IPL 2023 Retention : ಪಂಜಾಬ್ ಕಿಂಗ್ಸ್ ತಂಡದಿಂದ ಮಯಾಂಕ್ ಅಗರ್ವಾಲ್ ಹೊರಕ್ಕೆ: ರೀಟೈನ್ ಆದ ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ನೇ ಸೀಸನ್‌ಗೆ ಈಗಿನಿಂದಲೇ ತಯಾರಿ ಶುರುವಾಗಿದ್ದು, ಆಟಗಾರರ ಮಿನಿ ಹರಾಜಿಗೂ ಮುನ್ನ ಇಂದು (ನ.15) ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮತ್ತು ರಿಲೀಸ್ ಮಾಡಲು ಕೊನೆಯ ದಿನವಾಗಿತ್ತು. ಅಂತೆಯೇ 10 ಫ್ರಾಂಚೈಸಿಗಳು ಮುಂದಿನ ಸೀಸನ್‌ಗೆ ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿವೆ.
2023ರ ಮಾರ್ಚ್ ತಿಂಗಳ ಕೊನೆಯಲ್ಲಿ ಐಪಿಎಲ್ 16ನೇ ಸೀಸನ್‌ನಲ್ಲಿ ಆರಂಭಗೊಳ್ಳಲಿದೆ.ಇದ್ರ ನಡುವೆ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿದ್ದು, ಟೀಂ ಇಂಡಿಯಾ ಓಪನರ್ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ನಾಯಕತ್ವದಿಂದ ಕೆಳಗಿಳಿಸಿದ್ದಲ್ಲದೆ ತಂಡದಿಂದ ರಿಲೀಸ್ ಕೂಡ ಮಾಡಿದೆ.
ಐಪಿಎಲ್ 2022 ಮೆಗಾ ಆಟಗಾರರ ಹರಾಜಿನಲ್ಲಿ ಶಿಖರ್ ಧವನ್ 8.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೇರಿದ್ದ ಶಿಖರ್ ಧವನ್ ಅತ್ಯಂತ ಅನುಭವಿ ಆಟಗಾರನಾಗಿದ್ದರೂ ಸಹ, ಮಯಾಂಕ್ ಅಗರ್ವಾಲ್ ನಾಯಕತ್ವದ ಅಡಿಯಲ್ಲಿ ಆಡಿದ್ದರು.
ಶಿಖರ್ ಧವನ್ ಕಳೆದ ಸೀಸನ್‌ನಲ್ಲಿ ಆಡಿರುವ 14 ಪಂದ್ಯಗಳಲ್ಲಿ 122ರ ಸ್ಟ್ರೈಕ್‌ರೇಟ್‌ನಲ್ಲಿ 460ರನ್ ಸಿಡಿಸಿದ್ರು. ಶಿಖರ್ ಧವನ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರನಾಗಿದ್ದು, ಸತತ ಏಳು ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇವರ ಪ್ರದರ್ಶನ ಆಧರಿಸಿ ನಾಯಕತ್ವ ಪಟ್ಟ ಕಟ್ಟಲಾಗಿದೆ.

16 ಸೀಸನ್‌ಗೆ 14ನೇ ನಾಯಕನಾಗಿ ಶಿಖರ್ ಧವನ್ ಆಯ್ಕೆ
ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಬದಲಾವಣೆಯನ್ನು ಕಂಡಿದೆ. ಫ್ರಾಂಚೈಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ 16 ಐಪಿಎಲ್ ಸೀಸನ್‌ಗಲ್ಲಿ ಪಂಜಾಬ್ ಕಿಂಗ್ಸ್ 14 ನಾಯಕನ ಬದಲಾವಣೆ ಮಾಡಿದೆ. ಶಿಖರ್ ಧವನ್ ಪಂಜಾಬ್ ಕಿಂಗ್ಸ್‌ನ 14ನೇ ಕ್ಯಾಪ್ಟನ್ ಅಂದ್ರೆ ಆಶ್ಚರ್ಯಪಡಲೇಬೇಕಿದೆ.
ಅಜಿಂಕ್ಯ ರಹಾನೆಯನ್ನ ಕೈ ಬಿಟ್ಟ KKR: ತಂಡದ ಸಂಪೂರ್ಣ ರೀಟೈನ್, ರಿಲೀಸ್ ಆಗಿರುವ ಆಟಗಾರರ ಪಟ್ಟಿ ಇಲ್ಲಿದೆ

ಪಂಜಾಬ್ ಕಿಂಗ್ಸ್ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ
ಶಿಖರ್ ಧವನ್ (ನಾಯಕ), ಶಾರೂಖ್ ಖಾನ್, ಜಾನಿ ಬೈಸ್ಟ್ರೋವ್, ಪ್ರಭಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಷೆ, ಜಿತೇಶ್ ಶರ್ಮಾ, ರಾಜ್ ಭಾವಾ,ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಥಾನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಹಾರ್, ಹರ್ಪೀತ್ ಬ್ರಾರ್
IPL 2023: ಕ್ಯಾಪ್ಟನ್ ಕೇನ್ ವಿಲಿಯಮ್ಸನ್ SRH ತಂಡದಿಂದ ಔಟ್: ತಂಡದಲ್ಲಿ ಉಳಿದ ಆಟಗಾರರ ಪಟ್ಟಿ

ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಿರುವ ಆಟಗಾರರ ಪಟ್ಟಿ
ಮಯಾಂಕ್ ಅಗರ್ವಾಲ್, ಒಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೊವೆಲ್, ಇಶನ್ ಪೊವೆಲ್, ಅನ್ಷ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವ್ರಿತ್ವಿಕ್ ಚಟರ್ಜಿ
ಉಳಿದುಕೊಂಡಿರುವ ಪರ್ಸ್ ವ್ಯಾಲ್ಯೂ: 32.2 ಕೋಟಿ ರೂಪಾಯಿ
ಖರೀದಿಸಬಹುದಾದ ವಿದೇಶಿ ಆಟಗಾರರ ಸಂಖ್ಯೆ: 3
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications