ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಈ ಥರ ಇದ್ರೆ ಗುಜರಾತ್ ಅಲ್ಲದೇ ಆರ್‌ಸಿಬಿ ಕಪ್ ಗೆಲ್ಲೋಕಾಗುತ್ತಾ? ಶುರು ಫಿಕ್ಸಿಂಗ್ ಅನುಮಾನ!

IPL 2022: Is final match between GT and RR fixed? Fans trolled GT on twitter after the match
IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada

ನಿನ್ನೆ ( ಮೇ 29 ) ಗುಜರಾತ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.

IPL 2022 Awards Full List : ಆರೆಂಜ್, ಪರ್ಪಲ್ ಕ್ಯಾಪ್, ಫೇರ್‌ಪ್ಲೇ ಅವಾರ್ಡ್ ಯಾರ ಪಾಲು? ಗೆದ್ದವರಿಗೆ ಸಿಕ್ಕ ಹಣವೆಷ್ಟು?IPL 2022 Awards Full List : ಆರೆಂಜ್, ಪರ್ಪಲ್ ಕ್ಯಾಪ್, ಫೇರ್‌ಪ್ಲೇ ಅವಾರ್ಡ್ ಯಾರ ಪಾಲು? ಗೆದ್ದವರಿಗೆ ಸಿಕ್ಕ ಹಣವೆಷ್ಟು?

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ದೊಡ್ಡ ಯಶಸ್ಸು ಸಾಧಿಸಿರುವ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೇ ಈ ಬಾರಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಲಾಗದೇ ವಿಫಲವಾಗಿದ್ದರೆ, ಇದೇ ಮೊದಲ ಬಾರಿಗೆ ಐಪಿಎಲ್ ಆಡಲು ಕಣಕ್ಕಿಳಿದ ಗುಜರಾತ್ ಟೈಟನ್ಸ್ ತಂಡ ಮಾತ್ರ ಲೀಗ್ ಹಂತದಲ್ಲಿ ಎಲ್ಲಾ ತಂಡಗಳಿಗಿಂತ ಹೆಚ್ಚು ಪಂದ್ಯಗಳಲ್ಲಿ ಗೆದ್ದು, ಪ್ಲೇ ಆಫ್ ಸುತ್ತಿನಲ್ಲಿ ಒಂದೇ ಒಂದು ಪಂದ್ಯವಾಡುವ ಮೂಲಕ ಫೈನಲ್ ಪ್ರವೇಶವನ್ನು ಪಡೆದುಕೊಂಡಿತು. ಹೀಗೆ ಟೂರ್ನಿಯುದ್ದಕ್ಕೂ ಕಡಿಮೆ ಪಂದ್ಯಗಳಲ್ಲಿ ಸೋತು ಯಶಸ್ಸಿನ ಅಲೆಯಲ್ಲಿದ್ದ ಗುಜರಾತ್ ಟೈಟನ್ಸ್ ಇದೀಗ ಫೈನಲ್ ಪಂದ್ಯದಲ್ಲಿಯೂ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

IPL 2022: ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 5 ಉತ್ತಮ ಆಟಗಾರರು!IPL 2022: ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 5 ಉತ್ತಮ ಆಟಗಾರರು!

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ಬೌಲಿಂಗ್ ಎದುರು ಮಕಾಡೆ ಮಲಗಿತು. ಇನ್ನು ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ ಜಯಭೇರಿ ಬಾರಿಸಿತು. ಗುಜರಾತ್ ಟೈಟನ್ಸ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಎಡವದೇ ಉತ್ತಮ ಪ್ರದರ್ಶನ ನೀಡಿದ ಕಾರಣ ತಂಡ ಚಾಂಪಿಯನ್ ಆಯಿತು. ಆದರೆ ಕೆಲ ನೆಟ್ಟಿಗರು ಮಾತ್ರ ಗುಜರಾತ್ ಟೈಟನ್ಸ್ ತಂಡದ ಈ ಗೆಲುವಿನ ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವೇ ಗೆಲ್ಲಬೇಕೆಂದು ಮೊದಲೇ ಫಿಕ್ಸ್ ಆಗಿತ್ತು ಎಂದು ಈ ಕೆಳಕಂಡಂತೆ ಭಿನ್ನವಿಭಿನ್ನವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಇದ್ದ ಮೇಲೆ ಗುಜರಾತ್ ಟೈಟನ್ಸ್ ಅಲ್ಲದೇ ರಾಯಲ್ ಚಾಲೆಂಜರ್ಸ್ ಕಪ್ ಗೆಲ್ಲೋಕೆ ಆಗುತ್ತಾ?

ಇಷ್ಟೆಲ್ಲಾ ಇದ್ದ ಮೇಲೆ ಗುಜರಾತ್ ಟೈಟನ್ಸ್ ಅಲ್ಲದೇ ರಾಯಲ್ ಚಾಲೆಂಜರ್ಸ್ ಕಪ್ ಗೆಲ್ಲೋಕೆ ಆಗುತ್ತಾ?

ಅಮಿತ್ ಶಾ ಹೋಮ್ ಮಿನಿಸ್ಟರ್, ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಹಾಗೂ ಫೈನಲ್ ಪಂದ್ಯ ಆಯೋಜನೆಯಾಗಿರುವುದು ಅಹಮದಾಬಾದಿನಲ್ಲಿ. ಹೀಗಿರುವಾಗ ಗುಜರಾತ್ ಟೈಟನ್ಸ್ ತಂಡ ಕಪ್ ಗೆಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತದೆ ಎಂದು ನಿರೀಕ್ಷಿಸಲು ಆಗುತ್ತಾ ಎಂದು ನೆಟ್ಟಿಗರೋರ್ವರು ಕಾಲೆಳೆದಿದ್ದಾರೆ.

ಟಾಸ್ ವೇಳೆಯೇ ಫಿಕ್ಸಿಂಗ್ ಎಂದು ಗೊತ್ತಾಗಿತ್ತು!

ಟಾಸ್ ವೇಳೆಯೇ ಫಿಕ್ಸಿಂಗ್ ಎಂದು ಗೊತ್ತಾಗಿತ್ತು!

ಮತ್ತೋರ್ವ ನೆಟ್ಟಿಗ ಟ್ವಿಟ್ಟರ್ ವೇದಿಕೆಯಲ್ಲಿ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಆಯ್ದುಕೊಳ್ಳದೆ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಗಲೇ ಪಂದ್ಯ ಫಿಕ್ಸ್ ಆಗಿದೆ ಎಂಬುದು ಅರ್ಥವಾಗಿತ್ತು ಎಂದು ಬರೆದುಕೊಂಡಿದ್ದಾರೆ.

9 ವರ್ಷದ ಮಕ್ಕಳಿಗೂ ಇದು ಫಿಕ್ಸಿಂಗ್ ಎಂದು ತಿಳಿಯುತ್ತದೆ

9 ವರ್ಷದ ಮಕ್ಕಳಿಗೂ ಇದು ಫಿಕ್ಸಿಂಗ್ ಎಂದು ತಿಳಿಯುತ್ತದೆ

ಪಂದ್ಯ ನಡೆದದ್ದು ಗುಜರಾತ್‌ನಲ್ಲಿ, ತಂಡದ ನಾಯಕ ಗುಜರಾತಿ, ಪಂದ್ಯ ವೀಕ್ಷಿಸಲು ಅಮಿತ್ ಷಾ ಬಂದಿದ್ದರು. ಇಷ್ಟೆಲ್ಲಾ ಇದ್ದ ಮೇಲೆ ಪಂದ್ಯವನ್ನು ಗುಜರಾತ್ ಟೈಟನ್ಸ್ ಗೆಲ್ಲದೇ ಬೇರೆ ಯಾರು ಗೆಲ್ಲಲು ಸಾಧ್ಯ? ಗುಜರಾತ್ ಟೈಟನ್ಸ್ ತಂಡ ತವರಿನಲ್ಲಿ ಚಾಂಪಿಯನ್ ಆಗಿ ಟ್ರೋಫಿ ಎತ್ತಿ ಹಿಡಿಯಲು ಫಿಕ್ಸಿಂಗ್ ಮಾಡಲಾಗಿತ್ತು ಎಂಬುದನ್ನು 9 ವರ್ಷದ ಮಕ್ಕಳೂ ಸಹ ಹೇಳುತ್ತಾರೆ ಎಂದು ಬರೆದುಕೊಂಡಿದ್ದಾರೆ.


ಇಷ್ಟೇ ಅಲ್ಲದೇ ಇನ್ನೂ ನೂರಾರು ನೆಟ್ಟಿಗರು ಫಿಕ್ಸಿಂಗ್ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿದ್ದು, ಈ ಪಂದ್ಯ ಖಡಾಖಂಡಿತವಾಗಿ ಫಿಕ್ಸ್ ಆಗಿತ್ತು ಎನ್ನುತ್ತಿದ್ದಾರೆ. ಆದರೆ ಗುಜರಾತ್ ಟೈಟನ್ಸ್ ತಂಡ ಈ ಪಂದ್ಯದಲ್ಲಿ ಮಾತ್ರವಲ್ಲದೆ ಟೂರ್ನಿಯ ಆರಂಭದಿಂದಲೂ ಇದೇ ರೀತಿಯ ಪ್ರದರ್ಶನವನ್ನು ನೀಡುತ್ತಾ ಬಂದಿದ್ದು, ತನ್ನ ಉತ್ತಮ ಪ್ರದರ್ಶನದಿಂದ ಎದುರಾಳಿಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಅಷ್ಟೇ.

Story first published: Monday, May 30, 2022, 12:34 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X