Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPLಗಿಂತ ಪಾಕಿಸ್ತಾನದ PSL ಲೀಗ್ ಸಖತ್ತಾಗಿದೆ ಎಂದ ಆಕಿಬ್ ಜಾವೇದ್

PSL

ಮನೋರಂಜನ್ ಕಾ ಬಾಪ್ ಖ್ಯಾತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅದೆಷ್ಟೋ ಯುವ ಕ್ರಿಕೆಟಿಗರಿಗೆ ದಾರಿ ದೀಪವಾಗಿ ಪರಿಣಮಿಸಿದೆ. ವಿಶ್ವದ ಅಗ್ರ ಟಿ20 ಲೀಗ್ ಆಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದೆ. ಹೀಗಿರುವಾಗ ಐಪಿಎಲ್‌ಗಿಂತ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್‌) ಹೆಚ್ಚು ಚೆನ್ನಾಗಿದೆ ಎಂದು ಪಾಕಿಸ್ತಾನ ಮಾಜಿ ವೇಗಿ ಆಕಿಬ್ ಜಾವೇದ್ ಹೇಳಿದ್ದಾರೆ.

ಐಪಿಎಲ್‌ ಟೂರ್ನಿಗಿಂತ ಪಾಕಿಸ್ತಾನದ ಟಿ20 ಲೀಗ್ ಪಿಎಸ್‌ಎಲ್ ಹೆಚ್ಚು ಕುತೂಹಲಕಾರಿಯಾಗಿದೆ ಎಂದು ಜಾವೇದ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಕೇವಲ ಒಂದು ರೀತಿಯ ಕ್ರಿಕೆಟ್ ಆಡಲಾಗುವುದು. ಆದ್ರೆ ಪಿಎಸ್‌ಎಲ್ ಹಾಗಲ್ಲ ಎಂಬುದು ಇವರ ವಾದವಾಗಿದೆ.

ಐಪಿಎಲ್ ವಿಶ್ವದಲ್ಲೇ ಬೆಸ್ಟ್ ಟಿ20 ಲೀಗ್

ಐಪಿಎಲ್ ವಿಶ್ವದಲ್ಲೇ ಬೆಸ್ಟ್ ಟಿ20 ಲೀಗ್

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ವಿಶ್ವದ ಅತ್ಯುತ್ತಮ ಟಿ20 ಟೂರ್ನಮೆಂಟ್ ಎಂದು ಪರಿಗಣಿಸಲಾಗಿದೆ. ಹಲವಾರು ಕ್ರಿಕೆಟ್ ತಜ್ಞರು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಸ್ಪರ್ಧಿಗಳಾದ ಬಿಗ್ ಬ್ಯಾಷ್ ಲೀಗ್ (BBL) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (PSL) ಗಿಂತ ಮುಂದಿದೆ ಎಂದು ನಂಬುತ್ತಾರೆ. ಅನೇಕ ಭಾರತೀಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಮನ ಸೆಳೆದಿದ್ದಲ್ಲದೆ , ಭಾರತ ಪರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಇದು ಕೇವಲ ಭಾರತೀಯ ಕ್ರಿಕೆಟ್‌ ಆಟಗಾರರಿಗಷ್ಟೇ ಅಲ್ಲದೆ ವಿದೇಶಿ ಆಟಗಾರರು ಕೂಡ ಇಲ್ಲಿ ಪಾಲ್ಗೊಂಡು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದಾರೆ.

ಭಾರತ V/S ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 5 ಬೌಲರ್ಸ್‌

ಪಿಎಸ್‌ಎಲ್ ಅತ್ಯಂತ ಆಸಕ್ತಿದಾಯಕ ಲೀಗ್ ಎಂದ ಜಾವೇದ್

ಪಿಎಸ್‌ಎಲ್ ಅತ್ಯಂತ ಆಸಕ್ತಿದಾಯಕ ಲೀಗ್ ಎಂದ ಜಾವೇದ್

ಇದರ ನಡುವೆ ಪಾಕ್ ಮಾಜಿ ಆಟಗಾರ ಜಾವೇದ್ ಪಾಕಿಸ್ತಾನ ಸೂಪರ್ ಲೀಗ್ ವಿಶ್ವದಲ್ಲೇ ಅತ್ಯಂತ ಆಸಕ್ತಿದಾಯಕ ಲೀಗ್ ಆಗಿದೆ ಎಂದು ವಾದಿಸಿದ್ದಾರೆ. ವಿವಿಧ ರೀತಿಯ ಪಿಚ್‌ಗಳು ಪಾಕ್‌ನಲ್ಲಿದ್ದು, ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.

''ಕೋವಿಡ್ -19 ಅಥವಾ ಇನ್ನಾವುದಾದರೂ ಯಾವುದೇ ಅಡಚಣೆಗಳಿಲ್ಲದಿದ್ದರೆ ಪಿಚ್‌ಗಳ ಸ್ವರೂಪದಿಂದಾಗಿ ಇದು [ಪಿಎಸ್‌ಎಲ್] ವಿಶ್ವದ ಅತ್ಯಂತ ಆಸಕ್ತಿದಾಯಕ ಲೀಗ್ ಆಗಿದೆ. ಉದಾಹರಣೆಗೆ, ಲಾಹೋರ್‌ನ ಪಿಚ್ ಬೌಲರ್‌ಗಳಿಗೆ ಸ್ವಲ್ಪ ಬೆಂಬಲವನ್ನು ಹೊಂದಿದೆ, ಆದರೆ ನೀವು ಕರಾಚಿಯಲ್ಲಿ ಹೆಚ್ಚಿನ ಸ್ಕೋರ್‌ಗಳನ್ನು ನೋಡುತ್ತೀರಿ, "ಎಂದು ಜಾವೇದ್ ಪಿಟಿವಿ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ದ. ಆಫ್ರಿಕಾದ ವೇಗಿ ಔಟ್!: ಸರಣಿ ಆರಂಭಕ್ಕೆ ಮುನ್ನ ಹರಿಣಗಳಿಗೆ ಭಾರೀ ಹಿನ್ನಡೆ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ | Oneindia Kannada
ಐಪಿಎಲ್‌ನಲ್ಲಿ ಬೌಲಿಂಗ್ ಗುಣಮಟ್ಟ ಕಡಿಮೆಯಿದೆ!

ಐಪಿಎಲ್‌ನಲ್ಲಿ ಬೌಲಿಂಗ್ ಗುಣಮಟ್ಟ ಕಡಿಮೆಯಿದೆ!

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅತ್ಯಂತ ಫ್ಲಾಟ್‌ ಪಿಚ್‌ಗಳಲ್ಲಿ ಆಡಲಾಗುತ್ತದೆ ಮತ್ತು ಬೌಲಿಂಗ್‌ನ ಗುಣಮಟ್ಟವು ಕಡಿಮೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಆಕಿಬ್ ಜಾವೆದ್ ಹೇಳಿದ್ದಾರೆ.

''ನೀವು ಐಪಿಎಲ್ ಅನ್ನು ನೋಡಿದರೆ, ಅತ್ಯಂತ ಸಮತಟ್ಟಾದ ಪಿಚ್‌ಗಳು ಮತ್ತು ಕಡಿಮೆ-ಗುಣಮಟ್ಟದ ಬೌಲಿಂಗ್‌ನಿಂದಾಗಿ ಅಲ್ಲಿ ಕೇವಲ ಒಂದು ರೀತಿಯ ಕ್ರಿಕೆಟ್ ಆಡಲಾಗುತ್ತದೆ, "ಎಂದು ಜಾವೆದ್ ಅಭಿಪ್ರಾಯ ಪಟ್ಟಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನ್ ಸೂಪರ್ ಲೀಗ್ ಫ್ರಾಂಚೈಸಿ ಲಾಹೋರ್ ಖಲಂದರ್ಸ್‌ನ ಮುಖ್ಯ ಕೋಚ್ ಆಗಿರುವ ಆಕಿಬ್ ಜಾವೇದ್ ಅವರು ಪಾಕಿಸ್ತಾನ ಸೂಪರ್ ಲೀಗ್ ಸೀಸನ್ 7 ಕ್ಕೆ ಸಿದ್ಧರಾಗುತ್ತಿದ್ದಾರೆ. ಇದರ ಜೊತೆಗೆ ಈ ಆವೃತ್ತಿಯ ಟಿ20 ಪಂದ್ಯಾವಳಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ.

Story first published: Tuesday, December 21, 2021, 17:15 [IST]
Other articles published on Dec 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+