ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಟ್ರೋಫಿ ಗೆಲ್ಲದಿದ್ರೂ, ಯುಜವೇಂದ್ರ ಚಹಾಲ್ ಮುಡಿಗೆ ಪರ್ಪಲ್ ಕ್ಯಾಪ್‌

Yuzvendra chahal

ಐಪಿಎಲ್ 15ನೇ ಸೀಸನ್‌ನಲ್ಲಿ ಯುಜವೇಂದ್ರ ಚಹಾಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂದ್ಯಕ್ಕೂ ಮುನ್ನ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗನಷ್ಟೇ ವಿಕೆಟ್ ಪಡೆದಿದ್ದರೂ ಸಹ, ಎಕಾನಮಿಯಲ್ಲಿ ಹಿಂದೆ ಬಿದ್ದಿದ್ದ ಚಹಾಲ್, ಕೊನೆಗೂ ಪರ್ಪಲ್ ಕ್ಯಾಪ್‌ ಅನ್ನು ತನ್ನದಾಗಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ 4 ಓವರ್ ಬೌಲಿಂಗ್ ಮಾಡಿ 20 ರನ್‌ ನೀಡಿ 1 ವಿಕೆಟ್ ಪಡೆದ ಚಹಾಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹಾಗೂ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಸಾಧನೆ ಮಾಡಿದ್ರು.

ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯುತ್ತಿದ್ದಂತೆ ಚಹಾಲ್, ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗನನ್ನ ಹಿಂದಿಕ್ಕಿ ಐಪಿಎಲ್ 2022ರ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ರು.

26 ವಿಕೆಟ್‌ ಪಡೆದ ಯುಜವೇಂದ್ರ ಚಹಾಲ್‌

26 ವಿಕೆಟ್‌ ಪಡೆದ ಯುಜವೇಂದ್ರ ಚಹಾಲ್‌

ಐಪಿಎಲ್ 2022ರ ಸೀಸನ್‌ನಲ್ಲಿ 17 ಪಂದ್ಯಗಳನ್ನಾಡಿರುವ ಯುಜವೇಂದ್ರ ಚಹಾಲ್ 68 ಓವರ್‌ಗಳ ಬೌಲಿಂಗ್‌ನಲ್ಲಿ 19.52ರ ಸರಾಸರಿಯಲ್ಲಿ ಒಟ್ಟು 27 ವಿಕೆಟ್ ಪಡೆದು ಮಿಂಚಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಸೇರಿದಂತೆ ಐದು ವಿಕೆಟ್‌ಗಳ ಗೊಂಚಲನ್ನು ಒಂದು ಬಾರಿ ಪಡೆದಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್‌ಗಳನ್ನ ತನ್ನದಾಗಿಸಿಕೊಂಡಿದ್ದಾರೆ.

IPL 2022: ಚಹಾಲ್ ದಾಖಲೆ, ಸೀಸನ್‌ವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್

ಚಹಾಲ್‌ಗಿಂತ ಒಂದು ವಿಕೆಟ್‌ ಹಿಂದಿರುವ ವಹಿಂದು ಹಸರಂಗ

ಚಹಾಲ್‌ಗಿಂತ ಒಂದು ವಿಕೆಟ್‌ ಹಿಂದಿರುವ ವಹಿಂದು ಹಸರಂಗ

ಫೈನಲ್ ಪಂದ್ಯಕ್ಕೂ ಮುನ್ನ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗ ಮೊದಲ ಸ್ಥಾನದಲ್ಲಿದ್ದರು. ಆದ್ರೆ ಚಹಾಲ್ 27ನೇ ವಿಕೆಟ್ ಪಡೆಯುತ್ತಿದ್ದಂತೆ ಹಸರಂಗ ಎರಡನೇ ಸ್ಥಾನಕ್ಕೆ ಜಾರಿದರು.

ವಹಿಂದು ಹಸರಂಗ 16 ಪಂದ್ಯಗಳಲ್ಲಿ 57 ಓವರ್ ಬೌಲಿಂಗ್ ಮಾಡಿ 16.54ರ ಸರಾಸರಿಯಲ್ಲಿ ಒಟ್ಟು 26 ವಿಕೆಟ್ ಕಬಳಿಸಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದಲ್ಲಿ ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ(23) ಮತ್ತು ಸನ್‌ರೈಸರ್ಸ್ ಹೈದ್ರಾಬಾದ್‌ನ ಉಮ್ರಾನ್ ಮಲ್ಲಿಕ್ (22) ಸ್ಥಾನ ಪಡೆದಿದ್ದಾರೆ.

ಐಪಿಎಲ್ 2022 ಫೈನಲ್: ಪ್ಲೇಆಪ್ಸ್‌ನಲ್ಲಿ ಹೊಸ ದಾಖಲೆ ಬರೆದ ಆರ್‌ಆರ್ ಬ್ಯಾಟರ್ ಜೋಸ್‌ ಬಟ್ಲರ್

ಆರಂಭದಲ್ಲೇ ಎಡವಟ್ಟು ಮಾಡಿ ಗುಜರಾತ್ ಗೆ ಗೆಲ್ಲೊ ದಾರಿ ಬಿಟ್ಟುಕೊಟ್ಟ Sanju Samson |#cricket |Oneindia Kannada
ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಪಡೆದ ಚಾಂಪಿಯನ್ ಬೌಲರ್ಸ್

ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಪಡೆದ ಚಾಂಪಿಯನ್ ಬೌಲರ್ಸ್

2008 - ಸೊಹೈಲ್ ತನ್ವಿರ್ (22 ವಿಕೆಟ್)
2009 - ಆರ್ ಪಿ ಸಿಂಗ್ (23 ವಿಕೆಟ್)
2010 - ಪ್ರಗ್ಯಾನ್ ಓಜಾ (21 ವಿಕೆಟ್)
2011 - ಲಸಿತ್ ಮಾಲಿಂಗ (28 ವಿಕೆಟ್)
2012 - ಮೋರ್ನೆ ಮೊರ್ಕೆಲ್ (25 ವಿಕೆಟ್)
2013 - ಡಿಜೆ ಬ್ರಾವೋ (32 ವಿಕೆಟ್)
2014 - ಮೋಹಿತ್ ಶರ್ಮಾ (23 ವಿಕೆಟ್)
2015 - ಡಿಜೆ ಬ್ರಾವೋ (26 ವಿಕೆಟ್)
2016- ಭುವನೇಶ್ವರ್ ಕುಮಾರ್ (23 ವಿಕೆಟ್)
2017- ಭುವನೇಶ್ವರ್ ಕುಮಾರ್ (26 ವಿಕೆಟ್)
2018- ಆ್ಯಂಡ್ರ್ಯೂ ಟೈ (24 ವಿಕೆಟ್)
2019- ಇಮ್ರಾನ್ ತಾಹೀರ್ (26 ವಿಕೆಟ್)
2020- ಕಗಿಸೊ ರಬಾಡ (30 ವಿಕೆಟ್)
2021- ಹರ್ಷಲ್ ಪಟೇಲ್ (32 ವಿಕೆಟ್)
2022- ಯುಜವೇಂದ್ರ ಚಹಾಲ್ (26 ವಿಕೆಟ್)

Story first published: Monday, May 30, 2022, 9:51 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X