ವಿಮಾನದಲ್ಲಿ ಅವರಿಗಾಗಿ ತನ್ನ ಬಿಜಿನೆಸ್ ಕ್ಲಾಸ್ ಸೀಟ್‌ಗಳನ್ನೇ, ಬಿಟ್ಟುಕೊಡುತ್ತಿದ್ರಂತೆ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ಹಾಗೂ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಗುಣವೊಂದನ್ನ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್ ವಿವೇಕ್ ರಾಜ್ದಾನ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ವಿರಾಟ್ ಜೊತೆಗೆ ಸಮಯ ಕಳೆದಿದ್ದ ವಿವೇಕ್ ಕೊಹ್ಲಿಯ ಮಾನವೀಯ ಗುಣಗಳನ್ನ ಬಿಚ್ಚಿಟ್ಟಿದ್ದಾರೆ.
ವಿವೇಕ್ ಪ್ರಕಾರ ವಿರಾಟ್ ಕೊಹ್ಲಿ ವಿಮಾನ ಪ್ರಯಾಣದ ವೇಳೆಯಲ್ಲಿ ತನಗೆ ಮೀಸಲಿದ್ದ ಬಿಜಿನೆಸ್ ಕ್ಲಾಸ್ ಸೀಟ್‌ಗಳನ್ನ ಬೇರೆ ಆಟಗಾರರಿಗೆ ಬಿಟ್ಟುಕೊಡುತ್ತಿದ್ದರು. ಇತರೆ ತಂಡದ ಆಟಗಾರರೊಂದಿಗೆ ವಿರಾಟ್ ಎಕಾನಮಿ ಕ್ಲಾಸ್‌ನಲ್ಲೇ ಪ್ರಯಾಣ ಬೆಳೆಸುತ್ತಿದ್ದರು ಎಂದು ವಿವೇಕ್ ತಿಳಿಸಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ತನ್ನ ಸೀಟ್ ಅನ್ನು ಬೌಲರ್‌ಗಳಿಗೆ ಹೆಚ್ಚು ನೀಡಿದ್ದ ಉದಾಹರಣೆಯನ್ನ ವಿವೇಕ್ ಕಂಡಿದ್ದಾರೆ.

ಬೌಲರ್‌ಗಳ ಬಗ್ಗೆ ವಿರಾಟ್ ಸಾಫ್ಟ್ ಕಾರ್ನರ್
ಬೌಲರ್‌ಗಳು ಬ್ಯುಸಿನೆಸ್ ಕ್ಲಾಸ್ ಸೀಟ್ ಪಡೆಯಲು ಅರ್ಹರಾಗಿದ್ದಾರೆ. ಏಕೆಂದರೆ ಅಂತರಾಷ್ಟ್ರೀಯ ಪ್ರವಾಸಗಳ ಸಮಯದಲ್ಲಿ ವಿರಾಟ್ ಜೊತೆ ಪ್ರಯಾಣಿಸಿದಾಗಲೆಲ್ಲಾ ವಿರಾಟ್ ಬೌಲರ್‌ಗಳಿಗೆ ಸಾಫ್ಟ್ ಕಾರ್ನರ್ ಅನ್ನು ಹೊಂದಿದ್ದರು. ಏಕೆಂದರೆ ಬೌಲರ್‌ಗಳು ಹೆಚ್ಚು ದಣಿದಿದ್ದ ಕಾರಣ ಹಾಗೂ ಇಂಜ್ಯುರಿ ಮತ್ತು ಇತರೆ ಸಮಸ್ಯೆಗಳನ್ನ ಎದುರಿಸಿದ್ದಾಗ ವಿರಾಟ್ ಬಿಜಿನೆಸ್ ಸೀಟ್ ಅನ್ನು ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್‌ಗೆ ನೀಡುತ್ತಿದ್ದರು ಎಂದು ವಿವೇಕ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಈ ನಿರ್ಧಾರದ ಹಿಂದಿನ ಉದ್ದೇಶ, ಬೌಲರ್‌ಗಳಿಗೆ ಮೂರು-ನಾಲ್ಕು ಗಂಟೆಗಳ ಕಾಲ ವಿಶ್ರಾಂತಿ ಸಿಗಲಿ ಎಂಬುದಾಗಿತ್ತು.
IPL 2022: RCB ಕ್ಯಾಂಪ್‌ನಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮದುವೆ ಸೆಲೆಬ್ರೇಷನ್

ಆಟಗಾರರಿಗೆ ಮತ್ತು ನಾಯಕನಿಗೆ ಯಾವ ರೀತಿಯ ಆಸನ ವ್ಯವಸ್ಥೆ ಇರಲಿದೆ?
ತಂಡದ ಫ್ಲೈಟ್‌ಗಳಲ್ಲಿ ಮೊದಲಿನಿಂದಲೂ ಪ್ರೋಟೋಕಾಲ್ ಇದೆ, ಅಲ್ಲಿ ಎರಡು ಬಿಸಿನೆಸ್ ಕ್ಲಾಸ್ ಸೀಟುಗಳನ್ನು ತಂಡದ ನಾಯಕ ಮತ್ತು ತಂಡದ ತರಬೇತುದಾರರಿಗೆ ಕಾಯ್ದಿರಿಸಲಾಗಿರುತ್ತದೆ. ಆದರೆ ತಂಡದ ಉಳಿದ ಆಟಗಾರರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಾರೆ. ಆದಾಗ್ಯೂ, ವಿರಾಟ್ ತನ್ನ ಬಿಜಿನೆಸ್ ಕ್ಲಾಸ್ ಸೀಟ್ ಅನ್ನು ಎಂದಿಗೂ ಬಳಸಿಲ್ಲವಂತೆ ಮತ್ತು ಅದನ್ನು ಇಶಾಂತ್ ಶರ್ಮಾ ಅಥವಾ ಜಸ್ಪ್ರೀತ್ ಬುಮ್ರಾ ಅವರಂತಹ ವೇಗದ ಬೌಲರ್‌ಗೆ ನೀಡುತ್ತಿದ್ದರು. ಏಕೆಂದರೆ ವಿರಾಟ್ ಕೊಹ್ಲಿ ಪ್ರಕಾರ, ಬೌಲರ್‌ಗಳಿಗೆ ಉತ್ತಮ ವಿಶ್ರಾಂತಿ ಮತ್ತು ರಿಹಾಬ್ ಅಗತ್ಯವಿದೆ.
ಭಾರತ ಕ್ರಿಕೆಟ್‌ನ ಕೋಲ್ಮಿಂಚು ಉಮ್ರಾನ್ ಮಲ್ಲಿಕ್ : IPLನಲ್ಲಿ ವೇಗದ ಬೌಲಿಂಗ್ ಸಾಧನೆ

ಅನುಷ್ಕಾ ಜೊತೆ ಪ್ರಯಾಣ ಮಾಡಿದಾಗಲೂ ಎರಡು ಸೀಟ್ ಅನ್ನು ಸಹ ಕೇಳಿಲ್ಲ!
ಅನುಷ್ಕಾ ಶರ್ಮಾ ವಿರಾಟ್ ಜೊತೆ ಪ್ರಯಾಣ ಮಾಡಿದಾಗಲು ಸಹ ವಿರಾಟ್ ಬಿಜಿನೆಸ್ ಕ್ಲಾಸ್ ಅನ್ನು ಬಳಸಿಲ್ಲ ಎಂದು ಮಾಜಿ ಕ್ರಿಕೆಟಿಗ ವಿವೇಕ್ ರಾಜ್ದಾನ್ ಬಹಿರಂಗಪಡಿಸಿದ್ದಾರೆ.
"ಅನುಷ್ಕಾ ಶರ್ಮಾ 2019 ರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಬಂದಾಗಲೂ, ಅವರು ಮತ್ತು ವಿರಾಟ್ ಎಕಾನಮಿ ಕ್ಲಾಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸಿದರು. ತಮ್ಮ ಬಿಸಿನೆಸ್ ಕ್ಲಾಸ್ ಸೀಟ್ ಅನ್ನು ಅನುಷ್ಕಾಗೆ ನೀಡುವಂತೆ ವಿರಾಟ್ ಎಂದಿಗೂ ವಿನಂತಿಸಿಕೊಂಡಿಲ್ಲ ಎಂದು ರಾಜ್ದಾನ್ ಹೇಳಿದ್ದಾರೆ.
ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ಈ ಕನ್ನಡಿಗನಿಗೆ ಬೌಲಿಂಗ್ ಮಾಡುವ ಆಸೆ ಹೊರಹಾಕಿದ ಕಪಿಲ್ ದೇವ್

9 ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು 128ರನ್
ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಕೆಟ್ಟ ಫಾರ್ಮ್ ಅನ್ನು ಐಪಿಎಲ್‌ನಲ್ಲೂ ಮುಂದುವರಿಸಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರುವ ಕೇವಲ 128ರನ್ ಆಗಿದೆ. ಒಂದೇ ಒಂದು ಅರ್ಧಶತಕ ದಾಖಲಿಸಿದ ಕೊಹ್ಲಿ ಕಳಪೆ 16ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications