ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: 8 ಸೀಸನ್‌, 8 ಚಾಂಪಿಯನ್ ಹಾಗೂ ರನ್ನರ್ ಅಪ್‌ ಪಟ್ಟಿ ಇಲ್ಲಿದೆ

Dabang delhi

ಪ್ರೊ ಕಬಡ್ಡಿ ಲೀಗ್ ಸೀಸನ್ 8ರ ಫೈನಲ್‌ನಲ್ಲಿ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನ ಮಣಿಸಿದ ದಬಾಂಗ್ ಡೆಲ್ಲಿ ಪ್ರಸ್ತುತ ಸೀಸನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ರಣರೋಚಕ ಸೆಣೆಸಾಟದಲ್ಲಿ 37-36 ಅಂಕಗಳಿಂದ ಗೆದ್ದು ಬೀಗಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಪಾಟ್ನಾ ಪೈರೇಟ್ಸ್‌ ಇದೇ ಮೊದಲ ಬಾರಿಗೆ ಫೈನಲ್ ಅಖಾಡದಲ್ಲಿ ಸೋಲನ್ನ ಕಂಡಿದೆ.

ಇದಕ್ಕೂ ಮೊದಲು, ಪಾಟ್ನಾ ಪೈರೇಟ್ಸ್ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು, ಜೈಪುರ ಪಿಂಕ್ ಪ್ಯಾಂಥರ್ಸ್ ಉದ್ಘಾಟನಾ ಸೀಸನ್‌ನಲ್ಲಿ ಚಾಂಪಿಯನ್ ಆಗಿದೆ. ಎರಡನೇ ಋತುವಿನಲ್ಲಿ, ಯು ಮುಂಬಾ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಅದರ ನಂತರ ಪಾಟ್ನಾ ಸತತ ಮೂರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತು. ಆರನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿದೆ.

ಏಳನೇ ಸೀಸನ್ ನಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಬೆಂಗಾಲ್ ವಾರಿಯರ್ಸ್ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗೆ ಪ್ರತಿ ಸೀಸನ್‌ನಲ್ಲಿ ಗೆದ್ದಂತಹ ತಂಡ ಮತ್ತು ರನ್ನರ್‌ ಅಪ್‌ಗಳ ಮಾಹಿತಿ ಈ ಕೆಳಗಿದೆ.

ಸೀಸನ್‌ 1: ಜೈಪುರ ಪಿಂಕ್ ಪ್ಯಾಂಥರ್ಸ್‌

ಸೀಸನ್‌ 1: ಜೈಪುರ ಪಿಂಕ್ ಪ್ಯಾಂಥರ್ಸ್‌

ಸೀಸನ್ ಒಂದರಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್ ಪಾಟ್ನಾ ಪೈರೇಟ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಮತ್ತೊಂದೆಡೆ, ಸೆಮಿಫೈನಲ್ 2 ರಲ್ಲಿ ಯು ಮುಂಬಾ ಬೆಂಗಳೂರು ಬುಲ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜೈಪುರ ತಂಡ ಯು ಮುಂಬಾ ತಂಡವನ್ನು 35-24 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಸೀಸನ್ 2: ಯು ಮುಂಬಾ

ಸೀಸನ್ 2: ಯು ಮುಂಬಾ

ಯು ಮುಂಬಾ ತಂಡದ ಸೀಸನ್ 2ನಲ್ಲೂ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಸೆಮೀಸ್‌ನಲ್ಲಿ ಪಾಟ್ನಾ ಪೈರೇಟ್ಸ್‌ ಮಣಿಸಿ ಫೈನಲ್‌ಗೆ ಎಂಟ್ರಿ ನೀಡಿತು. ಮತ್ತೊಂದೆಡೆ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟನ್ಸ್‌ ಅನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ತಲುಪಿತು. ಫೈನಲ್‌ನಲ್ಲಿ ಯು ಮುಂಬಾ 36-30 ಪಾಯಿಂಟ್ಸ್‌ಗಳಿಂದ ಬೆಂಗಳೂರು ತಂಡವನ್ನ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಸೀಸನ್ 3, 4, 5: ಪಾಟ್ನಾ ಪೈರೇಟ್ಸ್‌

ಸೀಸನ್ 3, 4, 5: ಪಾಟ್ನಾ ಪೈರೇಟ್ಸ್‌

ಮೊದಲ ಎರಡು ಸೀಸನ್‌ಗಳಲ್ಲಿ ಸತತವಾಗಿ ಸೆಮಿಫೈನಲ್‌ನಲ್ಲಿ ಹೊರಬಿದ್ದಿದ್ದ ಪಾಟ್ನಾ ಪೈರೇಟ್ಸ್‌, ಮೂರನೇ ಸೀಸನ್‌ನಲ್ಲಿ ಹಾಲಿ ಚಾಂಪಿಯನ್ ಯು ಮುಂಬಾ ಅವರನ್ನು ಸೋಲಿಸುವ ಮೂಲಕ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಸೀಸನ್ 4 ರಲ್ಲಿಯೂ ಸಹ, ಪಾಟ್ನಾ ಸೀಸನ್‌ನ ಉದ್ದಕ್ಕೂ ಚಾಂಪಿಯನ್‌ನಂತೆ ಆಡಿತು ಮತ್ತು ಸೆಮಿ-ಫೈನಲ್ 1 ಕ್ಕೆ ಅರ್ಹತೆ ಪಡೆಯಿತು. ಪುಣೇರಿ ಪಲ್ಟಾನ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿದ ಪಾಟ್ನಾ, ಸೀಸನ್ 1ರ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು ಎದುರಿಸಿತು. ಪಾಟ್ನಾ ಫೈನಲ್‌ನಲ್ಲಿ ಜೈಪುರವನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಇನ್ನು ಸೀಸನ್ 5 ರಲ್ಲಿ 10 ತಂಡಗಳ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ಗೆ ಅರ್ಹತೆ ಪಡೆದರು. ಎಲಿಮಿನೇಟರ್ 2 ರಲ್ಲಿ, ಅವರು ಎಲಿಮಿನೇಟರ್ 3 ಗೆ ಅರ್ಹತೆ ಪಡೆಯಲು ಹರಿಯಾಣ ಸ್ಟೀಲರ್ಸ್ ಅನ್ನು ದಾಖಲೆಯ ಅಂತರದಿಂದ (69-30) ಸೋಲಿಸಿದರು. ಇದರ ನಂತರ, ಕ್ವಾಲಿಫೈಯರ್ 2 ನಲ್ಲಿ, ಪಾಟ್ನಾ ಬೆಂಗಾಲ್ ವಾರಿಯರ್ಸ್ ಅನ್ನು ಸೋಲಿಸಿ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಗಳಿಸಿತು. ಫೈನಲ್‌ನಲ್ಲಿ ಗುಜರಾತ್ ಜಾಯಿಂಟ್ಸ್‌ ತಂಡವನ್ನ ಸೋಲಿಸಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.

ಸೀಸನ್ 6: ಬೆಂಗಳೂರು ಬುಲ್ಸ್

ಸೀಸನ್ 6: ಬೆಂಗಳೂರು ಬುಲ್ಸ್

ಮೂರು ಬಾರಿಯ ಚಾಂಪಿಯನ್‌ ಪಾಟ್ನಾಗೆ ಓಟಕ್ಕೆ ಬ್ರೇಕ್ ಹಾಕಿದ್ದು ಬೆಂಗಳೂರು ಬುಲ್ಸ್‌. ಸೀಸನ್ 6 ರಲ್ಲಿ, ಬುಲ್ಸ್ ಪವನ್ ಸೆಹ್ರಾವತ್ ಅವರ ಅದ್ಭುತ ಆಟದಿಂದಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದರು ಮತ್ತು ಪ್ರೊ ಕಬಡ್ಡಿ ಲೀಗ್ ಫೈನಲ್‌ನಲ್ಲಿ ಗುಜರಾತ್ ಜಾಯಿಂಟ್ಸ್ ಅನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನ ಗೆದ್ದಿತು.

ಸೀಸನ್ 7: ಬೆಂಗಾಲ್ ವಾರಿಯರ್ಸ್‌

ಸೀಸನ್ 7: ಬೆಂಗಾಲ್ ವಾರಿಯರ್ಸ್‌

ಸೀಸನ್ 7ನಲ್ಲಿ ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರೆ, ಸೀಸನ್ ಉದ್ದಕ್ಕೂ ಚೆನ್ನಾಗಿ ಆಡಿದ ಬೆಂಗಾಲ್ ವಾರಿಯರ್ಸ್ ಯು ಮುಂಬಾ ತಂಡವನ್ನು ಸೋಲಿಸಿತು. ಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಡೆಲ್ಲಿ ತಂಡವನ್ನು 39-34 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಸೀಸನ್ 8: ದಬಾಂಗ್ ಡೆಲ್ಲಿ

ಸೀಸನ್ 8: ದಬಾಂಗ್ ಡೆಲ್ಲಿ

ಕಳೆದ ಸೀಸನ್‌ನ ಫೈನಲ್‌ನಲ್ಲಿ ಪ್ರಶಸ್ತಿ ವಂಚಿತರಾಗಿದ್ದ ದಬಾಂಗ್ ಡೆಲ್ಲಿ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಸತತ 5 ಪಂದ್ಯಗಳನ್ನು ಗೆದ್ದು, ಲೀಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ಡೆಲ್ಲಿ ತಂಡವು ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಗಳಿಸಿತು. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಸತತ ಎರಡನೇ ಬಾರಿಗೆ ಬೆಂಗಳೂರು ಬುಲ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಫೈನಲ್‌ನಲ್ಲಿ ಡೆಲ್ಲಿ ತಂಡ ಪಾಟ್ನಾ ತಂಡವನ್ನು 37-36 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

Story first published: Saturday, February 26, 2022, 12:29 [IST]
Other articles published on Feb 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X