ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾದ Unsung ಹೀರೋ: ಭಾರತದ ಆಟಗಾರರ ಶೂ ಕ್ಲೀನ್ ಮಾಡಿದ ರಘು ಕುರಿತು ಭಾರೀ ಪ್ರಶಂಸೆ

Team india Raghu

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಐದು ರನ್‌ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪರ ಆಟಗಾರರಿಗೆ ನೆರವಾದ ತಂಡದ ಥ್ರೋಬಾಲ್ ಕೋಚ್‌ ರಘು ಕುರಿತಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಮೈದಾನದ ಸುತ್ತ ತಿರುಗಿ ಆಟಗಾರರಿಗೆ ನೆರವಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿತು. ಬಾಂಗ್ಲಾಗೆ 185ರನ್‌ಗಳ ಗುರಿ ನೀಡಿತು.

185 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಪವರ್‌ಪ್ಲೇ ಓವರ್‌ಗಳಲ್ಲಿ 60ರನ್ ಕಲೆಹಾಕಿತು. ಅಬ್ಬರಿಸಿದ ಓಪನರ್ ಲಿಟ್ಟನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ರು.
ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 7 ಓವರ್‌ಗೆ 66ರನ್ ಕಲೆಹಾಕಿದ್ದು, ಡೆಕ್ವರ್ತ್‌ ಲೂಹಿಸ್ ನಿಯಮದಡಿಯಲ್ಲಿ 17 ರನ್ ಮುನ್ನಡೆ ಸಾಧಿಸಿತ್ತು.

ಅದ್ಭುತವಾಗಿ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ

ಅದ್ಭುತವಾಗಿ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ

ಮಳೆಯ ಬ್ರೇಕ್ ಬಳಿಕ ಬಾಂಗ್ಲಾಗೆ ಡೆಕ್ವರ್ತ್‌ ಲೂಹಿಸ್ ನಿಯಮದಡಿಯಲ್ಲಿ 17 ಓವರ್‌ಗೆ 151ರನ್‌ಗಳ ಗುರಿ ನೀಡಲಾಯ್ತು. 7 ಓವರ್‌ಗೆ ಅದಾಗಲೇ 66ರನ್‌ ಕಲೆಹಾಕಿದ್ದ ಬಾಂಗ್ಲಾದೇಶ ತಂಡವು 9 ಓವರ್‌ಗಳಲ್ಲಿ 84ರನ್ ಕಲೆಹಾಕಬೇಕಾಗಿತ್ತು.

ಈ ವೇಳೆಯಲ್ಲಿ ಮೇಲುಗೈ ಸಾಧಿಸಿದ್ದ ಬಾಂಗ್ಲಾಗ್ಕೆ ಮೊದಲ ಆಘಾತ ರನೌಟ್. 27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್, ಕೆ.ಎಲ್ ರಾಹುಲ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆಗುತ್ತಿದ್ದಂತೆ, ಗೆಲುವಿನ ಟ್ರೆಂಡ್ ಬಾಂಗ್ಲಾ ಕಡೆಯಿಂದ ಭಾರತದ ಕಡೆಗೆ ಶಿಫ್ಟ್ ಆಯಿತು.

ನಂತರ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ತಂಡಕ್ಕೆ ನುರುಲ್ ಹಸನ್ 25, ಟಸ್ಕಿನ್ ಅಹಮದ್ 12 ರನ್ ಆಧಾರವಾದ್ರೆ ಹೊರತು ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡರು.

ಅಂತಿಮ ಓವರ್‌ನಲ್ಲಿ 20 ರನ್‌ಗಳಿಸಲಾಗದೆ ಬಾಂಗ್ಲಾದೇಶ ತಂಡವು 6 ವಿಕೆಟ್ ನಷ್ಟಕ್ಕೆ 145ರನ್ ಕಲೆಹಾಕಿತು. ಭಾರತ 5ರನ್‌ಗಳ ಗೆಲುವು ಸಾಧಿಸುವ ಮೂಲಕ 2 ಅಮೂಲ್ಯ ಪಾಯಿಂಟ್ಸ್ ಪಡೆದು ಸೆಮಿಫೈನಲ್ ಜೀವಂತವಾಗಿರಿಸಿದೆ.

ಟಿ20 ವಿಶ್ವಕಪ್: ಅಂತಿಮ ಓವರ್‌ನಲ್ಲಿ ಶಮಿ ಇದ್ದರೂ, ಅರ್ಷ್‌ದೀಪ್‌ಗೆ ಬೌಲಿಂಗ್ ನೀಡಿದ ಕಾರಣ ತಿಳಿಸಿದ ರೋಹಿತ್

ಟೀಂ ಇಂಡಿಯಾ ಆಟಗಾರರಿಗೆ ನೆರವಾದ ಥ್ರೋಬಾಲ್ ಕೋಚ್ ರಘು

ಮಳೆ ಬಂದ ಕಾರಣ ಮೈದಾನವು ತೇವಾಂಶದಿಂದಲೇ ಕೂಡಿತ್ತು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಬಹಳ ಎಚ್ಚರಿಕೆಯಿಂದ ಫೀಲ್ಡಿಂಗ್ ಮಾಡುವ ಅನಿವಾರ್ಯತೆಯಿತ್ತು. ದ.ಆಫ್ರಿಕಾ ವಿರುದ್ಧ ಮಾಡಿದ ತಪ್ಪುಗಳನ್ನ ಮರುಕಳುಸಿದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಆಟಗಾರರು ಮೈದಾನದಲ್ಲಿ ಫೀಲ್ಡಿಂಗ್ ವೇಳೆ, ಬೌಲಿಂಗ್ ವೇಳೆಯಲ್ಲಿ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲು ಕನ್ನಡಿಗ ರಘು ಆಟಗಾರರಿಗೆ ನೆರವಾಗಿದ್ದಾರೆ.

ರಘು ಮೈದಾನದ ಬೌಂಡರಿ ಸುತ್ತೆಲ್ಲಾ ತಿರುಗಾಡುತ್ತಾ ಆಟಗಾರರ ಶೂಗಳನ್ನ ಕ್ಲೀನ್ ಮಾಡಿದ್ದಾರೆ. ಶೂಗಳಿಗೆ ಅಂಟಿಕೊಂಡಿದ್ದ ಹುಲ್ಲುಗಳ ಜೊತೆಗೆ ಮಣ್ಣನ್ನು ಕ್ಲೀನ್ ಮಾಡುವ ಮೂಲಕ ಆಟಗಾರರ ಸುರಕ್ಷತೆ ಕಾಪಾಡಿದ್ದಾರೆ. ಈ ಕುರಿತಾಗಿ ಪಂದ್ಯದ ವೇಳೆ ರಘು ಕಾರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಘು ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಕ್ಯಾಪ್ ತೊಟ್ಟವರಷ್ಟೇ ತಂಡದ ಹೀರೋಗಳಲ್ಲ!

ಪಂದ್ಯ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದ ಅದ್ಭುತ ಫೀಲ್ಡಿಂಗ್ ಕುರಿತಾಗಿ ಸಾಕಷ್ಟು ಹೊಗಳಿಕೆಯ ಮಾತನಾಡಿದ್ದಾರೆ. ಇದರ ಶ್ರೇಯಸ್ಸು ರಘುಗೆ ಕೂಡ ಸಲ್ಲುತ್ತದೆ. ಆಟಗಾರರು ಎಲ್ಲೂ ಜಾರದಂತೆ ನೆರವಾದ ರಘು ಭಾರತದ ಗೆಲುವಿನಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಘು ಕಾರ್ಯವನ್ನು ಮೆಚ್ಚಿನ ಅನೇಕರು ಟ್ವೀಟ್ ಮಾಡಿದ್ದು, ''ನಿಮ್ಮ ಕಾರ್ಯ ನಿಜಕ್ಕೂ ಗ್ರೇಟ್. ಸೆಲ್ಯೂಟ್ ಯು ಸರ್'' ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ.

Story first published: Thursday, November 3, 2022, 14:41 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X