ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ಹೊಸ ಕೋಚ್‌ ಚಂದ್ರಕಾಂತ್ ಪಂಡಿತ್ ಹಿನ್ನಲೆ ಏನು? ಬ್ರೆಂಡನ್ ಮೆಕಲಮ್‌ಗಿಂತ ಉತ್ತಮರೇ?

Chandrakant pandit

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಮುಂಬರುವ ಸೀಸನ್‌ಗೆ ಈಗಾಗಲೇ ಫ್ರಾಂಚೈಸಿಗಳು ತಯಾರಿ ಶುರುಮಾಡಿದ್ದು, ಇದರ ಪರಿಣಾಮವೇ ಕೊಲ್ಕತ್ತಾ ನೈಟ್ ರೈಡರ್ಸ್‌ ಫ್ರಾಂಚೈಸಿ ಮುಖ್ಯ ಕೋಚ್ ಅನ್ನು ಬದಲಿಸಿ, ಹೊಸ ಕೋಚ್‌ಗೆ ಮಣೆ ಹಾಕಿದೆ.

ವಿದೇಶಿ ಕೋಚಿಂಗ್ ಸಂಸ್ಕೃತಿಗೆ ಗುಡ್‌ಬೈ ಹೇಳಿರುವ ಕೆಕೆಆರ್, ದೇಶೀಯ ಮಟ್ಟದಲ್ಲಿ ಅತ್ಯಂತ ಯಶಸ್ವಿ ಕೋಚ್ ಎಂದೇ ಗುರುತಿಸಿಕೊಂಡಿರುವ ಚಂದ್ರಕಾಂತ್ ಪಂಡಿತ್‌ರನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಚಂದ್ರಕಾಂತ್ ಪಂಡಿತ್ ಅಂತರಾಷ್ಟ್ರೀಯ ಮಟ್ಟದ ಟಿ20 ಲೀಗ್ ಟೂರ್ನಿಯಲ್ಲಿ ಮೊದಲ ಬಾರಿಗೆ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ದೇಶೀಯ ಟೂರ್ನಮೆಂಟ್‌ಗಳಲ್ಲಿ ಎಂತಹದ್ದೇ ತಂಡವನ್ನ ಚಾಂಪಿಯನ್ ಮಾಡುವ ಸಾಮರ್ಥ್ಯವನ್ನ ಈಗಾಗಲೇ ಪ್ರದರ್ಶಿಸಿರುವ ಚಂದ್ರಕಾಂತ್ ಪಂಡಿತ್ ಆಯ್ಕೆ ಏಕೆ? ಅವರ ನಿಜವಾದ ರೆಕಾರ್ಡ್‌ಗಳೇನು ಎಂಬುದನ್ನ ಈ ಕೆಳಗೆ ತಿಳಿಯಿರಿ.

ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಕೋಚ್ ಆಗಿರುವ ಚಂದ್ರಕಾಂತ್ ಪಂಡಿತ್

ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಕೋಚ್ ಆಗಿರುವ ಚಂದ್ರಕಾಂತ್ ಪಂಡಿತ್

ಸದ್ಯ ಕಳೆದೊಂದು ದಶಕದಿಂದ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಕೋಚ್ ಅಂದ್ರೆ ಚಂದ್ರಕಾಂತ್ ಪಂಡಿತ್ ಅಲ್ಲದೆ ಮತ್ಯಾರು ಅಲ್ಲ. ಮಾರ್ಚ್ 2020 ರಲ್ಲಿ ಮಧ್ಯಪ್ರದೇಶದ ಕೋಚ್ ಹುದ್ದೆಯನ್ನು ವಹಿಸಿಕೊಂಡ ನಂತರ, ಚಂದ್ರಕಾಂತ್ ಪಂಡಿತ್ ಅವರು ನಡೆಯುತ್ತಿರುವ ಋತುವಿನಲ್ಲಿ ಸಾಕಷ್ಟು ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯೊಂದಿಗೆ ತನ್ನ ಕೆಲಸವನ್ನು ಮುಂದುವರೆಸಿದರು.

ಯುವ ಪಡೆಯನ್ನ ಕಟ್ಟಿದ ಚಂದ್ರಕಾಂತ್ ತಂಡಕ್ಕೆ ನೀಡಿದ್ದ ಮಾರ್ಗದರ್ಶನದಿಂದಲೇ ಚೊಚ್ಚಲ ಟ್ರೋಫಿಯನ್ನ ಮಧ್ಯಪ್ರದೇಶ ಮುಡಿಗೇರಿಸಿಕೊಂಡಿದೆ. ಈ ಮೂಲಕ ಕಳೆದ ಏಳು ವರ್ಷಗಳಲ್ಲಿ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ತಂಡವು 4 ರಣಜಿ ಟ್ರೋಫಿಯನ್ನ ಗೆದ್ದು ಬೀಗಿದೆ.

ಅವರು 2015-16 ರಲ್ಲಿ ಮುಂಬೈನ ಕೋಚ್ ಆಗಿದ್ದರು ಆಗ ಮುಂಬೈ ತಂಡವು ಟ್ರೋಫಿಯನ್ನು ಗೆದ್ದಿತು. ನಂತರ ಚಂದ್ರ ಕಾಂತ್ ಪಂಡಿತ್ ಅವರು ವಿಧರ್ಭ ಕೋಚ್ ಆಗಿದ್ದು, 2017-18 ಮತ್ತು 2018-19 ರಲ್ಲಿ ವಿದರ್ಭ ತಂಡವು ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಸಾಲಿಗೆ ಈಗ ಮಧ್ಯಪ್ರದೇಶ ಕೂಡ ಸೇರಿಕೊಂಡಿದೆ.

Ind vs Zim 1st ODI: ಟಾಸ್ ವರದಿ, ಪ್ಲೇಯಿಂಗ್ 11, LIVE SCORE

ಮಧ್ಯಪ್ರದೇಶ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿರುವ ಪಾಟೀಲ್

ಮಧ್ಯಪ್ರದೇಶ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿರುವ ಪಾಟೀಲ್

ಚಂದ್ರಕಾಂತ್ ಪಾಟೀಲ್‌ಗೆ ಯಾವುದು ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಕಳೆದ ರಣಜಿ ಟ್ರೋಫಿ ಸಾಕ್ಷಿಯಾಗಿದೆ. ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಕಬ್ಬಿಣದ ಕಡಲೆಯಾಗಿದ್ದ ರಣಜಿ ಟ್ರೋಫಿ ಗೆಲುವನ್ನ ಮಧ್ಯಪ್ರದೇಶ ಪಡೆದುಕೊಳ್ಳುವಲ್ಲಿ ಕೋಚ್ ಚಂದ್ರಕಾಂತ್ ಪಂಡಿತ್ ಶ್ರಮ ಅಷ್ಟಿಷ್ಟಲ್ಲ.

ಅದ್ರಲ್ಲೂ ಮುಂಬೈನಂತಹ ಬಲಿಷ್ಠ ತಂಡವನ್ನ ಫೈನಲ್‌ನಲ್ಲಿ ಸೋಲಿಸಿ ಮಧ್ಯಪ್ರದೇಶ ತಂಡವು ಕಳೆದ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಈ ಮೂಲಕ ಚಂದ್ರಕಾಂತ್ ಪಂಡಿತ್‌ಗೆ ಆಗದೇ ಇರುವುದನ್ನ ಯುವ ಮಧ್ಯಪ್ರದೇಶ ತಂಡವು ಮಾಡಿ ತೋರಿಸಿದೆ.

1988-89ರಲ್ಲಿ ಮಧ್ಯಪ್ರದೇಶತ ತಂಡಕ್ಕೆ ನಾಯಕನಾಗಿ ಸ್ಪರ್ಧಿಸಿದ್ದ ಚಂದ್ರಕಾಂತ್ ಏಕೈಕ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೋತಿದ್ದರು. ಅದು ಕೂಡ ಚಿನ್ನಸ್ವಾಮಿ ಮೈದಾನದಲ್ಲಿ ಮುಗ್ಗರಿಸಿದ್ದ ತಂಡವು, ಅಲ್ಲಿಯೇ ಸ್ಮರಣೀಯ ಗೆಲುವಿಗೆ ಕಾರಣವಾಯಿತು. ಈ ಮೂಲಕ ಚಂದ್ರಕಾಂತ್ ಕಳೆದುಕೊಂಡಿದ್ದ ಜಾಗದಲ್ಲೇ ಗೆಲುವನ್ನ ಮರಳಿ ಪಡೆದರು. ಜೊತೆಗೆ ಮೈದಾನದಲ್ಲಿಯೇ ಭಾವನಾತ್ಮಕ ಕಣ್ಣೀರು ಕೂಡ ಹಾಕಿದ್ದರು.

ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ? ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

Ravi Shastri ಅವಧಿಯಲ್ಲಿ ದಿನೇಶ್ ಕಾರ್ತಿಕ್ ಭಯಪಟ್ಟಿದ್ದು ಯಾಕೆ? | *Cricket | OneIndia Kannada
ಚಂದ್ರಕಾಂತ್ ಪಂಡಿತ್‌ಗೆ ಫುಲ್ ಡಿಮ್ಯಾಂಡ್‌!

ಚಂದ್ರಕಾಂತ್ ಪಂಡಿತ್‌ಗೆ ಫುಲ್ ಡಿಮ್ಯಾಂಡ್‌!

2020ರಲ್ಲಿ ಮಧ್ಯಪ್ರದೇಶದ ಕೋಚ್ ಹುದ್ದೆಗೆ ಆಹ್ವಾನ ಬಂದಾಗ ಚಂದ್ರಕಾಂತ್ ಇತರೆ ಅನೇಕ ರಾಜ್ಯಗಳ ಕ್ರಿಕೆಟ್‌ ಬೋರ್ಡ್ ತಮ್ಮ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಆಫರ್ ನೀಡಿದ್ದರು. ಆದ್ರೆ ಅವೆಲ್ಲವನ್ನ ಸಾರಾಸಗಟಾಗಿ ತಳ್ಳಿಹಾಕಿದ ಪಂಡಿತ್, ತಾನೇ ಪ್ರತಿನಿಧಿಸಿದ ಮಧ್ಯಪ್ರದೇಶ ತಂಡದ ಕೋಚ್ ಆಗಲು ಒಪ್ಪಿಕೊಂಡರು.

ಯಾವಾಗಲೂ ಸವಾಲಿನ ಕೆಲಸವನ್ನು ನಿರ್ವಹಿಸಲು ಮುಂದಾಗುವ ಪಾಟೀಲ್, ಒಂದು ಬಾರಿಯೂ ರಣಜಿ ಟ್ರೋಫಿ ಗೆಲ್ಲದ ಮಧ್ಯಪ್ರದೇಶ ತಂಡವನ್ನು ಆಯ್ದುಕೊಂಡು, ಚಾಂಪಿಯನ್ ಪಟ್ಟಕ್ಕೇರಿಸಿದರು.

ಹೀಗೆ ದೇಶೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಗೆಲುವಿನ ಟ್ರ್ಯಾಕ್ ರೆಕಾರ್ಡ್‌ ಹೊಂದಿರುವ ಚಂದ್ರಕಾಂತ್ ಪಂಡಿತ್ ಇದೀಗ ಐಪಿಎಲ್‌ ಮೆಗಾ ಟೂರ್ನಮೆಂಟ್‌ಗೂ ಪ್ರವೇಶ ಪಡೆದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಪುನರ್ ನಿರ್ಮಿಸುವಲ್ಲಿ ಚಂದ್ರಕಾಂತ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

Story first published: Thursday, August 18, 2022, 15:45 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X