IPL 2022: ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐವರು ಪ್ಲೇಯರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಗದ್ದುಗೆಗೇರಿದೆ. ಆಟಗಾರರ ಹರಾಜಿನ ನಂತರ ಯಾರೂ ಊಹಿಸದ ರೀತಿಯಲ್ಲಿ ಗುಜರಾತ್ ಪ್ರಶಸ್ತಿ ಗೆದ್ದು ಬೀಗಿದೆ. ರಾಜಸ್ತಾನ್ ರಾಯಲ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ್ರು. ರಾಜಸ್ತಾನ್ ಪರ ಇಡೀ ಸೀಸನ್‌ನಲ್ಲಿ ರನ್ ಶಿಖರವನ್ನೇ ನಿರ್ಮಿಸಿದ ಜಾಸ್ ಬಟ್ಲರ್‌ಗೆ ಆರೆಂಜ್ ಕ್ಯಾಪ್ ಪ್ರಶಸ್ತಿ ಒಲಿದು ಬಂದಿದ್ದು, ಅದೇ ತಂಡದ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಪರ್ಪಲ್ ಕ್ಯಾಪ್ ಮುಡಿಗೇರಿದೆ.
ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಐವರು ಬ್ಯಾಟ್ಸ್‌ಮನ್ ಯಾರು? ಎಷ್ಟು ರನ್ ಕಲೆಹಾಕಿದರು ಎಂಬುದನ್ನ ಈ ಕೆಳಗೆ ನೀಡಲಾಗಿದೆ.

ಶುಭಮನ್ ಗಿಲ್
ಗುಜರಾತ್ ಟೈಟನ್ಸ್ ತಂಡದ ಯುವ ಓಪನಿಂಗ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಈ 2022ರ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣನಾದ ಶುಭಮನ್ ಗಿಲ್ ಇಡೀ ಸೀಸನ್‌ನಲ್ಲಿ 483 ರನ್ ಕಲೆಹಾಕಿದ್ದಾರೆ.
16 ಪಂದ್ಯಗಳಲ್ಲಿ 34.50 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಶುಭಮನ್ ಗಿಲ್ 132ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ 483 ರನ್ ದಾಖಲಿಸಿದ್ರು. ಈತ ಒಟ್ಟು 4 ಅರ್ಧಶತಕ ದಾಖಲಿಸಿದ್ದು, 96 ರನ್ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಹಾರ್ದಿಕ್ ಪಾಂಡ್ಯ
ಗುಜರಾತ್ ಟೈಟನ್ಸ್ ತಂಡದ ನಾಯಕ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2022ರ ಸೀಸನ್‌ನಲ್ಲಿ ಬೊಂಬಾಟ್ ಆಗಿ ಕಂಬ್ಯಾಕ್ ಮಾಡಿದ್ದಾರೆ. 2021ರ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಿಂದಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದ ಹಾರ್ದಿ್ಕ್, ಟಿ20 ವಿಶ್ವಕಪ್‌ನಲ್ಲಿ ಅಷ್ಟಾಗಿ ಮಿಂಚಿರಲಿಲ್ಲ. ಇಂಜ್ಯುರಿಯಾಗಿ ಹಲವು ಸಮಯ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಐಪಿಎಲ್ 2022ರ ಸೀಸನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, 15 ಪಂದ್ಯಗಳಲ್ಲಿ 44.27 ಬ್ಯಾಟಿಂಗ್ ಸರಾಸರಿ, 131ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್ ಮೂಲಕ 487 ರನ್ ಕಲೆಹಾಕಿದ್ದಾರೆ. ಈತನ ವೈಯಕ್ತಿಕ ಬೆಸ್ಟ್ 87 ರನ್ ಆಗಿದ್ದು ಹಲವು ಪಂದ್ಯದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
IPL 2022: ಈ ಥರ ಇದ್ರೆ ಗುಜರಾತ್ ಅಲ್ಲದೇ ಆರ್‌ಸಿಬಿ ಕಪ್ ಗೆಲ್ಲೋಕಾಗುತ್ತಾ? ಶುರು ಫಿಕ್ಸಿಂಗ್ ಅನುಮಾನ!

ಕ್ವಿಂಟನ್ ಡಿಕಾಕ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್ ಕ್ವಿಂಟನ್ ಡಿಕಾಕ್ ಈ ಸೀಸನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಈತ ಅತಿ ಹೆಚ್ಚು ಕಲೆಹಾಕಿದ ಬ್ಯಾಟರ್‌ಗಳಲ್ಲಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.
ಕೆ.ಎಲ್ ರಾಹುಲ್ ಜೊತೆಗೂಡಿ ದಾಖಲೆಯ ದ್ವಿಶತಕದ ಜೊತೆಯಾಟವಾಡಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 15 ಪಂದ್ಯಗಳಲ್ಲಿ 36.29ರ ಬ್ಯಾಟಿಂಗ್ ಸರಾಸರಿಯಲ್ಲಿ 508 ರನ್ ಸಿಡಿಸಿದ್ದಾರೆ. ಈತನ ಇನ್ನಿಂಗ್ಸ್‌ನಲ್ಲಿ 3 ಅರ್ಧಶತಕ ಮತ್ತು 1 ಶತಕ ಸಹ ಒಳಗೊಂಡಿದೆ. ಜೊತೆಗೆ 148+ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಸಹ ಒಳಗೊಂಡಿದೆ.
IPL 2022: ಟ್ರೋಫಿ ಗೆಲ್ಲದಿದ್ರೂ, ಯುಜವೇಂದ್ರ ಚಹಾಲ್ ಮುಡಿಗೆ ಪರ್ಪಲ್ ಕ್ಯಾಪ್

ಕೆ.ಎಲ್ ರಾಹುಲ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಎಲಿಮಿನೇಟರ್ ಪಂದ್ಯದವರೆಗೂ ತಂಡದ ಪರ ಅಮೋಘ ಪ್ರದರ್ಶನ ನೀಡುತ್ತಾ ಸೀಸನ್ ಕೊನೆಗೊಳಿಸಿದರು. 15 ಪಂದ್ಯಗಳಲ್ಲಿ ಅಬ್ಬರದ ಆಟವಾಡಿದ ಕೆ.ಎಲ್ 135+ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 616 ರನ್ ಕಲೆಹಾಕಿದರು. 51.33ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ ಈತ 2 ಶತಕ ಮತ್ತು 4 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಜೋಸ್ ಬಟ್ಲರ್
ಐಪಿಎಲ್ 2022ರ ಸೀಸನ್‌ನಲ್ಲಿ ಅತ್ಯಮೋಘ ಆಟವಾಡಿದ ಬ್ಯಾಟರ್ ಅಂದ್ರೆ ಅದು ಜೋಸ್ ಬಟ್ಲರ್. ಇಂಗ್ಲೆಂಡ್ ಮೂಲದ ಬ್ಯಾಟರ್ ರಾಜಸ್ತಾನ್ ರಾಯಲ್ಸ್ ಪರ ರನ್ ಹೊಳೆಯನ್ನೇ ಹರಿಸಿದ್ರು. ಬಟ್ಲರ್ ಒಂದು ಋತುವಿನಲ್ಲಿ 850 ರನ್ ಗಳಿಸಿದ ಎರಡನೇ ಆಟಗಾರರಾಗಿದ್ದು, ಕೊಹ್ಲಿ ನಂತರದ ಸ್ಥಾನ ಪಡೆದಿದ್ದಾರೆ.
ಬಟ್ಲರ್ 17 ಪಂದ್ಯಗಳಿಂದ 863 ರನ್ ಕಲೆಹಾಕಿದ್ದು, 4 ಶತಕಗಳು ಮತ್ತು 7 ಅರ್ಧಶತಕಗಳನ್ನು ಗಳಿಸಿದ್ದಾರೆ. ಜೊತೆಗೆ 152 ರ ಸ್ಟ್ರೈಕ್ ರೇಟ್‌ನಲ್ಲಿ ಹಾಗೂ ಅದ್ಭುತ 81 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಬಟ್ಲರ್ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications