
ಐಸಿಸಿ ಟಿ20 ವಿಶ್ವಕಪ್ ಮೇಲೆ ಡಿಕೆ ಕಣ್ಣು
ಈತ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಿದ್ದು 2019ರ ಐಸಿಸಿ ವಿಶ್ವಕಪ್ ಸೆಮಿಫೈನಲ್. 36 ವರ್ಷದ ದಿನೇಶ್ ಕಾರ್ತಿಕ್ ವಯಸ್ಸಾಗುತ್ತಿದೆ ಎಂಬುದನ್ನ ಮರೆಮಾಚುವಷ್ಟು ಪ್ರದರ್ಶನ ನೀಡುತ್ತಿದ್ದಾರೆ. ಇದ ಜೊತೆಗೆ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಮೇಲೂ ಸಹ ಕಣ್ಣಿಟ್ಟಿದ್ದಾರೆ.
IPL 2022: ಸಾಲು ಸಾಲು ಸೋಲು ಕಂಡ ಮುಂಬೈ ಇಂಡಿಯನ್ಸ್ ಗೆಲ್ಲಲು ಈತ ಕಣಕ್ಕಿಳಿಯಲೇಬೇಕು ಎಂದ ಸೆಹ್ವಾಗ್!

ರಾಜಸ್ತಾನ್ ರಾಯಲ್ಸ್ ವಿರುದ್ಧ ಮಿಂಚಿದ ಕಾರ್ತಿಕ್
ದಿನೇಶ್ ಕಾರ್ತಿಕ್ ಕೆಕೆಆರ್ ತಂಡದಲ್ಲಿ ನಾಯಕತ್ವ ಜವಾಬ್ದಾರಿ ಜೊತೆಗೆ ಆಟಗಾರನಾಗಿಯೂ ತಂಡವನ್ನ ಮುನ್ನಡೆಸಿದ್ದರು. ಬೆಂಗಳೂರು ತಂಡ ಸೇರಿದ ಬಳಿಕ ಅವರ ಆಟದ ರಿದಂ ಬದಲಾಗಿ ಹೋಗಿದೆ. ಕಳೆದ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಮದ್ಯದಲ್ಲಿ 23 ಎಸೆತಗಳಲ್ಲಿ 44 ರನ್ ಕಲೆಹಾಕಿದ ಡಿಕೆ ಶಬಾಜ್ ಅಹ್ಮದ್ ಜೊತೆಗೂಡಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.
ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 170 ರನ್ ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳನ್ನ ಬಹುಬೇಗ ಕಳೆದುಕೊಂಡಿತು. 87 ರನ್‌ಗಳಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನ ಸಹ ಕಳೆದುಕೊಂಡಿತು. ಈ ವೇಳೆತ ತಂಡಕ್ಕೆ ಆಧಾರವಾಗಿದ್ದೇ ಶಬಾಜ್ ನದೀಮ್ ಮತ್ತು ದಿನೇಶ್ ಕಾರ್ತಿಕ್.
ಶಬಾಜ್ ನದೀಮ್ 26 ಎಸೆತಗಳಲ್ಲಿ ಮೂರು ಸಿಕ್ಸರ್ ಸಹಿತ 45 ರನ್‌ಗಳಿಸಿ ಔಟಾದ್ರೆ, ಉತ್ತಮ ಆಟವಾಡಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ಅಜೇಯರಾಗಿ 44 ರನ್ ಕಲೆಹಾಕಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು. ಇವರ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ಏಳು ಬೌಂಡರಿಗಳಿದ್ದವು. ದಿನೇಶ್ ಕಾರ್ತಿಕ್ ತಂಡವನ್ನ ಗೆಲುವಿನತ್ತ ಕೊಂಡೊಯ್ದ ರೀತಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡ ಒಲಿದುಬಂತು.
DC vs LSG: ವಿನ್ನಿಂಗ್ ಸಿಕ್ಸರ್ ಬಾರಿಸಿ ಕೊಹ್ಲಿ ಸ್ಟೈಲ್ ಕಾಪಿ ಮಾಡಿದ ಆಯುಷ್ ಬದೋನಿ; ವಿಡಿಯೋ ವೈರಲ್

ಹಳೆಯ ಗೆಳೆಯನ ಜೊತೆಗೂಡಿದ ಮ್ಯಾಕ್ಸಿ
ದಿನೇಶ್ ಕಾರ್ತಿಕ್ ಐಪಿಎಲ್ 2022ರಲ್ಲಿ ಆರ್‌ಸಿಬಿಯನ್ನ ಪ್ರತಿನಿಧಿಸುತ್ತಿದ್ದಾರೆ. ತನ್ನ ಬೊಂಬಾಬ್ ಬ್ಯಾಟಿಂಗ್ ಮೂಲಕ ಆಡುತ್ತಿರುವ ಡಿಕೆ ಇದುವರೆಗೆ ವಿಕೆಟ್ ಒಪ್ಪಿಸಿಲ್ಲ. ಅದ್ರಲ್ಲೂ ವಿಶೇಷ ಅಂದ್ರೆ ಆರ್‌ಸಿಬಿಯ ಪ್ರಮುಖ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಮತ್ತೊಮ್ಮೆ ಡ್ರೆಸ್ಸಿಂಗ್ ರೂಂ ಅವಕಾಶ ಪಡೆದಿದ್ದಾರೆ.
ಕೊನೆಯ ಬಾರಿಗೆ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. ಆದ್ರೀಗ 9 ವರ್ಷದ ಬಳಿಕ ಈ ಜೋಡಿ ಒಂದಾಗಿದೆ.
"ಹಳೆಯ ಗೆಳೆಯರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್ ಜೊತೆಗೆ ಬ್ಯಾಟಿಂಗ್ ಮಾಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ" ಎಂದು ಮ್ಯಾಕ್ಸ್‌ವೆಲ್ RCB 'ಬೋಲ್ಡ್ ಡೈರೀಸ್' ಗೆ ತಿಳಿಸಿದರು.
ಐಪಿಎಲ್ ಪಾಯಿಂಟ್ಸ್ ಟೇಬಲ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನೇಶ್ ಕಾರ್ತಿಕ್ ಜೊತೆಗೆ ಆಡುವುದು ಖುಷಿಯ ವಿಚಾರ: ಮ್ಯಾಕ್ಸ್‌ವೆಲ್
ನಾನು ಮತ್ತು ಡಿಕೆ ಮುಂಬೈ ಇಂಡಿಯನ್ಸ್ ಪರ ಕೊನೆಯದಾಗಿ ಒಟ್ಟಾಗಿ ಆಡಿದ್ದೇವೆ. ಇದೀಗ 9 ವರ್ಷದ ಬಳಿಕ ನಾವಿಬ್ಬರು ಮತ್ತೆ ಒಂದೇ ತಂಡದ ಭಾಗವಾಗಿದ್ದೇವೆ. ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಕೊಡುಗೆ ನೀಡುವ ಆಶಯ ಹೊಂದಿದ್ದೇವೆ. ಇದೀಗ ನಮ್ಮ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದ್ದು, ದಿನೇಶ್ ಕಾರ್ತಿಕ್ ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡುತ್ತಿದ್ದಾರೆ. ಡಿಕೆ ಜೊತೆಗೆ ನಾನು ಉತ್ತಮ ಸಾಥ್ ಕೊಡಬೇಕೆಂಬ ಆಶಯ ಹೊಂದಿದ್ದೇನೆ ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.


Click it and Unblock the Notifications












