ಇಂದು ರಾಹುಲ್-ರೋಹಿತ್ ಟೀಮ್ ಮುಖಾಮುಖಿ: ಪಂದ್ಯಕ್ಕೂ ಮೊದಲು ಅಂಕಿ-ಅಂಶಗಳ ಒಳನೋಟ

ಅಬುದಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ಇಂದು ಎರಡು ಬಲಿಷ್ಠ ತಂಡಗಳ ಮುಖಾಮುಖಿಗೆ ಸಾಕ್ಷಿಯಾಗ್ತಿದೆ. ಕಳೆದ ಪಂದ್ಯದಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಗೆಲುವಿನ ಲಯಕ್ಕೆ ಮರಳಲು ಸಿದ್ಧಗೊಂಡಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ 13 ನೇ ಪಂದ್ಯದಲ್ಲಿ ಪಂಜಾಬ್ - ಮುಂಬೈ ಎದುರಾಗ್ತಿವೆ. ಎರಡೂ ತಂಡಗಳು ಗೆಲುವಿನ ಗುರಿಯನ್ನು ಹೊಂದಿದ್ದು, ಕೆಎಲ್ ರಾಹುಲ್ ಅವರ ತಂಡವು ಐದನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಪಡೆ ಆರನೇ ಸ್ಥಾನದಲ್ಲಿದೆ.

ಸೋಲಿನ ಆರಂಭದಿಂದ ಸೋಲಿನ ತನಕ
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಐದು ವಿಕೆಟ್ ಸೋಲಿನೊಂದಿಗೆ ತಮ್ಮ ಅಭಿಯಾನವನ್ನು ಆರಂಬಿಸಿದ ಮುಂಬೈ ಇಂಡಿಯನ್ಸ್ , ನಂತರ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 49 ರನ್‌ಗಳ ಜಯ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೂಪರ್ ಓವರ್ ಸೋಲು ಮತ್ತೆ ತಂಡವನ್ನು ಕಂಗೆಡೆಸಿತು.
1,2,3,5,6,7,8,9 ರನ್ ಗಳಿಸಿ ಟ್ರೋಲ್ ಆದ ರಾಜಸ್ಥಾನ್ ರಾಯಲ್ಸ್ ಪ್ಲೇಯರ್ಸ್

ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮವಾಗಿರುವ KXIP
ಏತನ್ಮಧ್ಯೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮವಾಗಿದೆ. ಆದರೆ ಅದನ್ನು ಸುಲಭವಾಗಿ ಗೆಲುವುಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೂಪರ್ ಓವರ್ ಸೋಲಿನೊಂದಿಗೆ ಅವರು ತಮ್ಮ ಸೀಸನ್ ಪ್ರಾರಂಭಿಸಿದರು. ನಂತರ ಆರ್‌ಸಿಬಿ ವಿರುದ್ಧ 97 ರನ್‌ಗಳ ಜಯ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧ ನಾಲ್ಕು ವಿಕೆಟ್ ಸೋಲು ಕಂಡರು. 223 ರನ್‌ಗಳಿಸಿದ್ರೂ, ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿಫಲವಾಯಿತು.

ಭರ್ಜರಿ ಫಾರ್ಮ್‌ನಲ್ಲಿರುವ ಮಯಾಂಕ್ ಅಗರ್ವಾಲ್ , ರಾಹುಲ್
ಐಪಿಎಲ್ 2020 ರಲ್ಲಿ ಕಿಂಗ್ಸ್ ಇಲೆವೆನ್ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಅಗ್ರ ಫಾರ್ಮ್‌ನಲ್ಲಿದ್ದಾರೆ. ಈ ಋತುವಿನಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಹೆಚ್ಚಿನ ರನ್‌ಗಳ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗ ಎರಡನೇ ಸ್ಥಾನದಲ್ಲಿದ್ದಾನೆ. ನಾಯಕ ರಾಹುಲ್ (222) ಅವರ ಹಿಂದೆ 221 ರನ್ ಗಳಿಸಿದ್ದಾರೆ. ಮಾಯಾಂಕ್ ಕೂಡ ಒಂದು ಶತಕ ಸಿಡಿಸಿ ಮಿಂಚಿದ್ದಾನೆ. ಈ ಋತುವಿನಲ್ಲಿ ಅವರ ಸ್ಟ್ರೈಕ್ ದರ 170.00 ಆಗಿದೆ.
ಕೊಹ್ಲಿ ಹೆಸರಿನಲ್ಲಿದ್ದ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಾಬಿನ್ ಉತ್ತಪ್ಪ
ಮಯಾಂಕ್ ಬ್ಯಾಟ್‌ನಿಂದ 21 ಬೌಂಡರಿಗಳು ಸಿಡಿದಿದ್ದು, 11 ಸಿಕ್ಸರ್‌ಗಳನ್ನು ಒಳಗೊಂಡಿದ. ಇದು ಈ ಋತುವಿನಲ್ಲಿ ಅವರ ಪ್ರಬಲ ಆರಂಭವನ್ನು ದೃಢಪಡಿಸುತ್ತಿದೆ.

ಮುಂಬೈ ಪರ ಸ್ಟಾರ್ ಆಗಿ ಮಿಂಚಿದ್ದ ಇಶಾನ್ ಕಿಶನ್
ಯುವ ಕ್ರಿಕೆಟಿಗ ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಆಟವಾಡಿದ್ರು. ಸೂಪರ್ ಓವರ್‌ನಲ್ಲಿ ಪಂದ್ಯ ಗೆದ್ದ ಆರ್‌ಸಿಬಿ ವಿರುದ್ಧ 99 ರನ್‌ಗಳ ಬಲದಿಂದ ಅವರು ತಮ್ಮ ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು. ಆ ಪಂದ್ಯದಲ್ಲಿ ಗಾಯಗೊಂಡ ಸೌರಭ್ ತಿವಾರಿ ಅವರ ಸ್ಥಾನಕ್ಕೆ ಬಂದ ಕಿಶನ್ 134.80 ಸ್ಟ್ರೈಕ್ ರೇಟ್ ದಾಖಲಿಸಿದ್ದಾರೆ.

ಹೆಡ್ ಟು ಹೆಡ್ ಫೈಟ್‌ನಲ್ಲಿ ಪಂಜಾಬ್ ವಿರುದ್ಧ ಮುಂಬೈ ಮೇಲುಗೈ
ಐಪಿಎಲ್‌ನಲ್ಲಿ ಉಭಯ ತಂಡಗಳು ಪರಸ್ಪರ 24 ಬಾರಿ ಮುಖಾಮುಖಿಯಾಗಿವೆ. ಮುಂಬೈ ಇಂಡಿಯನ್ಸ್ ಇದುವರೆಗೆ 13 ಬಾರಿ ಗೆದ್ದಿದೆ, ಈ ಮಧ್ಯೆ ಕಿಂಗ್ಸ್ ಇಲೆವೆನ್ ಪಂಜಾಬ್ 11 ಪಂದ್ಯ ಜಯಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications