ್ ಟೈಟನ್ಸ್‌ ಬೌಲರ್ ಲ್ಯುಕಿ ಫರ್ಗುಸನ್‌ಗೆ ಚಾಲೆಂಜ್ ಮಾಡಿದ್ದಾರೆ.

ಭಾರತ ಕ್ರಿಕೆಟ್‌ನ ಕೋಲ್ಮಿಂಚು ಉಮ್ರಾನ್ ಮಲ್ಲಿಕ್ : IPLನಲ್ಲಿ ವೇಗದ ಬೌಲಿಂಗ್‌ ಸಾಧನೆ

ನ್ಯೂಜಿಲೆಂಡ್ ಮೂಲದ ವೇಗಿ ಲ್ಯುಕಿ ಫರ್ಗುಸನ್ ಐಪಿಎಲ್‌ 2022ರಲ್ಲಿ ಅತ್ಯಂತ ವೇಗದ ಎಸೆತ 153.9kph ನಲ್ಲಿ ಬೌಲಿಂಗ್ ಮಾಡುವ ಮೂಲಕ ಅಬ್ಬರಿಸಿದ್ದಾರೆ.

Story first published: Friday, April 29, 2022, 12:36 [IST]
Other articles published on Apr 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+