ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ: ನಿರೀಕ್ಷೆಗಳು ದುಪ್ಪಟ್ಟು
ಮುಂಬರುವ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಫಾರ್ಮೆಟ್‌ನಲ್ಲಿ ಭಾರತದ ಭವಿಷ್ಯ T20 ನಾಯಕ ಯಾರು ಎಂಬ ಹೆಸರು ಘೋಷಣೆಯಾಗಿದೆ.
ವಿರಾಟ್ ಕೊಹ್ಲಿ ಈಗಾಗಲೇ ಟಿ20 ನಾಯಕತ್ವವನ್ನು ತ್ಯಜಿಸಿದ್ದು, ಟಿ20 ಹಾಗೂ ಟೆಸ್ಟ್ ನಾಯಕತ್ವದಲ್ಲಿ ಮುಂದುವರೆಯಲಿದ್ದಾರೆ. ಹೀಗಾಗಿ ಟಿ20 ಫಾರ್ಮೆಟ್‌ನಲ್ಲಿ ಅನುಭವಿ ನಾಯಕನಾಗಿರುವ ರೋಹಿತ್ ಶರ್ಮಾ ಹೆಸರು ಆಯ್ಕೆಗೊಂಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಖುಷಿ ತರಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಕೆ.ಎಲ್ ರಾಹುಲ್ ಉಪನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗಿದೆ.

ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ
ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟುವ ಮೊದಲೇ ಅನೇಕ ಮಾಜಿ ಕ್ರಿಕೆಟಿಗರು, ದಿಗ್ಗಜರು ಬೆಂಬಲ ವ್ಯಕ್ತಪಡಿಸಿದ್ದರು. ರೋಹಿತ್ ಮುಂಬರುವ ಟಿ20 ನಾಯಕನಾದರೆ ಸಮರ್ಥ ಆಯ್ಕೆಯಾಗಿರಲಿದೆ ಎಂದು ಮಾಜಿ ಕ್ರಿಕೆಟಿಗ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಖುಷಿ ವ್ಯಕ್ತಪಡಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಅಕ್ಷಯ್ ಕರ್ನೆವಾರ್ ವಿಶ್ವದಾಖಲೆ: 4 ಓವರ್ 4 ಮೇಡನ್

ಹಿಟ್‌ಮ್ಯಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ರವಿಶಾಸ್ತ್ರಿ
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾನೇ ಮುಂದಿನ ಟೀಮ್ ಇಂಡಿಯಾದ ಟಿ20 ಫಾರ್ಮೆಟ್ ನಾಯಕ ಎಂದು ಈ ಮೊದಲೇ ರವಿಶಾಸ್ತ್ರಿ ಖಚಿತಪಡಿಸಿದ್ದಾರೆ. ಜೊತೆಗೆ ರೋಹಿತ್ ಶರ್ಮಾರ ನಾಯಕತ್ವ ಕೌಶಲ್ಯವನ್ನು ಕೂಡ ಶಾಸ್ತ್ರಿ ಶ್ಲಾಘಿಸಿದರು.
ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನೆಡೆಸುವ ಸಮರ್ಥ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಹಲವಾರು ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಟೀಮ್ ಇಂಡಿಯಾದ ಉಪನಾಯಕರಾಗಿದ್ದ ರೋಹಿತ್ ಈಗ ನಾಯಕನಾಗಲು ಸಿದ್ಧರಾಗಿದ್ದಾರೆ'' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ರೋಹಿತ್
ರೋಹಿತ್ ಶರ್ಮಾ ಟಿ20 ನಾಯಕತ್ವಕ್ಕೆ ಕನ್ನಡಿಯಾಗಿರುವುದು ಐದು ಬಾರಿ ಟಿ20 ಟ್ರೋಫಿಗಳನ್ನು ಗೆದ್ದಿರುವುದಾಗಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸಿರುವ ರೋಹಿತ್ 2013, 2015, 2017, 2019, 2020ರಲ್ಲಿ ತಂಡವನ್ನ ಚಾಂಪಿಯನ್ ಆಗಿಸಿದ್ದಾರೆ.

ಮುಂಬರುವ ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ!
ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಈಗಾಗಲೇ ಆಯ್ಕೆಗೊಂಡಿದ್ದು, ಇದೀಗ ಹೊಸ ಟಿ20 ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಗೊಂಡಿರುವುದು ಟೀಮ್ ಇಂಡಿಯಾದ ಬಲವನ್ನ ಹೆಚ್ಚಿಸಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಭಾರತವು ನ್ಯೂಜಿಲೆಂಡ್ ಸರಣಿಯಿಂದಲೇ ತಯಾರಿ ನಡೆಸಲಿದೆ. ರೋಹಿತ್ ಶರ್ಮಾ ಅಷ್ಟೇ ಅಲ್ಲದೆ ಹೊಸ ಆಟಗಾರರ ಎಂಟ್ರಿ ಕೂಡ ತಂಡದ ಬೆಂಚ್ ಸಾಮರ್ಥ್ಯ ಹೆಚ್ಚಿಸಲಿದೆ.
ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಅವೇಶ್ ಖಾನ್‌ಗೆ ಸ್ಥಾನ ಒದಗಿಸಲಾಗಿದೆ. ಇದಲ್ಲದೆ ರುತುರಾಜ್ ಗಾಯಕ್‌ವಾಡ್, ಸ್ಪಿನ್ನರ್ ಯುಜವೇಂದ್ರ ಚಹಲ್ ತಂಡಕ್ಕೆ ಮರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications