ನಿಜವಾಯ್ತು ದಶಕದ ಹಿಂದಿನ ಧೋನಿ ಭವಿಷ್ಯ: ಜಡೇಜಾ ನಂ.1 ಆಲ್‌ರೌಂಡರ್

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ 1 ಆಲ್‌ರೌಂಡರ್ ಆಗಿ ಹೊರಹೊಮ್ಮಿದ ರವೀಂದ್ರ ಜಡೇಜಾ ಕುರಿತಾಗಿ ದಶಕದ ಹಿಂದೆಯೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನುಡಿದಿದ್ದ ಭವಿಷ್ಯ ನಿಜವಾಗಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇನ್ನಿಂಗ್ಸ್ ಸೇರಿದಂತೆ ಬರೋಬ್ಬರಿ 222ರನ್‌ಗಳ ಭಾರೀ ಜಯ ಸಾಧಿಸಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೆಸ್ಟ್ ಫಾರ್ಮೆಟ್‌ನಲ್ಲಿ ಮೊದಲ ಬಾರಿಗೆ ಮುನ್ನಡೆಯುತ್ತಿರುವ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಜಡೇಜಾ ಅಜೇಯ 175 ರನ್‌ಗಳನ್ನ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು. ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲಿ ಒಟ್ಟು 9 ವಿಕೆಟ್‌ಗಳನ್ನ ಕಬಳಿಸಿದ ಜಡ್ಡು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದು ಮಿಂಚಿದ್ರು.
ಆದ್ರೆ, ಇತ್ತೀಚೆಗೆ ಜಡೇಜಾ ಅಗ್ರಸ್ಥಾನಕ್ಕೆ ಏರುವುದಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ಎಂಎಸ್ ಧೋನಿಯ ಹಳೆಯ ಹೇಳಿಕೆಯಾಗಿದೆ.

2010ರಲ್ಲಿ ಜಡೇಜಾ ಕುರಿತು ಭವಿಷ್ಯ ನುಡಿದಿದ್ದ ಎಂ.ಎಸ್ ಧೋನಿ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ 2010ರಲ್ಲೇ 21 ವರ್ಷ ವಯಸ್ಸಿನ ರವೀಂದ್ರ ಜಡೇಜಾ ಭವಿಷ್ಯದ ಸ್ಥಿತಿಯನ್ನ ಅಂದಾಜಿಸಿದ್ದರು. ಭಾರತ ಈ 21 ವರ್ಷದ ಹುಡುಗನನ್ನ ಬೆಂಬಲಿಸಬೇಕು , ಏಕೆಂದರೆ ಭಾರತಕ್ಕೆ ಅಗತ್ಯವಿರುವ ರೀತಿಯ ಆಲ್‌ರೌಂಡರ್ ಈತ ಆಗಬಲ್ಲ ಎಂದು ಹೇಳಿದ್ದರು.
"ನಾವು ತಾಳ್ಮೆಯಿಂದಿರಬೇಕು. ಮುಂದೊಂದು ದಿನ ಜಡೇಜಾ ಭಾರತಕ್ಕೆ ಅಗತ್ಯವಿರುವ ಆಲ್‌ರೌಂಡರ್ ಆಗುತ್ತಾರೆ'' ಎಂದು ಧೋನಿ 2010 ರಲ್ಲಿ ವಿಕ್ರಮ್ ಚಂದ್ರ ಅವರಿಗೆ ಹೇಳಿದ್ದರು.
ಗಮನಾರ್ಹ ವಿಚಾರವೆಂದ್ರೆ ಧೋನಿ ಹೇಳಿದಂತೆ ಜಡೇಜಾ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಕಷ್ಟು ಪ್ರಬುದ್ಧತೆ ಸಾಧಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಜಡ್ಡು ಐದು ವರ್ಷಗಳ ಬಳಿಕ ಮತ್ತೆ ಟೆಸ್ಟ ಕ್ರಿಕೆಟ್‌ನಲ್ಲಿ ನಂಬರ್ ಒನ್ ಆಲ್‌ರೌಂಡರ್ ಆಗಿದ್ದಾರೆ.
IPL 2022: ಈ ಸೀಸನ್‌ನಲ್ಲಿ ಸೆಂಚುರಿ ಸಿಡಿಸಬಲ್ಲ ಐವರು ಆಟಗಾರರು

ಮೂರು ಫಾರ್ಮೆಟ್‌ನಲ್ಲಿ ಜಡ್ಡು ಪವರ್
ರವೀಂದ್ರ ಜಡೇಜಾ ಕೇವಲ ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲದೆ ಟೀಂ ಇಂಡಿಯಾಕ್ಕೆ ಮೂರು ಫಾರ್ಮೆಟ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರನಾಗಿದ್ದಾನೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನ ಬ್ಯಾಲೆನ್ಸ್ ಮಾಡಬಲ್ಲ ಕಂಪ್ಲೀಟ್ ಆಲ್‌ರೌಂಡರ್. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬಂದ್ರೆ ಜಡೇಜಾ ರಾಕ್‌ಸ್ಟಾರ್.
ಕೌಂಟಿಯಲ್ಲಿ ಆಡಲು ಸಸೆಕ್ಸ್ ಪರ ಒಪ್ಪಂದ ಮಾಡಿಕೊಂಡ ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ

ಸಿಎಸ್‌ಕೆ ತಂಡದ ಪ್ರಮುಖ ಕೀ ಪ್ಲೇಯರ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಜಡೇಜಾ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗುವ ತಂಡದ ಸದಸ್ಯರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅತ್ಯಂತ ನಂಬಿಗಸ್ತ ಆಟನಾಗಿರೋ ಜಡ್ಡು ಧೋನಿ ನಂತರದಲ್ಲಿ ಸಿಎಸ್‌ಕೆ ತಂಡದ ಪ್ರಮುಖ ಆಟಗಾರನಾಗಿದ್ದಾನೆ.
ಕೊಹ್ಲಿ 71ನೇ ಶತಕಕ್ಕೆ ಸಾಕ್ಷಿಯಾಗಲಿದೆಯಾ ಬೆಂಗಳೂರು?: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಸಾಧನೆ ಹೇಗಿದೆ?

16 ಕೋಟಿ ರೂಪಾಯಿಗೆ ಜಡ್ಡು ಹರಾಜು
ಪ್ರಸಕ್ತ ಐಪಿಎಲ್ ಸೀಸನ್‌ಗೂ ಮುನ್ನ ನಡೆದ ರೀಟೈನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ.
ಜಡ್ಡು ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನೇ ಹಿಂದೆ ಸರಿಸಿ ರೀಟೈನ್ ಆದ ಮೊದಲ ಪ್ಲೇಯರ್ ಆಗಿದ್ದು, ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿ 12 ಕೋಟಿ ರೂಪಾಯಿಗೆ ಚೆನ್ನೈ ತಂಡ ಸೇರಿರುವುದು ಅಭಿಮಾನಿಗಳಲ್ಲಿ ಖುಷಿ ತರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications