ಧೋನಿ ಗುದ್ದಾಟ: ನಿಷೇಧದಿಂದ ಬಚಾವ್, ಸಂಬಳದಲ್ಲಿ ಕಟ್
ಮೀರ್ ಪುರ್ (ಬಾಂಗ್ಲಾದೇಶ, ಜೂ.19: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದ ಎಡಗೈ ವೇಗಿ ಮುಸ್ತಫಿಜುರ್ ರಹ್ಮಾನ್ ಗೆ ಎಡಗೈನಿಂದ ಗುದ್ದಿದ ಆರೋಪ ಹೊತ್ತಿರುವ ನಾಯಕ ಧೋನಿಗೆ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಪಡೆದ ಸಂಭಾವನೆಯ ಶೇ 75ರಷ್ಟು ದಂಡ ಕಟ್ಟುವಂತೆ ರೆಫ್ರಿ ಹೇಳಿದ್ದಾರೆ. ನಿರೀಕ್ಷಿತ ಪಂದ್ಯದಿಂದ ನಿಷೇಧದಿಂದ ತಪ್ಪಿಸಿಕೊಂಡಿರುವ ಧೋನಿ ಈಗ ದಂಡ ಕಟ್ಟುವುದು ಅನಿವಾರ್ಯವಾಗಿದೆ.
ಭಾರತದ ಇನ್ನಿಂಗ್ಸ್ ವೇಳೆ ಧೋನಿ ಅವರು ಯುವ ವೇಗಿ ಮುಸ್ತಫಿಜುರ್ ರಹ್ಮಾನ್ ಗೆ ಗುದ್ದಿದ್ದು ಈಗ ಬಾಂಗ್ಲಾ ಅಭಿಮಾನಿಗಳ ಪಾಲಿಗೆ ಆಘಾತಕಾರಿಯಾಗಿತ್ತು. [ಧೋನಿ ಡಿಕ್ಕಿ: ಲಾರಿಯೊಂದು ಸ್ಕೂಟರ್ ಗೆ ಗುದ್ದಿದ್ದಂತೆ]
ಪಂದ್ಯದ 25ನೇ ಓವರ್ ನಲ್ಲಿ ಧೋನಿ ಅವರು ರನ್ ಕದಿಯುವಾಗ ಎಡಗೈ ವೇಗಿ ಮುಸ್ತಫಿಝುರ್ ರಹ್ಮಾನ್ ಅವರಿಗೆ ಮೊಣಕೈನಲ್ಲಿ ಗುದ್ದಿದರು. ಅದರೆ, ಧೋನಿ ಬೇಕಂತಲೇ ಈ ರೀತಿ ಮಾಡಿದರು ಎಂದು ಬಾಂಗ್ಲಾ ಅಭಿಮಾನಿಗಳು ಕಿಡಿಕಾರಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಧೋನಿ ಸ್ಪಷ್ಟನೆ ನೀಡಿದ್ದರು. ಅದರೆ, ಹೆಚ್ಚಿನ ವಿವರಣೆ ನೀಡುವಂತೆ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಗುರುವಾರವೇ ಸಮನ್ಸ್ ಜಾರಿಗೊಳಿಸಿದ್ದರು ಎಂದು ಟೀಂ ಮ್ಯಾನೇಜರ್ ಬಿಶ್ವರೂಪ್ ಡೇ ಹೇಳಿದ್ದರು. [ಬಾಂಗ್ಲಾವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದ ಮಾಧ್ಯಮ]
ಅದರಂತೆ, ರೆಫ್ರಿ ಮುಂದೆ ಕುಳಿತ ಧೋನಿ ತಮ್ಮ ಹೇಳಿಕೆ ದಾಖಲಿಸಿದರು. ಪಂದ್ಯದಲ್ಲಿ ನಡೆದ ಈ ಘಟನೆಯ ರೀಪ್ಲೇಗಳನ್ನು ಸಾಕಷ್ಟು ಬಾರಿ ನೋಡಿ, ಐಸಿಸಿ ನಿಯಮದ ಪ್ರಕಾರ ಇದು ಲೆವಲ್ 2 ದರ್ಜೆಯ ಅಪರಾಧ ಎನಿಸಿದೆ. ಹೀಗಾಗಿ, ಧೋನಿ ತಪ್ಪಿತಸ್ಥ ಎಂದು ತೀರ್ಮಾನಕ್ಕೆ ಬರಲಾಗಿದೆ.ಈ ಅಪರಾಧಕ್ಕೆ ಶೇ 100ರಷ್ಟು ಸಂಭಾವನೆ ಕಟ್ ಅಥವಾ ಎರಡು ಪಂದ್ಯಗಳ ನಿಷೇಧ ಹೇರಲಾಗುತ್ತದೆ.
ಜೂ.18ರಂದು ಮೀರ್ ಪುರ್ ನಡೆದು ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಕೆಚ್ಚೆದೆಯ ಪ್ರದರ್ಶನ ನೀಡಿ 79 ರನ್ ಗಳ ಅಂತರದ ಅರ್ಹ ಜಯ ದಾಖಲಿಸಿತು. 308ರನ್ ಗಳ ಚೇಸಿಂಗ್ ನಲ್ಲಿ ಎಂಎಸ್ ಧೋನಿ ಸೇರಿದಂತೆ ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು. [ಮೊದಲ ಪಂದ್ಯದ ವರದಿ]
ಮೊದಲ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ ಆನ್ ಫೀಲ್ಡ್ ಅಂಪೈರ್ ಗಳಾದ ರಾಡ್ ಟಕರ್, ಇನಾಮುಲ್ ಹಕ್ ಮೋನಿ ಅವರೊಂದಿಗೆ ರೆಫ್ರಿ ಪೈಕ್ರಾಫ್ಟ್ ಮೊದಲಿಗೆ ಸಮಾಚೋಲನೆ ನಡೆಸಿದ್ದಾರೆ.[ಏಕದಿನ ಕ್ರಿಕೆಟ್ ಸರಣಿಗೆ ಗೈಡ್]
ನಂತರ ಟೀಂ ಇಂಡಿಯಾ ಮ್ಯಾನೇಜರ್ ಡೇ, ಟೀಂಡ್ ಇಂಡಿಯಾ ಕೋಚ್ ಹಾಗೂ ನಿರ್ದೇಶಕ ರವಿಶಾಸ್ತ್ರಿ ಅವರ ಹೇಳಿಕೆ ಪಡೆಯಲಾಗಿದೆ. ಸ್ಥಳೀಯ ಬಾಂಗ್ಲಾ ಪತ್ರಿಕೆಯೊಂದಿಗೆ ಮಾತನಾಡಿದ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಯುವ ವೇಗಿ ಮುಸ್ತಫಿಜುರ್ ಅವರು ನಾನೇ ಧೋನಿ ದಾರಿಗೆ ಅಡ್ಡಬಂದೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications