16 ಸೀಸನ್ 14ನೇ ಕ್ಯಾಪ್ಟನ್: ತಂಡಗಳು ಜರ್ಸಿ ಬದಲಾಯಿಸಿದಂತೆ, ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ಬದಲಾವಣೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ನೇ ಸೀಸನ್‌ಗೆ ತೆರೆಮೆರೆಯ ತಯಾರಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಡಿಸೆಂಬರ್‌ನಲ್ಲಿ ಮಿನಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, 2023ರ ಮಾರ್ಚ್ ತಿಂಗಳ ಕೊನೆಯಲ್ಲಿ ಐಪಿಎಲ್ 16ನೇ ಸೀಸನ್‌ನಲ್ಲಿ ಆರಂಭಗೊಳ್ಳಲಿದೆ.
ಈಗಾಗಲೇ ಅನೇಕ ತಂಡಗಳು ಮುಂಬರುವ ಆಟಗಾರರ ಹರಾಜಿಗೂ ಮುನ್ನ ರಿಲೀಸ್ ಮಾಡಲಿರುವ ಆಟಗಾರರ ಹೆಸರನ್ನು ಮತ್ತು ರೀಟೈನ್ ಮಾಡಿಕೊಂಡವರನ್ನ ಪಟ್ಟಿ ಮಾಡಬೇಕಿದೆ. ಇದ್ರ ನಡುವೆ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿದ್ದು, ಟೀಂ ಇಂಡಿಯಾ ಓಪನರ್ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

8.25 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಗಬ್ಬರ್
ಐಪಿಎಲ್ 2022 ಮೆಗಾ ಆಟಗಾರರ ಹರಾಜಿನಲ್ಲಿ ಶಿಖರ್ ಧವನ್ 8.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೇರಿದ್ದ ಶಿಖರ್ ಧವನ್ ಅತ್ಯಂತ ಅನುಭವಿ ಆಟಗಾರನಾಗಿದ್ದರೂ ಸಹ, ಮಯಾಂಕ್ ಅಗರ್ವಾಲ್ ನಾಯಕತ್ವದ ಅಡಿಯಲ್ಲಿ ಆಡಿದ್ದರು.
ಶಿಖರ್ ಧವನ್ ಕಳೆದ ಸೀಸನ್‌ನಲ್ಲಿ ಆಡಿರುವ 14 ಪಂದ್ಯಗಳಲ್ಲಿ 122ರ ಸ್ಟ್ರೈಕ್‌ರೇಟ್‌ನಲ್ಲಿ 460ರನ್ ಸಿಡಿಸಿದ್ರು. ಶಿಖರ್ ಧವನ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರನಾಗಿದ್ದು, ಸತತ ಏಳು ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.
T20 ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಪಾಕ್ ಗೆದ್ದ ಬಳಿಕ ಪಾಯಿಂಟ್ಸ್ ಟೇಬಲ್ ಅಪ್‌ಡೇಟ್
16 ಸೀಸನ್‌ಗೆ 14ನೇ ನಾಯಕನಾಗಿ ಶಿಖರ್ ಧವನ್ ಆಯ್ಕೆ
ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳಲ್ಲಿ ಒಂದಾ ಪಂಜಾಬ್ ಕಿಂಗ್ಸ್ ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಬದಲಾವಣೆಯನ್ನು ಕಂಡಿದೆ. ಫ್ರಾಂಚೈಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ 16 ಐಪಿಎಲ್ ಸೀಸನ್‌ಗಲ್ಲಿ ಪಂಜಾಬ್ ಕಿಂಗ್ಸ್ 14 ನಾಯಕನ ಬದಲಾವಣೆ ಮಾಡಿದೆ. ಶಿಖರ್ ಧವನ್ ಪಂಜಾಬ್ ಕಿಂಗ್ಸ್‌ನ 14ನೇ ಕ್ಯಾಪ್ಟನ್ ಅಂದ್ರೆ ಆಶ್ಚರ್ಯಪಡಲೇಬೇಕಿದೆ.
ಟೀಂ ಇಂಡಿಯಾದ Unsung ಹೀರೋ: ಭಾರತದ ಆಟಗಾರರ ಶೂ ಕ್ಲೀನ್ ಮಾಡಿದ ರಘು ಕುರಿತು ಭಾರೀ ಪ್ರಶಂಸೆ
ತಂಡಗಳು ಜರ್ಸಿಯ ಬಣ್ಣ ಬದಲಿಸಿದಂತೆ ನಾಯಕತ್ವ ಬದಲಾವಣೆ ಎಂದು ಟ್ರೋಲ್
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಅಧಿಕೃತ ಟ್ವಿಟ್ಟರ್ ಅಕೌಟ್‌ನಿಂದ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಎಂದು ಟ್ವೀಟ್ ಹೊರಬೀಳುತ್ತಿದ್ದಂತೆ ನೆಟ್ಟಿಗರು ಫ್ರಾಂಚೈಸಿಯ ಕಾಲೆಳೆದಿದ್ದಾರೆ. ತಂಡಗಳು ಪ್ರತಿ ಸೀಸನ್‌ಗೂ ಜರ್ಸಿಯ ಬಣ್ಣದಲ್ಲಿ ಕೆಲವು ಬದಲಾವಣೆ, ಜಾಹೀರಾತುದಾರರ ಹೆಸರನ್ನು ನಮೂದಿಸಬಹುದನ್ನು ಕಾಣಬಹುದಾಗಿದೆ. ಆದ್ರೆ ಪಂಜಾಬ್ ಕಿಂಗ್ಸ್ ಪ್ರತಿ ಸೀಸನ್‌ನಲ್ಲೂ ನಾಯಕನನ್ನೇ ಬದಲಾಯಿಸಿದೆ ಎಂದು ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಪಂಜಾಬ್ ಕಿಂಗ್ಸ್ ಕಾಲೆಳೆದಿದ್ದಾರೆ.
ಪಂಜಾಬ್ ಕಿಂಗ್ಸ್ ಐಪಿಎಲ್ 2023ರ ಸೀಸನ್‌ನಲ್ಲಾದ್ರೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯ ಕನಸನ್ನು ಈಡೇರಿಸುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications