T20 ವಿಶ್ವಕಪ್ ಬಳಿಕ 2 ಬಾರಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ನ್ಯೂಜಿಲೆಂಡ್: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಹೆಚ್ಚು ನಡೆಯದೇ ಹಲವು ವರ್ಷಗಳೇ ಕಳೆದಿವೆ. ಕಳೆದೆರಡು ವರ್ಷಗಳಿಂದ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ತಂಡಗಳು ಪ್ರವಾಸ ಮಾಡಿ ಸರಣಿಗಳನ್ನಾಡಿದ್ದನ್ನ ಕಾಣಬಹುದು. ಆದ್ರೀಗ ಸ್ಥಳೀಯ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಬಂದಿದೆ. ನ್ಯೂಜಿಲೆಂಡ್ ಮುಂದಿನ ಕೆಲವು ತಿಂಗಳಿನಲ್ಲಿ ಒಂದಲ್ಲಾ, ಎರಡು ಬಾರಿ ಪಾಕ್ ಪ್ರವಾಸ ಮಾಡಲಿದೆ.
ಹೌದು ಇತ್ತೀಚಿನ ಅಪ್‌ಡೇಟ್ ಪ್ರಕಾರ ನ್ಯೂಜಿಲೆಂಡ್ ತಂಡವು ಟಿ20 ವಿಶ್ವಕಪ್ ಬಳಿಕ ಎರಡು ಬಾರಿ ಪಾಕಿಸ್ತಾನಕ್ಕೆ ತೆರಳಿ ವಿಭಿನ್ನ ಸರಣಿಗಳಲ್ಲಿ ಭಾಗಿಯಾಗಲಿದೆ. ಈ ಅವಧಿಯಲ್ಲಿ ಟೆಸ್ಟ್, ಏಕದಿನ ಸರಣಿ ಹಾಗೂ ಟಿ20 ಸರಣಿಗಳನ್ನಾಡಲಿದೆ.

ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್‌ನ ಮೊದಲ ಪಾಕ್ ಪ್ರವಾಸ
ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ತಂಡವು ಇದೇ ವರ್ಷ ಡಿಸೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ 2 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 27ರಂದು ಕರಾಚಿಯಲ್ಲಿ ನಡೆಯಲಿದೆ. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯವು ಜನವರಿ 4, 2023ರಂದು ಮುಲ್ತಾನ್‌ನಲ್ಲಿ ಆಯೋಜಿಸಲಾಗಿದೆ. ಈ ಎರಡು ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ನಡೆಯಲಿದ್ದು, ನ್ಯೂಜಿಲೆಂಡ್ ಮೇ 2002ರ ಬಳಿಕ ತನ್ನ ಮೊದಲ ಟೆಸ್ಟ್ ಸರಣಿಯನ್ನು ಪಾಕ್‌ನಲ್ಲಿ ಆಡಲಿದೆ.
ಅಭ್ಯಾಸ ಪಂದ್ಯದಲ್ಲೂ ಅಬ್ಬರಿಸಿದ ಸೂರ್ಯಕುಮಾರ್ ಯಾದವ್: ಬೊಂಬಾಟ್ ಅರ್ಧಶತಕ

ನ್ಯೂಜಿಲೆಂಡ್-ಪಾಕಿಸ್ತಾನ ಏಕದಿನ ಸರಣಿಗೆ ಆತಿಥ್ಯ ವಹಿಸಲಿದೆ ಕರಾಚಿ
ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಏಕದಿನ ಸರಣಿಯ ಮೂರು ಪಂದ್ಯಗಳಿಗೆ ಕರಾಚಿ ಆತಿಥ್ಯ ವಹಿಸಲಿದೆ. ಮೊದಲ ಏಕದಿನ ಪಂದ್ಯವು ಜನವರಿ 11ರಂದು ನಡೆಯಲಿದ್ದು, ಎರಡು ಮತ್ತು ಮೂರನೇ ಒಡಿಐ ಪಂದ್ಯವು ಜನವರಿ 13 ಮತ್ತು 15ರಂದು ನಡೆಯಲಿದೆ.
ಇದಾದ ಬಳಕ ಪಾಕಿಸ್ತಾನ ಸೂಪರ್ ಲೀಗ್ ಫೆಬ್ರವರಿ 9ರಿಂದ ಮಾರ್ಚ್ 19 ವರೆಗೆ ಆಯೋಜಿಸಿರುವ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ತಂಡವು ಏಕದಿನ ಸರಣಿ ಮುಗಿಸಿ ತವರಿಗೆ ಮರಳಲಿದೆ. ಇದಾದ ಬಳಿಕ ಏಪ್ರಿಲ್‌ನಲ್ಲಿ ಕಿವೀಸ್ ತಂಡ ಮತ್ತೆ ಪಾಕಿಸ್ತಾನ ಪ್ರವಾಸ ಮಾಡಲಿದೆ.
T20 World Cup: ಟಿ20 ವಿಶ್ವಕಪ್ ಫೈನಲ್ ತಲುಪುವ ತಂಡಗಳ ಭವಿಷ್ಯ ನುಡಿದ ಕ್ರಿಸ್ ಗೇಲ್

ಏಪ್ರಿಲ್ ತಿಂಗಳಿನಲ್ಲಿ ಐದು ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ
ಎರಡನೇ ಬಾರಿಗೆ ಪಾಕಿಸ್ತಾನ ಪ್ರವಾಸದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಐದು ಟಿ20 ಪಂದ್ಯಗಳು ಮತ್ತು ಐದು ಏಕದಿನ ಪಂದ್ಯಗಳನ್ನ ಆಡಲಿದೆ. ಮೊದಲ ಟಿ20 ಪಂದ್ಯವು ಏಪ್ರಿಲ್ 13, ಎರಡನೇ ಟಿ20 ಪಂದ್ಯವು ಏ.15, ಮೂರನೇ ಟಿ20 ಪಂದ್ಯವು ಏ. 16, ನಾಲ್ಕನೇ ಟಿ20 ಪಂದ್ಯವು ಏ. 19, ಮತ್ತು ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಏಪ್ರಿಲ್ 23ರಂದು ಲಾಹೋರ್‌ನಲ್ಲಿ ನಡೆಯಲಿದೆ. ಮೊದಲ ನಾಲ್ಕು ಟಿ20 ಪಂದ್ಯಗಳಿಗೆ ಕರಾಚಿ ಆತಿಥ್ಯ ವಹಿಸಲಿದೆ.
ಇನ್ನು ಏಕದಿನ ಸರಣಿಯು ಏಪ್ರಿಲ್ 26, 28ರಂದು ಲಾಹೋರ್‌ನಲ್ಲಿ ನಡೆಯಲಿದ್ದು, ಉಳಿದ ಏಕದಿನ ಪಂದ್ಯಗಳು ರಾವಲ್ಪಿಂಡಿಯಲ್ಲಿ ಮೇ 1, 4 ಮತ್ತು 7ರಂದು ಆಯೋಜಿಸಲಾಗಿದೆ.
ನ್ಯೂಜಿಲೆಂಡ್ ತಂಡವು ಈ ಹಿಂದೆ ಸೆಪ್ಟೆಂಬರ್ 2021ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದ್ರೆ ಅಲ್ಲಿ ಒಂದು ಪಂದ್ಯವನ್ನೂ ಆಡದೇ ಸೆಕ್ಯೂರಿಟಿ ಕಾರಣ ಹಿನ್ನಲೆ ತವರಿಗೆ ಮರಳಿತು. ಈ ಪಂದ್ಯಗಳಿಗೆ ಸರಿದೂಗಿಸಲು ಕಿವೀಸ್ ತಂಡವು ಏಪ್ರಿಲ್-ಮೇನಲ್ಲಿ ಮತ್ತೆ ಪಾಕಿಸ್ತಾನ ಪ್ರವಾಸ ಮಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications