ರಣಜಿ ಕ್ವಾರ್ಟರ್‌ಫೈನಲ್: ಉತ್ತರಾಖಂಡ್ ವಿರುದ್ಧ ಮುಂಬೈಗೆ 725ರನ್‌ಗಳ ದಾಖಲೆ ಗೆಲುವು

ಆಲೂರಿನ ಕೆಎಸ್‌ಸಿಎ ಎರಡನೇ ಮೈದಾನದಲ್ಲಿ ನಡೆದ ರಣಜಿ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಉತ್ತರಾಖಂಡ್ ವಿರುದ್ಧ ದಾಖಲೆಯ ಗೆಲುವು ಪಡೆದಿದೆ. ಬಲಿಷ್ಠ ಮುಂಬೈ ವಿರುದ್ಧ ಮಂಡಿಯೂರಿದ ಉತ್ತರಾಖಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 69ರನ್‌ಗಳಿಗೆ ಆಲೌಟ್ ಆಗಿದ್ದು, ಮುಂಬೈ 725ರನ್‌ಗಳ ಭಾರೀ ಗೆಲುವಿನ ನಗೆ ಬೀರಿದೆ.
ಉತ್ತರಾಖಂಡ್ ಪರ ಕುನಾಲ್ ಚಂಡೇಲಾ 21, ಶಿವಂ ಕುರಾನ 25 ರನ್‌ಗಳಿಸಿದ್ದು ಬಿಟ್ಟರೆ, ಉಳಿದೆಲ್ಲಾ ಬ್ಯಾಟರ್‌ಗಳು ಎರಡಂಕಿ ಮುಟ್ಟಲು ವಿಫಲಗೊಂಡರು. ಪರಿಣಾಮ ಬೃಹತ್ ಮೊತ್ತ ಬೆನ್ನತ್ತಿದ ಉತ್ತರಾಖಂಡ್ 27.5 ಓವರ್‌ಗಳಲ್ಲಿ 69ರನ್‌ಗಳಿಗೆ ಆಲೌಟ್ ಆಗಿದೆ.
ಮುಂಬೈ ಪರ ಧವಳ್ ಕುಲಕರ್ಣಿ, ಶಾಮ್ಸ್ ಮುಲನಿ, ತನುಷ್ ಕೊಟ್ಟಾಯನ್ ತಲಾ 3 ವಿಕೆಟ್ ಪಡೆದ್ರೆ, ಮೋಹಿತ್ ಅವಸ್ತಿ 1 ವಿಕೆಟ್ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಮುಂಬೈ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 647ರನ್ ಕಲೆಹಾಕಿತು. ಮುಂಬೈ ಪರ ಸುವೆದ್ ಪರ್ಕರ್ 252, ಸರ್ಫರಾಜ್ ಖಾನ್ 153ರನ್ ಸಿಡಿಸುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣವಾದ್ರು. ಇದಕ್ಕೆ ಉತ್ತರವಾಗಿ ಉತ್ತರಾಖಂಡ್ ಕೇವಲ 114ರನ್‌ಗೆ ಆಲೌಟ್ ಆಯಿತು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಮೂರು ವಿಕೆಟ್ ನಷ್ಟಕ್ಕೆ 261ರನ್ ಕಲೆಹಾಕುವ ಮೂಲಕ ಉತ್ತರಾಖಂಡ್‌ಗೆ 795ರನ್‌ಗಳ ಬೆಟ್ಟದಂತಹ ಗುರಿಯನ್ನ ನೀಡಿತು. ಆದ್ರೆ ಈ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಉತ್ತರಾಖಂಡ್ ಹೀನಾಯ ಸೋಲನ್ನ ಕಂಡಿದೆ. ಮುಂಬೈ ತಂಡವು ರಣಜಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಇದು ಬಹುದೊಡ್ಡ ಗೆಲುವಾಗಿ ಪರಿಣಮಿಸಿದೆ.
ರಣಜಿಯಲ್ಲಿ ವಿಶ್ವದಾಖಲೆ: 9 ಬ್ಯಾಟರ್‌ಗಳಿಂದ ಐತಿಹಾಸಿಕ ಸಾಧನೆ: 129 ವರ್ಷಗಳ ವಿಶ್ವದಾಖಲೆ ಮುರಿದ ಬಂಗಾಳ

ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮಧ್ಯ ಪ್ರದೇಶ
ಆಲೂರಿನ ಕೆಎಸ್‌ಸಿಎ ಮೂರನೇ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಕೂಡ ಭಾರೀ ಗೆಲುವು ದಾಖಲಿಸಿತು. ಪಂಜಾಬ್ ವಿರುದ್ಧ ಸುಲಭ ಗುರಿ ಬೆನ್ನತ್ತಿ 10 ವಿಕೆಟ್‌ಗಳ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್ ನೀಡಿದ್ದ 26ರನ್‌ಗಳ ಗುರಿ ಬೆನ್ನತ್ತಿದ ಮಧ್ಯ ಪ್ರದೇಶ ವಿಕೆಟ್ ನಷ್ಟವಿಲ್ಲ ಗುರಿ ತಲುಪಿ ಸಂಭ್ರಮಿಸಿತು. ಮಧ್ಯಪ್ರದೇಶ ಪರ ಹಿಮಾಂಶು ಮಂತ್ರಿ ಅಜೇಯ 9, ಯಶ್ ದುಬೆ ಅಜೇಯ 17ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.
ದ.ಆಫ್ರಿಕಾ ವಿರುದ್ಧ ಟಿ20 ಸರಣಿ ಮಿಸ್ ಮಾಡಿಕೊಂಡ ಕೆ.ಎಲ್ ರಾಹುಲ್: ಒಪ್ಪಿಕೊಳ್ಳುವುದು ಕಷ್ಟಸಾಧ್ಯ ಎಂದ ಕನ್ನಡಿಗ

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಮಧ್ಯಪ್ರದೇಶ
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡು ಪಂಜಾಬ್ ಅಂದುಕೊಂಡಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲಗೊಂಡಿತು. ನಾಯಕ ಅಭಿಷೇಕ್ ಶರ್ಮಾ 47, ಅನ್ಮೋಲ್ ಪ್ರೀತ್ ಸಿಂಗ್ 47, ಸನ್ವೀರ್ ಸಿಂಗ್ 41ರನ್‌ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಎಡವಿದ್ರು. ಪರಿಣಾಮ ಪಂಜಾಬ್ ಮೊದಲ ಇನ್ನಿಂಗ್ಸ್‌ನಲ್ಲಿ 219ರನ್‌ಗಳಿಗೆ ಆಲೌಟ್ ಆಯ್ತು.
ಇದಕ್ಕುತ್ತರಾವಾಗಿ ಬ್ಯಾಟಿಂಗ್ ಮಾಡಿದ ಮಧ್ಯ ಪ್ರದೇಶ ಪರ ಹಿಮಾಂಶು 89, ಶುಭಂ ಶರ್ಮಾ 102, ರಜತ್ ಪಾಟೀದರ್ 85 ರನ್, ಅಕ್ಷತ್ ರಘುವಂಶಿ 69 ರನ್‌ಗಳ ನೆರವಿನಿಂದ 397ರನ್ ಕಲೆಹಾಕಿತು. ಜೊತೆಗೆ 178ರನ್‌ಗಳ ಉತ್ತಮ ಲೀಡ್ ಪಡೆಯಿತು.
ಆದ್ರೆ ಪಂಜಾಬ್ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಉತ್ತಮ ಆಟವಾಡುವಲ್ಲಿ ವಿಫಲಗೊಂಡು 203ರನ್ ಕಲೆಹಾಕಿದ್ದರ ಪರಿಣಾಮ ಎದುರಾಳಿಗೆ ಕೇವಲ 26ರನ್‌ಗಳ ಗುರಿ ನೀಡಿ ಸೋಲನ್ನ ಒಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications