For Quick Alerts
ALLOW NOTIFICATIONS  
For Daily Alerts
 

ಭಾರತ ಕ್ರಿಕೆಟ್‌ನ ಕೋಲ್ಮಿಂಚು ಉಮ್ರಾನ್ ಮಲ್ಲಿಕ್ : IPLನಲ್ಲಿ ವೇಗದ ಬೌಲಿಂಗ್‌ ಸಾಧನೆ

Umran Malik

ಭಾರತ ಕ್ರಿಕೆಟ್‌ನ ವೇಗದ ಬೌಲರ್‌ ಎಂದೇ ಸದ್ದು ಮಾಡುತ್ತಿರುವ ಜಮ್ಮು ಕಾಶ್ಮೀರ ಮೂಲದ ಉಮ್ರಾನ್ ಮಲ್ಲಿಕ್, ಅಬ್ಬರದ ಬೌಲಿಂಗ್ ಮೂಲಕ ಮಿಂಚುತ್ತಿದ್ದಾರೆ. ಐಪಿಎಲ್‌ನಲ್ಲಿ ತನ್ನ ವೇಗದ ಮೂಲಕವೇ ಎದುರಾಳಿ ಬ್ಯಾಟ್ಸ್‌ಮನ್‌ಗಳ ಸದ್ದಡಗಿಸುತ್ತಿರುವ ಮಲ್ಲಿಕ್ ವೇಗಕ್ಕೆ ಎದುರಾಳಿ ತಂಡ ನಡುಗುತ್ತಿದೆ.

ಜಮ್ಮು ಕಾಶ್ಮೀರ ಮೂಲದ ಉಮ್ರಾನ್ ಮಲ್ಲಿಕ್ ತನ್ನ ವೇಗದ ಮೂಲಕ ಐಪಿಎಲ್‌ನಲ್ಲಿ ಹೆಸರು ಮಾಡಿಲ್ಲ. ಐಪಿಎಲ್ 2022ರ ಸೀಸನ್‌ನಲ್ಲಿ ವಿಕೆಟ್ ಬೇಟೆಯಾಡುತ್ತಿರುವ ಎಸ್‌ಆರ್‌ಎಚ್ ಬೌಲರ್‌ ಗುಜರಾತ್ ಟೈಟನ್ಸ್ ವಿರುದ್ಧ ಐದು ವಿಕೆಟ್ ಪಡೆದರು. 4 ಓವರ್‌ಗಳಲ್ಲಿ ಕೇವಲ 25ರನ್‌ ನೀಡಿದ ಈತ 5 ವಿಕೆಟ್‌ಗಳ ಗೊಂಚಲು ಪಡೆದರು. ಹೀಗಾಗಿಯೇ ಹೈದ್ರಾಬಾದ್ ಪಂದ್ಯ ಸೋತರು ಸಹ ಉಮ್ರಾನ್‌ ಮಲ್ಲಿಕ್ ಅದ್ಭುತ ಪ್ರದರ್ಶನಕ್ಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿದುಬಂದಿತು.

150+ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲ್ಲಿಕ್

150+ ಬೌಲಿಂಗ್ ಮಾಡಬಲ್ಲ ಉಮ್ರಾನ್ ಮಲ್ಲಿಕ್

ಐಪಿಎಲ್‌ನಲ್ಲಿ ಸದ್ಯ 150kmph ಕ್ಕಿಂತ ಹೆಚ್ಚು ಬೌಲಿಂಗ್ ಮಾಡುತ್ತಿರುವ ಏಕೈಕ ಭಾರತೀಯ ಬೌಲರ್ ಅಂದ್ರೆ ಅದು ಉಮ್ರಾನ್ ಮಲ್ಲಿಕ್ ಆಗಿದ್ದಾರೆ. ಅದರಲ್ಲೂ ಗುಜರಾತ್ ಟೈಟನ್ಸ್ ಪರ ವೇಗಿ ಲ್ಯುಕಿ ಫರ್ಗುಸನ್‌ಗೆ ಸಖತ್ತಾಗಿ ಟಕ್ಕರ್ ನೀಡುತ್ತಿರುವ ಉಮ್ರಾನ್‌ ಬೆಂಕಿಯುಂಡೆಯಂತಹ ಎಸೆತಗಳನ್ನ ಹಾಕುತ್ತಿದ್ದಾರೆ.

ಉಮ್ರಾನ್ ಮಲ್ಲಿಕ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ 152.8kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗುಜರಾತ್ ಟೈಟನ್ಸ್‌ ಬೌಲರ್ ಲ್ಯುಕಿ ಫರ್ಗುಸನ್‌ಗೆ ಚಾಲೆಂಜ್ ಮಾಡಿದ್ದಾರೆ.

ನ್ಯೂಜಿಲೆಂಡ್ ಮೂಲದ ವೇಗಿ ಲ್ಯುಕಿ ಫರ್ಗುಸನ್ ಐಪಿಎಲ್‌ 2022ರಲ್ಲಿ ಅತ್ಯಂತ ವೇಗದ ಎಸೆತ 153.9kph ನಲ್ಲಿ ಬೌಲಿಂಗ್ ಮಾಡುವ ಮೂಲಕ ಅಬ್ಬರಿಸಿದ್ದಾ

IPL 2022ರಲ್ಲಿ ಅತ್ಯಂತ ವೇಗದ ಬೌಲಿಂಗ್ ದಾಖಲ ಹೊಂದಿರುವ ಫರ್ಗುಸನ್

IPL 2022ರಲ್ಲಿ ಅತ್ಯಂತ ವೇಗದ ಬೌಲಿಂಗ್ ದಾಖಲ ಹೊಂದಿರುವ ಫರ್ಗುಸನ್

ಐಪಿಎಲ್ 15ನೇ ಸೀಸನ್‌ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿರುವ ದಾಖಲೆ ಗುಜರಾತ್ ಟೈಟನ್ಸ್‌ನ ಲ್ಯುಕಿ ಫರ್ಗುಸನ್ ಹೆಸರಿನಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫರ್ಗುಸನ್ 153.90kmph ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ.

152.60kmph ವೇಗದಲ್ಲೂ ಬೌಲಿಂಗ್ ಮಾಡಿರುವ ನ್ಯೂಜಿಲೆಂಡ್ ವೇಗಿ ಕೇವಲ ವೇಗ ಅಷ್ಟೇ ಅಲ್ಲದೆ ಸ್ಥಿರವಾಗಿ ವಿಕೆಟ್ ಬೇಟೆಯಾಡುತ್ತಿರುವ ಬೌಲರ್ ಆಗಿದ್ದಾರೆ. ಐಪಿಎಲ್ 2022ರಲ್ಲಿ 7 ಪಂದ್ಯಗಳಲ್ಲಿ ಈತ 9 ವಿಕೆಟ್ ಪಡೆದಿದ್ದು, 8.32 ಎಕಾನಮಿಯಲ್ಲಿ ಬೌಲಿಂಗ್‌ ಮಾಡಿದ್ದಾರೆ.

IPL 2022: 6 ಎಸೆತಗಳಲ್ಲಿ 25 ರನ್ ಸಿಡಿಸಿದ ಶಶಾಂಕ್ ಸಿಂಗ್ ಯಾರು?

ಐಪಿಎಲ್ 2022ರ ವೇಗದ ಎಸೆತಗಳು

ಐಪಿಎಲ್ 2022ರ ವೇಗದ ಎಸೆತಗಳು

153.90 - ಲ್ಯುಕಿ ಫರ್ಗುಸನ್
153.30 - ಉಮ್ರಾನ್ ಮಲಿಕ್
153.10 - ಉಮ್ರಾನ್ ಮಲಿಕ್
152.8 - ಉಮ್ರಾನ್ ಮಲಿಕ್
152.60 - ಲ್ಯುಕಿ ಫರ್ಗುಸನ್
152.60 - ಉಮ್ರಾನ್ ಮಲಿಕ್

SRH vs GT: ತಾಳ್ಮೆ ಕಳೆದುಕೊಂಡು ಉಗ್ರಾವತಾರ ತಾಳಿದ ಮುರಳೀಧರನ್: ಅಭಿಮಾನಿಗಳು ಶಾಕ್: ವಿಡಿಯೋ

ಫರ್ಗುಸನ್‌ಗೆ ಉಮ್ರಾನ್ ಮಲ್ಲಿಕ್ ಚಾಲೆಂಜ್‌

ಫರ್ಗುಸನ್‌ಗೆ ಉಮ್ರಾನ್ ಮಲ್ಲಿಕ್ ಚಾಲೆಂಜ್‌

ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ವೇಗದ ಬೌಲರ್ ಆಗಿರುವ ಉಮ್ರಾನ್ ಮಲ್ಲಿಕ್‌ ಐಪಿಎಲ್ 2022ರಲ್ಲಿ ಲ್ಯುಕಿ ಫರ್ಗುಸನ್‌ಗೆ ಚಾಲೆಂಜ್ ಹಾಕಿದ್ದಾರೆ. ಸತತವಾಗಿ 153kmph ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಈತ ಕಿವೀಸ್ ವೇಗಿ ಎದುರು ಟಕ್ಕರ್ ನೀಡಬಲ್ಲರು.

ಎಸ್‌ಆರ್‌ಎಚ್‌ನ ಬೌಲಿಂಗ್ ಅಸ್ತ್ರವಾಗಿರುವ ಈತನಿಗೆ ಬೌಲಿಂಗ್ ಕೋಚ್ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್‌ಸ್ಟೇನ್ ತುಂಬಾನೆ ಸಲಹೆಗಳನ್ನ ನೀಡಿದ್ದಾರೆ. ಡೇಲ್ ಸ್ಟೇನ್‌ ಮಾರ್ಗದರ್ಶನದಲ್ಲಿ 150kmph ವೇಗದಲ್ಲಿ ಬೌಲಿಂಗ್ ಯಾರ್ಕರ್ ಹಾಕುವುದನ್ನ ಚೆನ್ನಾಗಿ ಕಲಿತಿದ್ದಾರೆ.

IPL 2022: ಗುಜರಾತ್ ಟೈಟನ್ಸ್‌ ಅಬ್ಬರ, ಅಂಕಪಟ್ಟಿಯಲ್ಲಿ ಸ್ಥಾನ ಮತ್ತಷ್ಟು ಭದ್ರ

154-155kmph ಬೌಲಿಂಗ್ ಮಾಡುವ ಗುರಿ

154-155kmph ಬೌಲಿಂಗ್ ಮಾಡುವ ಗುರಿ

ಈಗಾಗಲೇ ಎಸ್‌ಆರ್‌ಎಚ್ ಪರ 15 ವಿಕೆಟ್ ಪಡೆದಿರುವ ಉಮ್ರಾನ್ ಮಲ್ಲಿಕ್ 8 ಪಂದ್ಯಗಳಲ್ಲಿ ಮಿಂಚಿನ ಬೌಲಿಂಗ್ ಮಾಡಿದ್ದಾರೆ. ಈತನ ಫಾಸ್ಟೆಸ್ಟ್‌ ಬೌಲಿಂಗ್ 153.3kmph ಆಗಿದ್ದು, 154kmph ವೇಗದ ಬೌಲಿಂಗ್ ದಾಟುವ ಆಸೆ ಹೊಂದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಅವರ ಮೂರು ವಿಕೆಟ್, ಅದ್ರಲ್ಲೂ ಕೊನೆಯ ಓವರ್‌ನಲ್ಲಿ ವಿಕೆಟ್ ಬೇಟೆಯಡಿದ್ದು, ಡೆತ್ ಓವರ್‌ಗಳಲ್ಲಿ ಐಪಿಎಲ್‌ನ ವೇಗಿಯ ಅತ್ಯುತ್ತಮ ಬೌಲಿಂಗ್ ಆಗಿ ಉಳಿದಿದೆ.

ಆ ವೇಗವನ್ನು ಖಂಡಿತಾ ಸಾಧಿಸಲಿದ್ದೇನೆ: ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದ ಉಮ್ರಾನ್ ಹೇಳಿಕೆ!

ಐಪಿಎಲ್‌ನ ಅತ್ಯಂತ ವೇಗದ ಬೌಲಿಂಗ್ ಯಾರ ಹೆಸರಲ್ಲಿದೆ?

ಐಪಿಎಲ್‌ನ ಅತ್ಯಂತ ವೇಗದ ಬೌಲಿಂಗ್ ಯಾರ ಹೆಸರಲ್ಲಿದೆ?

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ಸಾಧನೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್‌ 157.71kmph ವೇಗದಲ್ಲಿ ಬೌಲಿಂಗ್ ಮಾಡಿದ್ದು, ಇಲ್ಲಿಯವರೆಗಿನ ದಾಖಲೆಯಾಗಿದೆ.

ಶಾನ್ ಟೈಟ್ : 157.71 kmph ರಾಜಸ್ಥಾನ್ ರಾಯಲ್ಸ್
ಎನ್ರಿಕ್ ನಾರ್ಟ್ಜೆ: 156.22 kmph ಡೆಲ್ಲಿ ಕ್ಯಾಪಿಟಲ್ಸ್‌
ಡೇಲ್ ಸ್ಟೇಯ್ನ್‌: 154.40 kmph ಡೆಕ್ಕನ್ ಚಾರ್ಜರ್ಸ್
ಕಗಿಸೊ ರಬಾಡ: 154.23 kmph ಡೆಲ್ಲಿ ಕ್ಯಾಪಿಟಲ್ಸ್
ಲ್ಯುಕಿ ಫರ್ಗುಸನ್: 153.90 kmph ಗುಜರಾತ್ ಟೈಟಾನ್ಸ್

Story first published: Thursday, April 28, 2022, 15:34 [IST]
Other articles published on Apr 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+