ಪಾಕಿಸ್ತಾನ ಸೂಪರ್ ಲೀಗ್ ಮತ್ತು ಐಪಿಎಲ್ 2025ರ ವೇಳಾಪಟ್ಟಿ ನಡುವೆ ತಿಕ್ಕಾಟ: PCB ಎಡವಟ್ಟು

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತನ್ನ 10ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಕುರಿತಾಗಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಅದೇ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್ ನಡೆಯಲಿದ್ದು, ಉಭಯ ಟಿ20 ಲೀಗ್‌ಗಳ ವೇಳಾಪಟ್ಟಿ ಕ್ಲಾಶ್ ಆಗಲಿದೆ.
ಪಾಕಿಸ್ತಾನ ವೇಳಾಪಟ್ಟಿಯು ಸಾಕಷ್ಟು ದೇಶೀಯ ಹಾಗೂ ಅಂತರಾಷ್ಟ್ರೀಯ ಸರಣಿಗಳನ್ನ ಒಳಗೊಂಡಿದ್ದು, 2025ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಗೂ ಕೂಡ ಆತಿಥ್ಯ ವಹಿಸಲಿದೆ. 30 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್‌ಗೆ ಪಾಕಿಸ್ತಾನ ವೇದಿಕೆಯಾಗಲಿದೆ.

ಫೆಬ್ರವರಿ ತಿಂಗಳಿನಲ್ಲಿ ಐಸಿಸಿ ಟೂರ್ನಿ, ಮಾರ್ಚ್‌ನಲ್ಲಿ ಟಿ20 ಲೀಗ್
2025ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ ನಡೆಯಲಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಟಿ20 ಲೀಗ್ ಅನ್ನು ಮಾರ್ಚ್ ಮತ್ತು ಮೇ ತಿಂಗಳ ಮಧ್ಯಬಾಗದಲ್ಲಿ ನಡೆಯಲು ಯೋಜನೆ ರೂಪಿಸಿಕೊಂಡಿದೆ.
ಆದ್ರೆ ಮಾರ್ಚ್‌ನ ಮೊದಲ ವಾರದಿಂದಲೇ ಐಪಿಎಲ್ ಟೂರ್ನಿ ನಡೆಯಲಿದ್ದು, ಐಸಿಸಿಯಿಂದಲೇ ಎರಡು ತಿಂಗಳ ಕಾಲ ಪ್ರತ್ಯೇಕ ವಿಂಡೋವನ್ನು ಪಡೆದುಕೊಂಡಿದೆ. ಹೀಗಾಗಿ ಐಪಿಎಲ್ ಮತ್ತು ಪಿಎಸ್‌ಎಲ್ ನಡುವೆ ನೇರವಾದ ತಿಕ್ಕಾಟವಾಗಲಿದೆ.
KKR ಹೊಸ ಕೋಚ್ ಚಂದ್ರಕಾಂತ್ ಪಂಡಿತ್ ಹಿನ್ನಲೆ ಏನು? ಬ್ರೆಂಡನ್ ಮೆಕಲಮ್‌ಗಿಂತ ಉತ್ತಮರೇ?

2009ರ ಬಳಿಕ ವಿಶ್ವಕಪ್ ಆತಿಥ್ಯ ಕಳೆದುಕೊಂಡಿದ್ದ ಪಾಕಿಸ್ತಾನ
ಟೀಂ ಪಾಕಿಸ್ತಾನ 2009ರ ಬಳಿಕ ವಿಶ್ವಕಪ್, ಚಾಂಪಿಯನ್ ಟ್ರೋಫಿಗಳ ಆತಿಥ್ಯ ವಹಿಸುವ ಅವಕಾಶವನ್ನ ಕಳೆದುಕೊಂಡಿದೆ. ಭದ್ರತಾ ವೈಫಲ್ಯದ ಹಿನ್ನಲೆಯಲ್ಲಿ ಇತರೆ ರಾಷ್ಟ್ರಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದಲ್ಲದೆ ಐಸಿಸಿ ಟೂರ್ನಮೆಂಟ್ ಆಯೋಜನೆಯನ್ನ ತಪ್ಪಿಸಿಕೊಂಡಿತು.
ಆಗಸ್ಟ್ 17 ರಂದು, ವಿಶ್ವ ಕ್ರಿಕೆಟ್ ಮಂಡಳಿಯಾದ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC), 2023 ರಿಂದ 2027 ರ ನಡುವಿನ ಮುಂದಿನ 4 ವರ್ಷಗಳ ಹಂತಕ್ಕಾಗಿ ತನ್ನ ಭವಿಷ್ಯದ ಪ್ರವಾಸ ಕಾರ್ಯಕ್ರಮವನ್ನು (FTP) ಘೋಷಿಸಿತು.
ಇದರಿಂದಾಗಿ, ವೇಳಾಪಟ್ಟಿಯ ಘರ್ಷಣೆಯು 2025 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಪಿಎಸ್‌ಎಲ್‌ನ ಮುಂದಿನ ಋತುವನ್ನು ಏಳು ತಿಂಗಳ ನಂತರ ನಡೆಸಲಾಗುವುದು. ಇದು ಐಪಿಎಲ್ 16ನೇ ಸೀಸನ್ ವೇಳಾಪಟ್ಟಿ ಸಮಯದಲ್ಲಿ ನಡೆಯುತ್ತಿದೆ.
T20 World Cup: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ವಲ್ಪ ಆತಂಕದಲ್ಲಿದೆ ಎಂದ ರಿಷಭ್ ಪಂತ್

2023-24ರಲ್ಲಿ ಪಾಕಿಸ್ತಾನ ಕ್ರಿಕೆಟ್ ವೇಳಾಪಟ್ಟಿ
ಜುಲೈ: ಶ್ರೀಲಂಕಾ ಪ್ರವಾಸ (ಎರಡು ಟೆಸ್ಟ್)
ಆಗಸ್ಟ್: ಅಫ್ಘಾನಿಸ್ತಾನ ಪ್ರವಾಸ (ಮೂರು ODIಗಳು)
ಸೆಪ್ಟೆಂಬರ್: ಪಾಕಿಸ್ತಾನದಲ್ಲಿ ಎಸಿಸಿ 50-ಓವರ್ ಏಷ್ಯಾ ಕಪ್
ಅಕ್ಟೋಬರ್-ನವೆಂಬರ್: ಭಾರತದಲ್ಲಿ ICC ಪುರುಷರ ಕ್ರಿಕೆಟ್ ವಿಶ್ವಕಪ್
2023 ಡಿಸೆಂಬರ್-ಜನವರಿ: ಆಸ್ಟ್ರೇಲಿಯಾ ಪ್ರವಾಸ (ಮೂರು ಟೆಸ್ಟ್)
ಫೆಬ್ರವರಿ-ಮಾರ್ಚ್: ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಸರಣಿ (ಎರಡು ಟೆಸ್ಟ್, ಮೂರು T20I)
ಮೇ: ನೆದರ್ಲೆಂಡ್ಸ್ ಪ್ರವಾಸ (ಮೂರು T20 ಸರಣಿ), ಐರ್ಲೆಂಡ್ (ಮೂರು T20 ಸರಣಿ) ಮತ್ತು ಇಂಗ್ಲೆಂಡ್ (ಐದು T20 ಸರಣಿ)
ಜೂನ್: ICC ಪುರುಷರ T20 ವಿಶ್ವಕಪ್ ಯುಎಸ್‌ಎ/ವೆಸ್ಟ್ ಇಂಡೀಸ್ 2024
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications