ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

GT vs MI: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಇಶಾನ್ ಕಿಶನ್ ಮತ್ತು ರಶೀದ್ ಖಾನ್ ಕಣ್ಣು

IPL 2022: Gujarat Titans vs Mumbai Indians players stats and approaching milestones

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 51ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ಅಂಕಪಟ್ಟಿಯ ಟಾಪ್ ತಂಡ vs ಅಂಕಪಟ್ಟಿಯ ಕೊನೆಯ ತಂಡದ ನಡುವಿನ ಕಾಳಗವಾಗಿದ್ದು. ಟೂರ್ನಿಯಲ್ಲಿ ಇಲ್ಲಿಯವರೆಗೂ 10 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತು 16 ಅಂಕಗಳನ್ನು ಪಡೆದುಕೊಂಡಿರುವ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈಗಾಗಲೇ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಸಾಧಿಸಿ, ಉಳಿದ ಎಲ್ಲಾ 8 ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಈಗಾಗಲೇ ಕಳೆದುಕೊಂಡಿದೆ.

RCB vs CSK: ಧೋನಿ ಔಟ್ ಆಗಿದ್ದಕ್ಕೆ ಕೊಹ್ಲಿ ಸಂಭ್ರಮಾಚರಣೆ; ವಿಡಿಯೋ ವೈರಲ್RCB vs CSK: ಧೋನಿ ಔಟ್ ಆಗಿದ್ದಕ್ಕೆ ಕೊಹ್ಲಿ ಸಂಭ್ರಮಾಚರಣೆ; ವಿಡಿಯೋ ವೈರಲ್

ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಹಲವು ಮೈಲಿಗಳನ್ನು ಮುಟ್ಟುವ ಸನಿಹದಲ್ಲಿದ್ದು, ಆ ಮೈಲಿಗಲ್ಲುಗಳ ಪಟ್ಟಿ ಈ ಕೆಳಕಂಡಂತಿದೆ.

• ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ 200 ಸಿಕ್ಸರ್ ಮೈಲುಗಲ್ಲನ್ನು ಮುಟ್ಟಲು ರೋಹಿತ್ ಶರ್ಮ ಈ ಪಂದ್ಯದಲ್ಲಿ 1 ಸಿಕ್ಸರ್ ಬಾರಿಸಬೇಕಾದ ಅಗತ್ಯವಿದೆ. ರೋಹಿತ್ ಶರ್ಮಾ ಈ ಮೈಲಿಗಲ್ಲನ್ನು ಮುಟ್ಟಿದರೆ ಕೀರನ್ ಪೊಲಾರ್ಡ್ ಬಳಿಕ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ 200 ಸಿಕ್ಸರ್ ಬಾರಿಸಿದ ಎರಡನೆ ಆಟಗಾರ ಎಂಬ ಹೆಸರು ಮಾಡಲಿದ್ದಾರೆ.

• ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 147 ಬೌಂಡರಿಗಳನ್ನು ಬಾರಿಸಿರುವ ಇಶಾನ್ ಕಿಶನ್ ಈ ಪಂದ್ಯದಲ್ಲಿ 3 ಬೌಂಡರಿ ಬಾರಿಸಿದರೆ 150 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ನಾಯಕನಾಗಿ ಗೆದ್ದರೆ ಸಾಲುವುದಿಲ್ಲ, ಬ್ಯಾಟ್ ಬೀಸಿ ಅಬ್ಬರಿಸಬೇಕು; ವಿಕೆಟ್ ಕೀಪರ್ ನಾಯಕನಿಗೆ ರೈನಾ ಸಲಹೆನಾಯಕನಾಗಿ ಗೆದ್ದರೆ ಸಾಲುವುದಿಲ್ಲ, ಬ್ಯಾಟ್ ಬೀಸಿ ಅಬ್ಬರಿಸಬೇಕು; ವಿಕೆಟ್ ಕೀಪರ್ ನಾಯಕನಿಗೆ ರೈನಾ ಸಲಹೆ

• ರಶೀದ್ ಖಾನ್ 6 ವಿಕೆಟ್ ಪಡೆದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 450 ವಿಕೆಟ್ ಪಡೆದ ಬೌಲರ್ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ. ಹಾಗೂ ರಶೀದ್ ಖಾನ್ ಈ ದಾಖಲೆಯನ್ನು ವೇಗವಾಗಿ ಮಾಡಿದ ಆಟಗಾರ ಹಾಗೂ ಈ ದಾಖಲೆಯನ್ನು ಮಾಡಿದ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

• ಕ್ವಿಂಟನ್ ಡಿ ಕಾಕ್ 9 ಸಿಕ್ಸರ್ ಬಾರಿಸಿದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 100 ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಡೇವಿಡ್ ಮಿಲ್ಲರ್ ಆಡಲಿರುವ ನೂರನೇ ಐಪಿಎಲ್ ಪಂದ್ಯ ಇದಾಗಿದ್ದು, ಎಬಿ ಡಿವಿಲಿಯರ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಂತರ 100 ಐಪಿಎಲ್ ಪಂದ್ಯಗಳನ್ನಾಡಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಂಬ ಮೈಲಿಗಲ್ಲನ್ನು ನಿರ್ಮಿಸಲಿದ್ದಾರೆ.

ishan

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ ( ನಾಯಕ ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್ / ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್

ಗುಜರಾತ್ ಟೈಟನ್ಸ್ ಸಂಭಾವ್ಯ ಆಡುವ ಬಳಗ: ಶುಭ್‌ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್ / ಯಶ್ ದಯಾಲ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ

Story first published: Friday, May 6, 2022, 8:52 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X