ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs GT: ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆಡುವ 11ರ ಬಳಗ ಹೇಗಿರಬೇಕು?

2022ರ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ (ಎಂಐ) ಶುಕ್ರವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಅಂಕಪಟ್ಟಿಯ ಟಾಪರ್ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ಸೆಣಸಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧ ಮೊದಲ ಗೆಲುವಿನ ಖಾತೆಯನ್ನು ತೆರೆದ ನಂತರ ಮತ್ತೊಮ್ಮೆ ಗೆಲುವು ಸಾಧಿಸಲು ಯೋಚಿಸುತ್ತಿದೆ.

ಇದೇ ವೇಳೆ ನಾಯಕ ರೋಹಿತ್ ಶರ್ಮಾ ಹೃತಿಕ್ ಶೋಕೀನ್ ಬದಲಿಗೆ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರನ್ನು ಆಡುವ 11ರ ಬಳಗಕ್ಕೆ ಮರಳಿ ತರಬಹುದು. ಮುಂಬೈ ಉತ್ತಮ ಬೌಲಿಂಗ್ ಲೈನ್-ಅಪ್‌ ಹೊಂದಿದ್ದರೆ, ಗುಜರಾತ್ ಟೈಟನ್ಸ್‌ನ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಹಾರ್ಡ್ ಹಿಟ್ಟಿಂಗ್ ಫಿನಿಶರ್‌ಗಳನ್ನು ಹೊಂದಿದೆ. ಈ ಪಂದ್ಯ ಕುತೂಹಲಕಾರಿಯಾಗಿ ಕೂಡಿದೆ.

ಇಶಾನ್ ಕಿಶನ್ ಕೇವಲ 110 ಸ್ಟ್ರೈಕ್ ರೇಟ್‌ನಲ್ಲಿ 225 ರನ್‌

ಇಶಾನ್ ಕಿಶನ್ ಕೇವಲ 110 ಸ್ಟ್ರೈಕ್ ರೇಟ್‌ನಲ್ಲಿ 225 ರನ್‌

ಇಶಾನ್ ಕಿಶನ್: ಈ ಐಪಿಎಲ್ ಟೂರ್ನಿಯನ್ನು ಆರಂಭದ ಪಂದ್ಯದಲ್ಲಿ ಅಬ್ಬರಿಸಿದರೂ, ನಂತರದ ಪಂದ್ಯಗಳಲ್ಲಿ ಇಶಾನ್ ಕಿಶನ್ ಸ್ವಲ್ಪಮಟ್ಟಿಗೆ ವಿಫಲರಾಗಿದ್ದಾರೆ. ಈ ಋತುವಿನಲ್ಲಿ ಅನೇಕ ಸಂದರ್ಭಗಳಲ್ಲಿ ತಮ್ಮ ತಂಡಕ್ಕೆ ಆಸರೆಯಾಗಲು ಸೋತಿದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಟಾಪ್ ಬ್ಯಾಟಿಂಗ್ ಆರ್ಡರ್ ಪ್ರಸ್ತುತ ಇಶಾನ್ ಕಿಶನ್ ಪ್ರದರ್ಶನದ ಮೇಲೆ ನಿಂತಿದೆ. ಇಶಾನ್ ಕಿಶನ್ ಕೇವಲ 110 ಸ್ಟ್ರೈಕ್ ರೇಟ್‌ನಲ್ಲಿ 225 ರನ್‌ ಬಾರಿಸಿದ್ದಾರೆ.

ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ನಾಯಕನ ಬ್ಯಾಟ್ ಕಳೆದ ಎಲ್ಲಾ ಪಂದ್ಯಗಳಲ್ಲಿ ಅಬ್ಬರಿಸಿಲ್ಲ. ಈ ಋತುವಿನಲ್ಲಿ ಒಂಬತ್ತು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಂದೇ ಒಂದು ಅರ್ಧ ಶತಕ ಬಂದಿಲ್ಲ. ಗುಜರಾತ್ ಟೈಟನ್ಸ್ ವಿರುದ್ಧದ ಅವರ ಇನ್ನಿಂಗ್ಸ್ ಹೇಗಿರಲಿದೆ ಎಂಬುದನ್ನು ನೋಡಬೇಕು.

ಸೂರ್ಯಕುಮಾರ್ ಯಾದವ್: ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಈ ರನ್-ಮೆಷಿನ್ ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟ್‌ನೊಂದಿಗೆ ಸೂರ್ಯಕುಮಾರ್ ಯಾದವ್ ಬಹುತೇಕ 49 ಸರಾಸರಿ ಮತ್ತು 147.21ರ ಪ್ರಭಾವಶಾಲಿ ಸ್ಟ್ರೈಕ್-ರೇಟ್ ಅನ್ನು ಹೊಂದಿದ್ದಾರೆ.

ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿಲ್ಲ

ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿಲ್ಲ

ತಿಲಕ್ ವರ್ಮಾ: ಈ ಬಾರಿ MI ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಧನಾತ್ಮಕ ಅಂಶವೆಂದರೆ ತಿಲಕ್ ವರ್ಮಾ ಪ್ರದರ್ಶನ. ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ದಾಳಿಗಳ ವಿರುದ್ಧ ಕಠಿಣ ಪರಿಸ್ಥಿತಿಗಳಲ್ಲಿ ಆಪತ್ಬಾಂಧವನಾಗಿ ಪ್ರದರ್ಶನ ನೀಡಿದ್ದಾರೆ.

ಕೀರನ್ ಪೊಲಾರ್ಡ್: ಕಳೆದ ಹಲವು ವರ್ಷಗಳಲ್ಲಿ ಕೀರನ್ ಪೊಲಾರ್ಡ್ ಬ್ಯಾಟ್ ಮತ್ತು ಬೌಲ್‌ನೊಂದಿಗೆ ಮುಂಬೈ ಇಂಡಿಯನ್ಸ್‌ನ ಪ್ರಚಂಡ ಓಟಕ್ಕೆ ಕಾರಣರಾಗಿದ್ದರು. ಈ ದೈತ್ಯ ಹಿಟ್ಟರ್‌ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಇದು ನಾಯಕ ರೋಹಿತ್ ಶರ್ಮಾಗೆ ಬಹಳಷ್ಟು ತಲೆನೋವು ತಂದೊಡ್ಡಿದೆ.

ಗುಜರಾತ್ ಟೈಟನ್ಸ್ ತಂಡದಲ್ಲಿ ಬಿಗ್ ಹಿಟ್ಟರ್ ಬ್ಯಾಟ್ಸ್‌ಮನ್‌

ಗುಜರಾತ್ ಟೈಟನ್ಸ್ ತಂಡದಲ್ಲಿ ಬಿಗ್ ಹಿಟ್ಟರ್ ಬ್ಯಾಟ್ಸ್‌ಮನ್‌

ಟಿಮ್ ಡೇವಿಡ್: ಸಿಂಗಾಪುರದ ಈ ಆಟಗಾರ ಕೇವಲ 9 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ತಮ್ಮ ದೊಡ್ಡ ಹೊಡೆತದ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಇದು ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 159 ರನ್ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿತು.

ಮುರುಗನ್ ಅಶ್ವಿನ್: ಗುಜರಾತ್ ಟೈಟನ್ಸ್ ತಂಡದಲ್ಲಿ ಬಿಗ್ ಹಿಟ್ಟರ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಹೃತಿಕ್ ಶೋಕಿನ್ ಬದಲಿಗೆ ಲೆಗ್-ಸ್ಪಿನ್ನರ್ ಮುರುಗನ್ ಅಶ್ವಿನ್ ಅನ್ನು ಸೇರಿಸಿಕೊಳ್ಳಬಹುದು. ಈ ಪಂದ್ಯಾವಳಿಯಲ್ಲಿ ಮುರುಗನ್ ಅಶ್ವಿನ್ ಕೆಳಮಟ್ಟದ ಪ್ರದರ್ಶನ ಹೊಂದಿದ್ದರೂ, ಅವರಿಗೆ ಮತ್ತೊಂದು ಅವಕಾಶ ನೀಡಬಹುದು.

ಡೇನಿಯಲ್ ಸ್ಯಾಮ್ಸ್: ಈ ಋತುವಿನಲ್ಲಿ ಉತ್ತಮ ವಿಕೆಟ್‌ಗಳೊಂದಿಗೆ ತಮ್ಮ ಆಯ್ಕೆಯನ್ನು ಬಲವಾಗಿ ಪದೇ ಪದೇ ಸಮರ್ಥಿಸಿದ್ದಾರೆ. ಆದರೆ ಈ ಐಪಿಎಲ್‌ನಲ್ಲಿ ಪವರ್‌ಪ್ಲೇನಲ್ಲಿ ಅವರ ಎಕಾನಮಿ ದೊಡ್ಡ ಚಿಂತೆಯಾಗಿದೆ.

Umran Malikಗೆ ಗೆದ್ದರೂ ಸೋತರೂ ಒಂದು ಲಕ್ಷ ಫಿಕ್ಸ್ | Oneindia Kannada
ಹೃತಿಕ್ ಶೋಕಿನ್ ಬದಲಿಗೆ ಲೆಗ್-ಸ್ಪಿನ್ನರ್ ಮುರುಗನ್ ಅಶ್ವಿನ್

ಹೃತಿಕ್ ಶೋಕಿನ್ ಬದಲಿಗೆ ಲೆಗ್-ಸ್ಪಿನ್ನರ್ ಮುರುಗನ್ ಅಶ್ವಿನ್

ಜಸ್ಪ್ರೀತ್ ಬುಮ್ರಾ: ರಾಜಸ್ಥಾನ ರಾಯಲ್ಸ್ ವಿರುದ್ಧ ಜಸ್ಪ್ರೀತ್ ಬುಮ್ರಾ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಆದರೆ ಉಳಿದ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್ ಪಡೆಯದಿರುವುದು ರೋಹಿತ್ ಚಿಂತೆಗೆ ಕಾರಣವಾಗಿದೆ.

ಕುಮಾರ್ ಕಾರ್ತಿಕೇಯ: ರಾಜಸ್ಥಾನ ರಾಯಲ್ಸ್ ವಿರುದ್ಧ ಕುಮಾರ್ ಕಾರ್ತಿಕೇಯ ಅಸಾಧಾರಣ ಬೌಲಿಂಗ್ ಪ್ರದರ್ಶಿಸಿದರು. ಓವರ್‌ಗಳಲ್ಲಿ 19 ರನ್‌ಗಳನ್ನು ಬಿಟ್ಟುಕೊಟ್ಟು, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರ ಬೆಲೆಬಾಳುವ ವಿಕೆಟ್ ಪಡೆದರು.

ರಿಲೆ ಮೆರೆಡಿತ್: ಆರ್ಆರ್ ಸ್ಪಿನ್ನರ್ಸ್ ರಿಯಾನ್ ಪರಾಗ್ ಮತ್ತು ರವಿಚಂದ್ರನ್ ಅಶ್ವಿನ್ ಅವರಂತೆ ಆರ್ಆರ್ ಮಧ್ಯಮ ಕ್ರಮಾಂಕವನ್ನು ನಿಯಂತ್ರಿಸಿದರು. ತ್ವರಿತ ವಿಕೆಟ್‌ಗಳು ಆರ್‌ಆರ್‌ನ ದೊಡ್ಡ ಮೊತ್ತದ ಕನಸಿಗೆ ತಣ್ಣೀರೆರಚಿತು.

Story first published: Friday, May 6, 2022, 13:09 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X