ಮುಂಬೈ ತಂಡದಲ್ಲೇ ಕರ್ನಾಟಕ ಪ್ಲೇಯರ್ಸ್ ಜಾಸ್ತಿ!
ಬೆಂಗಳೂರು, ಏ.7: ಸ್ಥಳೀಯ ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಯಿತು ಎಂಬ ವಾಕ್ಯ ವಿಕಿಪೀಡಿಯದಲ್ಲಿ ಐಪಿಎಲ್ ಬಗ್ಗೆ ಬರೆಯಬಹುದು ಅಷ್ಟೇ. 2008ರಿಂದ ಆರಂಭವಾಗಿ ಇಲ್ಲಿ ತನಕ ಆರ್ ಸಿಬಿ ಸೇರಿದಂತೆ ಬಹುತೇಕ ಎಲ್ಲಾ ತಂಡಗಳು ಸ್ಥಳೀಯ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದ್ದು ಕಡಿಮೆ.
2008ರಲ್ಲಿ ವಿಜಯ್‌ಮಲ್ಯ ಒಡೆತನದ ಆರ್‌ಸಿಬಿ ತಂಡದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ತಂಡದ ನಾಯಕರಾಗಿ ರಾಹುಲ್ ದ್ರಾವಿಡ್ ಅಲ್ಲದೆ ಅನಿಲ್‌ಕುಂಬ್ಳೆ, ಅಯ್ಯಪ್ಪ, ಬಾಲಚಂದ್ರ ಅಖಿಲ್, ಅಪ್ಪಣ್ಣ, ಭರತ್‌ಚಿಪ್ಲಿ, ಸುನೀಲ್‌ಜೋಶಿ, ವಿನಯ್‌ಕುಮಾರ್ ತಂಡದ ಕೋಚ್ ಆಗಿ ವೆಂಕಟೇಶ್‌ಪ್ರಸಾದ್ ಕೂಡಾ ಇದ್ದರು. [47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]
2014ರಲ್ಲಿ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರನಿಗೂ ಸ್ಥಾನ ದೊರಕದಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. 2015ರಲ್ಲಿ ಕೇವಲ ಒಬ್ಬ ಆಟಗಾರನಿಗೆ ಅವಕಾಶ ಸಿಕ್ಕಿದೆ. ಹುಬ್ಬಳ್ಳಿ ಮೂಲದ ಶಿಶಿರ್ ಭಾವನೆಗೆ ಆಡುವ ಚಾನ್ಸ್ ಸಿಕ್ಕರೆ ಪುಣ್ಯ.

ಮುಂಬೈನಲ್ಲಿ ಕರ್ನಾಟಕದವರು:ಐಪಿಎಲ್ 8ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕರ್ನಾಟಕದ ಆಟಗಾರರು ಕಂಡು ಬಂದಿದ್ದಾರೆ. ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ಹಾಗೂ ಸುಚಿತ್ ಈ ಬಾರಿ ಅನಿಲ್ ಕುಂಬ್ಳೆ ಮ್ಯಾನೇಜ್ ಮಾಡುತ್ತಿರುವ ಮುಂಬೈ ತಂಡದಲ್ಲಿದ್ದಾರೆ. [ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕಾರ್ಯಪ್ಪ ಸೇರಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿ ಇದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮಾಯಾಂಕ್ ಅಗರವಾಲ್ ಹಾಗೂ ಸಿಎಂ ಗೌತಮ್ ಸೇರಿಕೊಂಡಿದ್ದಾರೆ. [ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]
ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರೊನಿತ್ ಮೋರೆ, ಆರ್ ಸಿಬಿಯಲ್ಲಿ ಶಿಶಿರ್ ಭವಾನೆ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೆಎಲ್ ರಾಹುಲ್ ಆಡಲಿದ್ದಾರೆ. [ಐಪಿಎಲ್: ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]

ಐಪಿಎಲ್ ಆರಂಭದಲ್ಲಿ ಪ್ರತಿ ತಂಡದಲ್ಲೂ 2-3 ಸ್ಥಳೀಯ ಆಟಗಾರರು ಇರಲೇಬೇಕು ಎಂಬ ನಿಯಮವಿತ್ತು. ಅದರೆ, ನಂತರ ಈ ನಿಯಮ ಸಡಿಲಗೊಂಡಿದ್ದರಿಂದ ಐಪಿಎಲ್ ನಲ್ಲಿ ಸ್ಥಳೀಯ ತಂಡದಲ್ಲಿ ಆಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. [ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]
ಆದರೆ, ಹರಾಜು ಸಂದರ್ಭದಲ್ಲಿ ಸ್ಥಳೀಯ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ತಂಡದ ಮಾಲೀಕರಿಗಂತೂ ಇದ್ದೇ ಇರುತ್ತದೆ. ಹೀಗಿದ್ದೂ ಆರ್ ಸಿಬಿಯಲ್ಲಿ ಸ್ಥಳೀಯ ಆಟಗಾರರ ಸಂಖ್ಯೆ 1ಕ್ಕೆ ಕುಸಿದಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications