
ಜಾಸ್ ಬಟ್ಲರ್ (ರಾಜಸ್ತಾನ್ ರಾಯಲ್ಸ್)
ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರ, ಇಂಗ್ಲೆಂಡ್ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ ಹೊಸ ಋತುವಿನಲ್ಲಿ ಶತಕ ಸಿಡಿಸುವ ಸಾಧ್ಯತೆ ಇದೆ. ಕಳೆದ ಋತುವಿನಲ್ಲಿ ಅವರು ರಾಯಲ್ಸ್‌ನೊಂದಿಗೆ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 60 ಎಸೆತಗಳಲ್ಲಿ 124 ರನ್ ಗಳಿಸಿದ್ದರು.
ಈ ವರ್ಷ ಮತ್ತೆ ರಾಯಲ್ಸ್ ಪರ ಆರಂಭಿಕರಾಗಿ ಆಡುವ ಸಾಧ್ಯತೆ ಇರುವ ಬಟ್ಲರ್, ಮತ್ತೊಂದು ಶತಕ ಬಾರಿಸುವ ಸಾಧ್ಯತೆ ಇದೆ.

ಶಿಖರ್ ಧವನ್ (ಪಂಜಾಬ್ ಕಿಂಗ್ಸ್)
ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಶಿಖರ್ ಧವನ್ ಈ ಬಾರಿ ಪಂಜಾಬ್ ಕಿಂಗ್ಸ್ ಪರ ಪದಾರ್ಪಣೆ ಮಾಡುತ್ತಿರುವ ಭಾರತದ ಅನುಭವಿ ಆರಂಭಿಕ ಆಟಗಾರನಾಗಿದ್ದಾನೆ. ಧವನ್ ಈ ಬಾರಿ ಸೀಸನ್‌ನ್ಲಿ ಶತಕ ಸಿಡಿಸಬಲ್ಲ ಮತ್ತೊಬ್ಬ ಆಟಗಾರ. ಅವರು ಪ್ರಸ್ತುತ ಭಾರತೀಯ ಟಿ20 ತಂಡದ ಭಾಗವಾಗಿಲ್ಲದಿದ್ದರೂ, ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಐಪಿಎಲ್ ಟಾಪ್ ಸ್ಕೋರರ್‌ಗಾಗಿ ಆರೆಂಜ್ ಕ್ಯಾಪ್‌ಗಾಗಿ ಧವನ್ ಯಾವಾಗಲೂ ಸ್ಪರ್ಧೆಯಲ್ಲಿರುತ್ತಾರೆ. 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಧವನ್ ಶತಕ ಗಳಿಸಲು ಮತ್ತು ಆರೆಂಜ್ ಕ್ಯಾಪ್ ತೆಗೆದುಕೊಳ್ಳಲು ಮತ್ತೆ ಪ್ರಯತ್ನಿಸಬಹುದು. ಆದ್ರೆ ನಾಯಕತ್ವ ಮಾತ್ರ ಮಯಾಂಕ್ ಅಗರ್ವಾಲ್ ಪಾಲಾಗಿದೆ.
ಆರ್‌ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಸಂದೇಶ: ಬೆಂಗಳೂರಿನಲ್ಲಿ ನಡೆಯಲಿದೆ ಮಾ.12ಕ್ಕೆ Unbox Event

ಕೆ.ಎಲ್ ರಾಹುಲ್ (ಲಕ್ನೋ ಸೂಪರ್ ಜಾಯಿಂಟ್ಸ್)
ಟಿ20 ಮಾದರಿಯ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಮತ್ತು ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕ ಕೆ.ಎಲ್ ರಾಹುಲ್ ಶತಕ ಬಾರಿಸುವ ಸಾಧ್ಯತೆಯಿರುವ ಮತ್ತೊಬ್ಬ ಆಟಗಾರ. ಅವರು ಈ ಹಿಂದೆ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದಾಗ ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದರು. ರಾಹುಲ್ ಈಗ ಲಕ್ನೋದಲ್ಲಿ ರನ್ ಚೇಸ್ ಮುಂದುವರಿಸಲು ನೋಡುತ್ತಿದ್ದಾರೆ.
ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ ಎರಡು ಶತಕಗಳನ್ನು ಗಳಿಸಿದ್ದಾರೆ. ರಾಹುಲ್ ಅವರ ಗರಿಷ್ಠ ಸ್ಕೋರ್ ಅಜೇಯ 132 ರನ್.
ಕೌಂಟಿಯಲ್ಲಿ ಆಡಲು ಸಸೆಕ್ಸ್ ಪರ ಒಪ್ಪಂದ ಮಾಡಿಕೊಂಡ ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ

ರುತುರಾಜ್ ಗಾಯಕ್ವಾಡ್ (ಚೆನ್ನೈ ಸೂಪರ್ ಕಿಂಗ್ಸ್)
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ಮತ್ತು ಕಳೆದ ಋತುವಿನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ಮುಂದಿನ ಸೀಸನ್‌ನಲ್ಲೂ ತಮ್ಮ ರನ್ ಅಬ್ಬರವನ್ನ ಮುಂದುವರಿಸುವ ಸಾಧ್ಯತೆಯಿದೆ. ಕಳೆದ ಋತುವಿನಲ್ಲಿ ಅವರ ಅದ್ಭುತ ಪ್ರದರ್ಶನದೊಂದಿಗೆ, ರುತುರಾಜ್ ದೇಶದ ಮುಂದಿನ ಬ್ಯಾಟಿಂಗ್ ಸೂಪರ್‌ಸ್ಟಾರ್ ಆಗಿದ್ದಾರೆ.
ಕಳೆದ ಋತುವಿನಲ್ಲಿ ಅವರು ತಮ್ಮ ವೃತ್ತಿಜೀವನದ ಚೊಚ್ಚಲ ಶತಕವನ್ನು ಸಹ ಗಳಿಸಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರುತುರಾಜ್ 101 ರನ್‌ಗಳಿಸಿದ್ದು ಸೀಸನ್‌ನಲ್ಲಿ ಒಟ್ಟಾರೆ 601 ರನ್ ಗಳಿಸಿದ್ದರು. ಸುದೀರ್ಘ ಇನ್ನಿಂಗ್ಸ್‌ಗಳನ್ನು ಆಡಲು ಇಷ್ಟಪಡುವ ರುತುರಾಜ್ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್)
ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಮೂಲ್ಯ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ ಶತಕ ಬಾರಿಸುವ ಸಾಮರ್ಥ್ಯ ಹೊಂದಿರುವ ಮತ್ತೊಬ್ಬ ಆಟಗಾರ. ಇಶಾನ್ ಕಿಶನ್ ಅವರನ್ನು ಮುಂಬೈ 15.25 ಕೋಟಿ ರೂ.ಗೆ ಮರಳಿ ಮುಂಬೈಗೆ ಕರೆತಂದಿತ್ತು. ಕಳೆದ ಋತುವಿನಲ್ಲಿ ಮುಂಬೈ ಪರ ಕೆಲವು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದರು.
ಮುಂಬರುವ ಋತುವಿನಲ್ಲಿ ಇಶಾನ್ ನಾಯಕ ರೋಹಿತ್ ಶರ್ಮಾ ಅವರ ಆರಂಭಿಕ ಜೋಡಿಯಾಗಿ ಆಡುವ ಸಾಧ್ಯತೆಯಿದೆ. ಪವರ್‌ಪ್ಲೇ ಓವರ್‌ಗಳಲ್ಲಿ ವೇಗ ಮತ್ತು ಸ್ಪಿನ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಸ್ಫೋಟಕ ಹೊಡೆತದ ಸಾಮರ್ಥ್ಯ ಹೊಂದಿರುವ ಆಟಗಾರ. ಐಪಿಎಲ್‌ನಲ್ಲಿ ಇಶಾನ್ ಕಿಶನ್ ಇನ್ನೂ ಶತಕ ಸಿಡಿಸಿಲ್ಲ. ಒಮ್ಮೆ ಶತಕದ ಹತ್ತಿರ ಬಂದಿದ್ದ ಕಿಶನ್ 2020 ರಲ್ಲಿ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 99 ರನ್ ಗಳಿಸಿದರು. ಕಳೆದ ಋತುವಿನಲ್ಲಿ ಇಶಾನ್ ಕಿಶನ್ ಗರಿಷ್ಠ 84 ರನ್ ಗಳಿಸಿದ್ದರು.


Click it and Unblock the Notifications












