ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ

Virat Kohlis Emotional Message For Fans After his Last T20I Match as Captain Goes Viral
ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada

ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ಗೆಲುವಿನ ಫೇವರಿಟ್ ತಂಡವಾಗಿದ್ದ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಲಾಗದೆ ಹೊರಬಿದ್ದಿರೋದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ವಿಶ್ವದಲ್ಲೇ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ಇಷ್ಟು ಸುಲಭವಾಗಿ ತನ್ನ ಅಭಿಯಾನ ಅಂತ್ಯಗೊಳಿಸಿದ್ದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಮೂರು ವಿಭಾಗದಲ್ಲಿ ಸಮರ್ಥವಾಗಿರುವ ತಂಡವು ಆರಂಭಿಕ ಎರಡು ಪಂದ್ಯಗಳ ಸೋಲನ್ನ ಅರಗಿಸಿಕೊಳ್ಳುವುದರಷ್ಟರಲ್ಲಿ ಸೆಮಿಫೈನಲ್ ಟಿಕೆಟ್ ಕಳೆದುಕೊಂಡಿತ್ತು. ಹೀಗಾಗಿಯೇ ನಂತರ ಮೂರು ಪಂದ್ಯಗಳನ್ನ ಗೆದ್ದರೂ ಅದಾಗಲೇ ವಿಶ್ವಕಪ್ ಗೆಲುವಿನ ಕನಸು ಕಮರಿತು. ಇದು ಪ್ರತಿಯೊಬ್ಬ ಭಾರತದ ಕ್ರಿಕೆಟ್ ಅಭಿಮಾನಿಗೆ ಬೇಸರ ಮೂಡಿಸಿರುವುದು ಸುಳ್ಳಲ್ಲ.

ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅತ್ಯಂತ ಬೇಸರದಿಂದ ಟಿ20 ನಾಯಕತ್ವವನ್ನು ತ್ಯಜಿಸಿದ್ದಾರೆ. ಈ ಮೊದಲೇ ತಿಳಿಸಿದಂತೆ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಟಿ20 ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ.

ನಮಿಬಿಯಾ ವಿರುದ್ಧ ಬೃಹತ್ ಗೆಲುವಿನ ಬಳಿಕ ವಿರಾಟ್‌ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ. ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿರುವ ಕೊಹ್ಲಿ ತಮ್ಮ ಪ್ರದರ್ಶನದ ಕುರಿತು ನಿರಾಸೆ ವ್ಯಕ್ತಪಡಿಸಿದ್ದಾರೆ.

''ಒಟ್ಟಿಗೆ ನಾವು ನಮ್ಮ ಗುರಿಯನ್ನು ತಲುಪಲು ಹೊರಟ್ಟಿದ್ದೆವು, ಆದರೆ ದುರದೃಷ್ಟವಶಾತ್ ನಾವು ಹಿಂದೆ ಬಿದ್ದೆವು ಮತ್ತು ನಮ್ಮಷ್ಟು ನಿರಾಸೆಗೊಂಡಿರುವವರು ಬೇರೆ ಯಾರು ಇಲ್ಲ'' ಎಂದು ಕೊಹ್ಲಿ ವಿಶ್ವಕಪ್ ಸೆಮಿಫೈನಲ್ ತಲುಪದಿದ್ದಕ್ಕೆ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಅಭಿಮಾನಿಗಳ ಬೆಂಬಲಕ್ಕೂ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ. ''ನಿಮ್ಮೆಲ್ಲರ ಬೆಂಬಲವು ಅದ್ಭುತವಾಗಿದೆ ಮತ್ತು ನಾವು ಎಲ್ಲದಕ್ಕೂ ಕೃತಜ್ಞರಾಗಿದ್ದೇವೆ. ನಾವು ಬಲವಾಗಿ ಕಂಬ್ಯಾಕ್ ಮಾಡಲು ಮತ್ತು ಅತ್ಯುತ್ತಮ ಪ್ರದರ್ಶನದ ಹೆಜ್ಜೆಯನ್ನಿಡುವ ಗುರಿಯನ್ನು ಹೊಂದಿದ್ದೇವೆ. ಜೈ ಹಿಂದ್'' ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ದುಬೈನಲ್ಲಿ ನಿನ್ನೆ ನಡೆದ ತನ್ನ ಕೊನೆಯ ಸೂಪರ್ 12 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿತು. ಆದರೆ ಭಾನುವಾರ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆದ್ದ ನಂತರ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಪ್ರವೇಶಿಸಲು ವಿಫಲವಾಯಿತು.

ನಮೀಬಿಯಾ ವಿರುದ್ಧದ ಗೆಲುವು ಭಾರತದ ಟಿ20 ಅಂತರಾಷ್ಟ್ರೀಯ ನಾಯಕನಾಗಿ ವಿರಾಟ್‌ ಕೊಹ್ಲಿಗೆ ಕೊನೆಯ ಪಂದ್ಯವಾಗಿದೆ. ಇನ್ನು ಕೊಹ್ಲಿ ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ.

ಭಾರತ ತಂಡವು ಎರಡನೇ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿ ಟೂರ್ನಿ ಮುಗಿಸಿದೆ. ಮೊದಲೆರಡು ಸ್ಥಾನದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಇವೆ. ಈ ಎರಡು ತಂಡಗಳ ಜೊತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿವೆ.

ವಿರಾಟ್‌ ಕೊಹ್ಲಿ ಟಿ20 ನಾಯಕತ್ವ ಸಾಧನೆ

ವಿರಾಟ್‌ ಕೊಹ್ಲಿ ಟಿ20 ನಾಯಕತ್ವ ಸಾಧನೆ

ವಿರಾಟ್ ಕೊಹ್ಲಿ ಒಟ್ಟಾರೆ 50 ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನೆಡೆಸಿದ್ದು, ಇದರಲ್ಲಿ 30 ಪಂದ್ಯಗಳನ್ನ ಗೆಲ್ಲಿಸಿಕೊಟ್ಟರೆ, 16 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ ಮತ್ತು 2 ಪಂದ್ಯಗಳು ಟೈ ಆಗಿವೆ. ಅಂತಿಮವಾಗಿ ಗೆಲುವಿನ ಸರಾಸರಿ ಶೇಕಡಾ 64.58 ರಷ್ಟಿದ್ದು, ಭಾರತದ ಲೆಜೆಂಡ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಗೆಲುವಿನ ಸರಾಸರಿಗಿಂತ ಹೆಚ್ಚಿದೆ.

ಧೋನಿ ಟಿ20 ನಾಯಕತ್ವ ಸಾಧನೆ

ಧೋನಿ ಟಿ20 ನಾಯಕತ್ವ ಸಾಧನೆ

ಮಹೇಂದ್ರ ಸಿಂಗ್ ಧೋನಿ ಟಿ20 ಫಾರ್ಮೆಟ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದಾರೆ. ಧೋನಿ 2007ರಿಂದ 2016ರವರೆಗೆ 72 ಪಂದ್ಯಗಳಲ್ಲಿ 41 ಗೆಲುವು ಮತ್ತು 28 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. ಇನ್ನು 1 ಪಂದ್ಯ ಟೈ ಆಗಿದ್ದು, 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಇವರ ಗೆಲುವಿನ ಸರಾಸರಿ ಲೆಕ್ಕವು ಶೇಕಡಾ 59.28ರಷ್ಟಿದೆ.

ವಿರಾಟ್ ಕೊಹ್ಲಿ ಟಿ20 ಬ್ಯಾಟಿಂಗ್ ರೆಕಾರ್ಡ್ಸ್‌

ವಿರಾಟ್ ಕೊಹ್ಲಿ ಟಿ20 ಬ್ಯಾಟಿಂಗ್ ರೆಕಾರ್ಡ್ಸ್‌

ವಿರಾಟ್‌ ಕೊಹ್ಲಿ ಇದುವರೆಗೆ 95 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಶೇಕಡಾ 52.04ರ ಸರಾಸರಿಯಲ್ಲಿ 3227 ರನ್‌ಗಳನ್ನು ದಾಖಲಿಸಿದ್ದಾರೆ. ಗರಿಷ್ಠ ಅಜೇಯ 94ರನ್‌ಗಳಿಸಿರುವ ಕೊಹ್ಲಿ 29 ಬಾರಿ ಅರ್ಧಶತಕ ಗಡಿದಾಟಿದ್ದಾರೆ. ಇದರಲ್ಲಿ 91 ಅಮೋಘ ಸಿಕ್ಸರ್‌ಗಳು, 290 ಬೌಂಡರಿಗಳು ಸೇರಿವೆ.

ಐಪಿಎಲ್‌ನಲ್ಲಿ ಐದು ಶತಕ ಸಿಡಿಸಿರುವ ಕೊಹ್ಲಿ

ಐಪಿಎಲ್‌ನಲ್ಲಿ ಐದು ಶತಕ ಸಿಡಿಸಿರುವ ಕೊಹ್ಲಿ

ಮನೋರಂಜನ್ ಕಾ ಬಾಪ್ ಐಪಿಎಲ್‌ನಲ್ಲಿ ಬರೋಬ್ಬರಿ ಐದು ಶತಕಗಳನ್ನು ದಾಖಲಿಸಿರುವ ವಿರಾಟ್‌ ಕೊಹ್ಲಿ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಒಂದೇ ಒಂದು ಶತಕ ಸಿಡಿಸದಿರುವುದು ಆಶ್ಚರ್ಯ ಮೂಡಿಸುತ್ತದೆ. 2016ರ ಒಂದೇ ಸೀಸನ್‌ನಲ್ಲಿ ನಾಲ್ಕು ಸೆಂಚುರಿ ಸಿಡಿಸಿದ್ದ ಕೊಹ್ಲಿ ಬ್ಯಾಟ್‌ ಅಂತರಾಷ್ಟ್ರೀಯ ಪಂದ್ಯದಲ್ಲಿ ಶತಕವನ್ನು ಕಂಡಿಲ್ಲ.

Story first published: Tuesday, November 9, 2021, 16:15 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X