Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs RCB: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್‌, ಪಿಚ್ ರಿಪೋರ್ಟ್‌

RCB VS SRH

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಆರ್‌ಸಿಬಿ ಕಳೆದ ಪಂದ್ಯದಲ್ಲಿ ಚೆನ್ನೈ ತಂಡವನ್ನ ಮಣಿಸಿ ಮುನ್ನುಡಿಯಿಟ್ಟಿದೆ. ವಿಶೇಷ ಅಂದ್ರೆ ಈ ಪಂದ್ಯದಲ್ಲಿ ಗೋ ಗ್ರೀನ್ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ಮತ್ತೊಂದೆಡೆ ಸತತ ಮೂರು ಪಂದ್ಯಗಳ ಸೋಲಿನ ಮೂಲಕ ಕಂಗಾಲಾಗಿರುವ ಕೇನ್‌ ವಿಲಿಯಮ್ಸನ್ ನಾಯಕತ್ವದ ಎಸ್‌ಆರ್‌ಎಚ್ ತಂಡವು ಹೇಗಾದ್ರೂ ಮಾಡಿ ಗೆಲುವಿನ ಟ್ರ್ಯಾಕ್‌ಗೆ ಮರಳಬೇಕೆಂದು ಕಾತುರಗೊಂಡಿದೆ. ಹೀಗಾಗಿ ಸೂಪರ್ ಸಂಡೆಯಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ರೋಚಕತೆ ಹೆಚ್ಚಿಸಿದೆ.

ಲೆಕ್ಕಾಚಾರ

ಲೆಕ್ಕಾಚಾರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 11 ಪಂದ್ಯಗಳಲ್ಲಿ ಆರು ಗೆಲುವು, 5 ಪಂದ್ಯಗಳ ಸೋಲಿನಿಂದಾಗಿ 12 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದ್ರಾಬಾದ್ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಮತ್ತು ಸೋಲನ್ನ ಕಾಣುವ ಮೂಲಕ 10 ಪಾಯಿಂಟ್ಸ್‌ಗಳೊಂದಿಗೆ ಆರನೇ ಸ್ಥಾನಕ್ಕೆ ಕುಸಿದಿದೆ.

ಐಪಿಎಲ್ 2022: SRH ವಿರುದ್ಧ ಹಸಿರು ಜೆರ್ಸಿ ಧರಿಸಿ ಆಡಲಿರುವ ಆರ್‌ಸಿಬಿ

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿನ ಈ ಋತುವಿನ ಹಿಂದಿನ ಕೆಲವು ಪಂದ್ಯಗಳಲ್ಲಿ ನೋಡಿದ್ರೆ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ. ಇದು ಬೌಲರ್‌ಗಳು ತಮ್ಮ ಲಯವನ್ನು ಕಂಡುಕೊಳ್ಳುವುದು ನಿಜವಾಗಿಯೂ ಸವಾಲಿನ ಟ್ರ್ಯಾಕ್‌ ಆಗಿದೆ. ಇಬ್ಬನಿಯ ಅಂಶವು ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆಯೊಂದಿಗೆ ಸ್ಕೋರ್ 170-180 ರ ಆಸುಪಾಸಿನಲ್ಲಿ ಉಳಿಯುತ್ತದೆ. ಹೀಗಾಗಿ ಫ್ಯಾಂಟೆಸಿ ಅಂತಹ ಗೇಮ್‌ಗಳಲ್ಲಿ ಹೆಚ್ಚಿನ ಬ್ಯಾಟರ್‌ಗಳನ್ನ ಹೊಂದಲು ಇದು ದಾರಿಯಾಗಿದೆ.

ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್

ಉಭಯ ತಂಡಗಳ ಕೀ ಪ್ಲೇಯರ್ಸ್

ಉಭಯ ತಂಡಗಳ ಕೀ ಪ್ಲೇಯರ್ಸ್

ಸನ್‌ರೈಸರ್ಸ್ ಹೈದ್ರಾಬಾದ್ ಪರ ಕೇನ್ ವಿಲಿಯಮ್ಸನ್, ಏಡನ್ ಮಕ್ರಾಮ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೀ ಪ್ಲೇಯರ್ ಆಗಿದ್ದಾರೆ. ಅದೇ ಆರ್‌ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ ಜೊತೆಗೆ ಜೋಶ್ ಹೇಜಲ್‌ವುಡ್‌ ಪ್ರಮುಖ ಆಟಗಾರರಾಗಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ನಾಯಕನಾಗಿ ನೇಮಕವಾಗುತ್ತಿದ್ದಂತೆಯೇ ಕೌಂಟಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಬೆನ್ ಸ್ಟೋಕ್ಸ್

ಎಸ್‌ಆರ್‌ಎಚ್‌ ಸಂಭಾವ್ಯ ಪ್ಲೇಯಿಂಗ್ 11

ಎಸ್‌ಆರ್‌ಎಚ್‌ ಸಂಭಾವ್ಯ ಪ್ಲೇಯಿಂಗ್ 11

1. ಅಭಿಷೇಕ್ ಶರ್ಮಾ
2. ಕೇನ್ ವಿಲಿಯಮ್ಸನ್ (ನಾಯಕ)
3. ರಾಹುಲ್ ತ್ರಿಪಾಠಿ
4. ಐಡೆನ್ ಮಾರ್ಕ್ರಾಮ್
5. ನಿಕೋಲಸ್ ಪೂರನ್ (ವಿಕೆಟ್ ಕೀಪರ್)
6. ಶಶಾಂಕ್ ಸಿಂಗ್
7. ವಾಷಿಂಗ್ಟನ್ ಸುಂದರ್/ಶ್ರೇಯಸ್ ಗೋಪಾಲ್
8. ಸೀನ್ ಅಬಾಟ್
9. ಭುವನೇಶ್ವರ್ ಕುಮಾರ್
10. ಉಮ್ರಾನ್ ಮಲಿಕ್
11. ಟಿ ನಟರಾಜನ್/ಕಾರ್ತಿಕ್ ತ್ಯಾಗಿ

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11

1. ಫಾಫ್ ಡು ಪ್ಲೆಸಿಸ್ (ನಾಯಕ)
2. ವಿರಾಟ್ ಕೊಹ್ಲಿ
3. ರಜತ್ ಪಾಟಿದಾರ್
4. ಗ್ಲೆನ್ ಮ್ಯಾಕ್ಸ್‌ವೆಲ್
5. ಮಹಿಪಾಲ್ ಲೊಮ್ರೋರ್
6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
7. ಶಹಬಾಜ್ ಅಹ್ಮದ್
8. ವನಿಂದು ಹಸರಂಗ
9. ಹರ್ಷಲ್ ಪಟೇಲ್
10. ಮೊಹಮ್ಮದ್ ಸಿರಾಜ್
11. ಜೋಶ್ ಹೇಜಲ್‌ವುಡ್‌

Story first published: Saturday, May 7, 2022, 13:09 [IST]
Other articles published on May 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+