
ಸಿಎಸ್‌ಕೆ ಪರ 10 ವರ್ಷಗಳಿಂದ ಆಡುತ್ತಿರುವ ಜಡೇಜಾ
ಸ್ಟಾರ್ ಆಲ್‌ರೌಂಡರ್ ಜಡ್ಡು ಸಿಎಸ್‌ಕೆ ಪರ 10 ವರ್ಷಗಳಿಂದ ಆಡುತ್ತಿದ್ದಾರೆ. ಫ್ರಾಂಚೈಸಿ ಆಟಗಾರರನ್ನ ಚೆನ್ನಾಗಿ ನೋಡಿಕೊಳ್ಳುತ್ತದೆ, ಹೀಗಾಗಿಯೇ ಫ್ರಾಂಚೈಸಿಯು ಮನೆಯಂತೆ ಭಾವನೆಗಳನ್ನ ತಂದುಕೊಡುತ್ತದೆ ಎಂದು ಅವರು ಭಾವಿಸುತ್ತಾರೆ. ವಿಶೇಷವಾಗಿ ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಧನ್ಯವಾದಗಳು ಹೇಳಲು ಬಯಸಿರುವ ಜಡ್ಡು, ಅವರ ವೃತ್ತಿಜೀವನದ ಆಧಾರ ಸ್ತಂಭ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನನ್ನ ಮನೆಯಿದ್ದಂತೆ ಎಂದ ಆಲ್‌ರೌಂಡರ್
'ಸಿಎಸ್‌ಕೆ ನನಗೆ ಮನೆಯಿದ್ದಂತೆ 10 ವರ್ಷಗಳಿಂದ ಈ ಫ್ರಾಂಚೈಸಿಗಾಗಿ ಆಡುತ್ತಿದ್ದೇನೆ. ಫ್ರಾಂಚೈಸಿ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದು, ನಾನು ಕೇಳಿದ್ದನ್ನೆಲ್ಲಾ ಕೊಡುತ್ತೇನೆ. ನಾನು ಇಲ್ಲಿಯವರೆಗೆ ಕೇಳಿದ್ದು ಯಾವುದೂ ತಪ್ಪಿಲ್ಲ. ಸಹಾಯಕ ಸಿಬ್ಬಂದಿ, ಸಿಇಒ ಕಾಶಿ ಸರ್ ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ. ಅವರೆಲ್ಲ ನನಗೆ ತುಂಬಾ ವಿಶೇಷ. ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುವ ಯಾರಾದರೂ ಇದ್ರೆ, ಅದು ಮಾಹಿ ಭಾಯಿ ಎಂದಿದ್ದಾರೆ.
ರಣಜಿ ಕ್ರಿಕೆಟ್: ತನ್ನ ಮಗುವಿನ ಅಂತ್ಯಕ್ರಿಯೆ ಮುಗಿಸಿ ಬಂದು, ಶತಕ ಸಿಡಿಸಿದ ವಿಷ್ಣು ಸೋಲಂಕಿ

ಧೋನಿ ನನ್ನ ಕ್ರಿಕೆಟ್ ಜೀವನದ ಆಧಾರ ಸ್ತಂಭ
ಮಹೇಂದ್ರ ಸಿಂಗ್ ಧೋನಿ ಭಾಯ್ ನನ್ನ ಕ್ರಿಕೆಟ್ ಜೀವನದ ಆಧಾರ ಸ್ತಂಭ. ನನ್ನ ವೃತ್ತಿಜೀವನದ ಆರಂಭದಿಂದಲೂ ಭಾರತ ಅಥವಾ ಸಿಎಸ್‌ಕೆ ಬೆಂಬಲಕ್ಕೆ ನಿಂತಿಲ್ಲ. ನನಗಷ್ಟೇ ಅಲ್ಲ, ಈ ತಂಡದಲ್ಲಿದ್ದ ಎಲ್ಲರಿಗೂ ಅದೇ ಭಾವನೆ ಇದೆ. ಆದರೂ ಸಿಎಸ್ ಕೆ ಪರ ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಮುಂದೆಯೂ ಈ ತಂಡದ ಪರವಾಗಿ ಮುಂದುವರಿಯಲು ಬಯಸುತ್ತೇನೆ. ನನ್ನ ವೃತ್ತಿಜೀವನದ ಕೊನೆಯ ಪಂದ್ಯದವರೆಗೂ ಸಿಎಸ್‌ಕೆ ಜೊತೆ ಇರುತ್ತೇನೆ ಎಂದು ಜಡೇಜಾ ಹೇಳಿದ್ದಾರೆ.
ಪ್ರೊ ಕಬಡ್ಡಿ ಲೀಗ್: 8 ಸೀಸನ್, 8 ಚಾಂಪಿಯನ್ ಹಾಗೂ ರನ್ನರ್ ಅಪ್ ಪಟ್ಟಿ ಇಲ್ಲಿದೆ

ಸಿಎಸ್‌ಕೆ ಹೇರ್‌ಸ್ಟೈಲ್ ನೆನಸಿಕೊಂಡ ಜಡ್ಡು
ಸಿಎಸ್‌ಗಾಗಿ ಆಡುವ ಸಂದರ್ಭದ ಆರಂಭಿಕ ಸೀಸನ್‌ಗಳಲ್ಲಿ ರವೀಂದ್ರ ಜಡೇಜಾ ವಿನೂತನ ಕ್ಷೌರದೊಂದಿಗೆ ಕಾಣಿಸಿಕೊಂಡಿದ್ದಾರೆ. ಅಕ್ಷರಗಳು ಗೋಚರಿಸುವಂತೆ CSK ಎಂದು ತನ್ನ ಕೂದಲನ್ನು ಟ್ರಿಮ್ ಮಾಡಿದ್ದಾರೆ. ಈ ಫೋಟೋ ಬಗ್ಗೆ ಕೇಳಿದಾಗ, ಜಡೇಜಾ ಆ ದಿನಗಳನ್ನು ನೆನಪಿಸಿಕೊಂಡರು. 'ಸುರೇಶ್ ರೈನಾ, ನಾನು ಕ್ಷೌರ ಮಾಡಿಸಿಕೊಳ್ಳಲು ಬಯಸಿದ್ದೆವು. ಇಬ್ಬರೂ ಒಟ್ಟಿಗೆ ಕ್ಷೌರದಂಗಡಿಗೆ ಹೋಗಿದ್ದೆವು. ಮೊದಲು ರೈನಾ ಹೇರ್‌ಕಟ್ ಮಾಡಿಸಿದ್ರು. ಆ ನಂತರ ನನ್ನ ಹೇರ್ ಕಟ್ ಮಾಡುವ ವೇಳೆ ಅದನ್ನು ವಿಭಿನ್ನವಾಗಿ ಮಾಡಬಹುದೇ? ಎಂದು ರೈನಾ ಪ್ರಶ್ನಿಸಿದರು. ನಿನ್ನ ಹೆಸರು ಕಾಣಿಸುವಂತೆ ಮಾಡುವಂತೆ ಕೇಳಿಕೊಂಡರು. ಅದಕ್ಕೆ ನಾನು ಒಪ್ಪಲಿಲ್ಲ, ಆನಂತರ ಸಿಎಸ್‌ಕೆ ಹೆಸರನ್ನು ಬರೆಯುವಂತೆ ಸೂಚಿಸಿದಾಗ ಅದಕ್ಕೆ ಒಪ್ಪಿದೆ. ಕೂದಲು ಕಟ್ ಮಾಡಿದರೂ ಸಿಎಸ್ ಕೆ ಅಕ್ಷರಗಳು ಕಾಣಿಸುತ್ತಿದ್ದವು'' ಎಂದು ಜಡೇಜಾ ಹೇಳಿದ್ದಾರೆ.
ಹೀಗೆ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ಜಡೇಜಾ ಕೆಲವು ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರ ನೀಡಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು ನಿಮಗೆ 18 ರನ್ ಗಳಿಸಬೇಕು ಅಥವಾ ನೀವು 11 ರನ್‌ಗಳನ್ನು ಡಿಫೆಂಡ್ ಮಾಡಬೇಕಾದಾಗ, ನೀವು ಯಾವ ಪಾತ್ರವನ್ನು ಆರಿಸುತ್ತೀರಿ..? ಎಂದು ಕೇಳಿದ ಪ್ರಶ್ನೆಗೆ ಅವರು 18 ರನ್ ಕಲೆಹಾಕಲು ಇಷ್ಟಪಡುತ್ತೇನೆ ಎಂದು ಹೇಳಿದರು. ಅಂತಹ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದರು. ಜೊತೆಗೆ ಇಂಗ್ಲೆಂಡ್‌ನ ಓವಲ್‌ನಲ್ಲಿ ಆಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದರು.


Click it and Unblock the Notifications












