2018ರ IPL ಸೀಸನ್‌ನಲ್ಲಿ ಧೋನಿ ಕಣ್ಣೀರು ಹಾಕಿದ್ದನ್ನ ನಾನು ನೋಡಿದ್ದೆ: ಮೈಕಲ್ ಹಸ್ಸಿ

ಎರಡು ವರ್ಷಗಳ ನಿಷೇಧದ ಬಳಿಕ ಕಂಬ್ಯಾಕ್ ಸೀಸನ್‌ನಲ್ಲಿ(2018) ಟ್ರೋಫಿಯನ್ನ ಎತ್ತಿಹಿಡಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟರ ಮಟ್ಟಿಗೆ ಭಾವುಕರಾಗಿದ್ದರು ಎಂಬುದನ್ನ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011ರಲ್ಲಿ ಸತತವಾಗಿ ಎರಡು ಟ್ರೋಫಿ ಗೆದ್ದ ಮೊದಲ ತಂಡವಾಗಿದೆ. ಆನಂತರ ಮುಂಬೈ ಇಂಡಿಯನ್ಸ್ ಅತ್ಯಂತ ಸಕ್ಸಸ್‌ಫುಲ್ ಟೀಂ ಆಗಿ ಹೊರಹೊಮ್ಮಿತು. ಆದ್ರೂ ಧೋನಿ ನಾಲ್ಕು ಟೈಟಲ್‌ಗಳನ್ನ ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ತಂಡವನ್ನ ಪ್ಲೇ ಆಫ್‌ಗೆ ತಲುಪಿಸಿರುವ ಏಕೈಕ ನಾಯಕರಾಗಿದ್ದಾರೆ.

ಧೋನಿ ನಾಯಕತ್ವದಲ್ಲಿ 4 ಟ್ರೋಫಿ, 2 ಚಾಂಪಿಯನ್ ಟ್ರೋಫಿ
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದಲ್ಲದೆ, ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಯನ್ನ ಸಹ ಗೆದ್ದಿದೆ. 11 ಬಾರಿ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕರಲ್ಲಿ ಕಾಣಿಸಿಕೊಂಡಿದೆ. ಮುಂಬೈ ಅತಿ ಹೆಚ್ಚು ಟೈಟಲ್ ಗೆದ್ದಿದ್ದರೂ ಸಹ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಕೀರ್ತಿ ಸಿಎಸ್‌ಕೆಗೆ ಸಲ್ಲುತ್ತದೆ.
MI vs GT: ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆಡುವ 11ರ ಬಳಗ ಹೇಗಿರಬೇಕು?

2018ರ ಸೀಸನ್‌ನಲ್ಲಿ ತುಂಬಾ ಭಾವುಕರಾಗಿದ್ದ ಧೋನಿ
ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ತಿಳಿಸಿರುವಂತೆ 2018ರ ಐಪಿಎಲ್ ಸೀಸನ್ ಸಿಎಸ್‌ಕೆಗೆ ತುಂಬಾನೆ ವಿಶೇಷವಾಗಿತ್ತು. ಏಕೆಂದರೆ ಲೀಗ್‌ನಲ್ಲಿ ಬ್ಯಾನ್ ಆದ ಬಳಿಕ ಸಿಎಸ್‌ಕೆ ಕಂಬ್ಯಾಕ್ ಮಾಡಬೇಕಿದ್ದ ಸೀಸನ್ ಅದಾಗಿತ್ತು. ಹೀಗಾಗಿ ಮಹೇಂದ್ರ ಸೀಂಗ್ ಧೋನಿ ಮಹತ್ವದ ಜವಾಬ್ದಾರಿ ಹೊತ್ತಿದ್ದು, ತಂಡವನ್ನ ಮುನ್ನಡೆಸಬೇಕಿತ್ತು.
ಈ ಸೀಸನ್ ಪ್ರತಿ ಪಂದ್ಯದ ವೇಳೆಯಲ್ಲಿ ಧೋನಿಯ ಕಣ್ಣಲ್ಲಿ ಗೆಲುವಿನ ಹಸಿವು ನನಗೆ ಕಂಡಿತ್ತು. ಅದ್ರಲ್ಲೂ ಮ್ಯಾಥ್ಯೂ ಹೇಡನ್ ಜೊತೆಯಲ್ಲಿ ಸೂಪರ್ ರೀಯೂನಿಯನ್ ಕಾರ್ಯಕ್ರಮದಲ್ಲಿ ಧೋನಿ ತುಂಬಾ ಭಾವುಕಗೊಂಡು ಮಾತನಾಡಿದ್ದರು ಎಂದು ಹಸ್ಸಿ ಹಳೆಯ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
GT vs MI: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಇಶಾನ್ ಕಿಶನ್ ಮತ್ತು ರಶೀದ್ ಖಾನ್ ಕಣ್ಣು

2018ರಲ್ಲಿ ಅದ್ಭುತ ಆಟವಾಡಿದ ಧೋನಿ: ಮೈಕಲ್ ಹಸ್ಸಿ
"ಒಂದು ನಿರ್ದಿಷ್ಟ ಸ್ಮರಣೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಈ ಚಾಂಪಿಯನ್‌ಶಿಪ್ ಗೆದ್ದ ಬಳಿಕ ತೆಗೆದ ಫೋಟೋಗಳನ್ನು ಗೋಡೆಯ ಮೇಲೆ ನೋಡುವಾಗ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ. ನಾವು ಎರಡು ವರ್ಷಗಳ ಕಾಲ ಸ್ಪರ್ಧೆಯಿಂದ ಹೊರಗುಳಿದಿದ್ದೇವೆ. ಆನಂತರ ನಾವು ಮರಳಿ ಬಂದೆವು ಮತ್ತು ಋತುವಿನ ಪ್ರಾರಂಭದಲ್ಲಿಯೇ ಎಂಎಸ್ ಭಾಷಣವನ್ನು ನೀಡಿದ್ದು ನನಗೆ ನೆನಪಿದೆ. ಅವರು ನಿಜವಾಗಿ ಭಾವುಕರಾಗಿ ಮಾತುಗಳನ್ನ ಪ್ರಾರಂಭಿಸಿದರು, ಅವನ ಕಣ್ಣುಗಳಿಂದ ಕಣ್ಣೀರು ಬರುತ್ತಿತ್ತು ಮತ್ತು ಇಲ್ಲಿ ಏನೋ ವಿಶೇಷ ನಡೆಯಲಿದೆ ಎಂದು ನಾನು ಯೋಚಿಸಿದ್ದೆ ಎಂದು ಹಸ್ಸಿ ಹೇಡನ್‌ಗೆ ತಿಳಿಸಿದ್ದರು.
'' ಅದೊಂದು ವಿಶೇಷ ಸೀಸನ್. ಆ ವರ್ಷ ಏನಾಯಿತು ಎಂಬುದರ ಕುರಿತು ಯೋಚಿಸಿದ್ರೆ ನಮಗೆ ಮೈನವಿರೇಳಿಸುತ್ತದೆ. ಐಪಿಎಲ್‌ಗೆ ಮರಳಿ ಬಂದ ನಂತರ ಟ್ರೋಫಿ ಗೆಲ್ಲುವುದು ಬಹುತೇಕ ಉದ್ದೇಶವಾಗಿತ್ತು. ಎಂಎಸ್ ಋತುವಿನ ಉದ್ದಕ್ಕೂ ನಂಬಲಾಗದಷ್ಟು ಚೆನ್ನಾಗಿ ಆಡಿದರು. ಅದು ತುಂಬಾ ವಿಶೇಷ ಸಮಯವಾಗಿತ್ತು, "ಎಂದು ಅವರು ಹೇಳಿದರು.
2022ರ ಐಪಿಎಲ್ ಸೀಸನ್‌ನಲ್ಲಿ ಒಟ್ಟು 10 ಪಂದ್ಯಗಳನ್ನ ಆಡಿರುವ ಸಿಎಸ್‌ಕೆ ಕೇವಲ 3 ಪಂದ್ಯಗಳನ್ನ ಮಾತ್ರ ಗೆದ್ದಿದ್ದು, 7 ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ 6 ಪಾಯಿಂಟ್ಸ್ ಗಳಿಸಿದೆ. ಇನ್ನು ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನವನ್ನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications