ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus: ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ತಿಳಿಸಿದ ವಾಸಿಂ ಜಾಫರ್ , ರಿಷಭ್ ಪಂತ್‌ಗಿಲ್ಲ ಸ್ಥಾನ

Wasim jaffer

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿ ಮಂಗಳವಾರದಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಮೊಹಾಲಿಯ ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಚುಟುಕು ವಿಶ್ವಕಪ್‌ಗೂ ಮುನ್ನ ಈ ಸರಣಿ ನಡೆಯೋದ್ರಿಂದ ತನ್ನ ಅಂತಿಮ ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಉಭಯ ತಂಡಗಳಿಗೆ ಅವಕಾಶ ಸಿಗಲಿದೆ.

ಏಷ್ಯಾಕಪ್‌ನಲ್ಲಿ ಮುಗ್ಗರಿಸಿರುವ ಭಾರತ ಈ ಪಂದ್ಯದಲ್ಲಿ ಯಾವ ಕಾಂಬಿನೇಷನ್ ನೊಂದಿಗೆ ಮೈದಾನಕ್ಕೆ ಇಳಿಯಲಿದೆ ಎಂಬುದು ಎಲ್ಲರ ಕಣ್ಣು ನೆಟ್ಟಿದೆ. ಏತನ್ಮಧ್ಯೆ, ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಮೊಹಾಲಿಯಲ್ಲಿ ನಡೆಯುವ ಮೊದಲ ಟಿ20 ಗೆ ತಮ್ಮ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಿದ್ದಾರೆ.

ರೋಹಿತ್ ಮತ್ತು ರಾಹುಲ್ ಓಪನಿಂಗ್

ರೋಹಿತ್ ಮತ್ತು ರಾಹುಲ್ ಓಪನಿಂಗ್

ಜಾಫರ್ ಅವರು ತಮ್ಮ ಪ್ಲೇಯಿಂಗ್-11 ರಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಆದರೆ ವಿರಾಟ್ ಕೊಹ್ಲಿ 3 ನೇ ಸ್ಥಾನದಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ, ನಾಯಕ ರೋಹಿತ್ ಮತ್ತು ಉಪನಾಯಕ ರಾಹುಲ್ ಕಳಪೆ ಫಾರ್ಮ್‌ನಲ್ಲಿ ಕಂಡುಬಂದರು, ಈ ಸರಣಿಯ ಮೂಲಕ ಈ ಇಬ್ಬರೂ ಆಟಗಾರರು ವಿಶ್ವಕಪ್‌ಗೆ ಮೊದಲು ಕಳೆದುಹೋದ ವೇಗವನ್ನು ಮರಳಿ ಪಡೆಯಲು ಬಯಸುತ್ತಾರೆ. ಅದೇ ಸಮಯದಲ್ಲಿ, ಏಷ್ಯಾಕಪ್‌ನಲ್ಲಿ ರನ್ ಬೇಟೆಯಾಡಿದ ವಿರಾಟ್ ಕೊಹ್ಲಿಯನ್ನ ಮೂರನೇ ಕ್ರಮಾಂಕದಲ್ಲಿ ಇರಿಸಿದ್ದಾರೆ. ಕೊಹ್ಲಿ 5 ಇನ್ನಿಂಗ್ಸ್‌ಗಳಲ್ಲಿ 276 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು

ಭಾರತದ ಮಾಜಿ ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ 4 ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ. ಸೂರ್ಯ ಮತ್ತು ಹಾರ್ದಿಕ್ ಇಬ್ಬರೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್ ಹೊರತಾಗಿ ಚೆಂಡಿನಲ್ಲೂ ಪಾಂಡ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದಾಗ್ಯೂ, ವಿಕೆಟ್‌ಕೀಪರ್ ಆಗಿ, ಜಾಫರ್ ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದು ರಿಷಬ್ ಪಂತ್ ರನ್ನ ಹೊರಹಾಕಿದರು. ಕೆಲ ದಿನಗಳಿಂದ ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಪಂತ್‌ಗೆ ಸಾಧ್ಯವಾಗಲಿಲ್ಲ, ಆದರೆ ದಿನೇಶ್ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.

Ind vs Aus 1st T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಂ, ಪಿಚ್ ರಿಪೋರ್ಟ್‌, ಸಂಭಾವ್ಯ ಪ್ಲೇಯಿಂಗ್ 11

ಇಬ್ಬರು ಸ್ಪಿನ್ನರ್‌ಗಳಿಗೆ ಮಣೆ

ಇಬ್ಬರು ಸ್ಪಿನ್ನರ್‌ಗಳಿಗೆ ಮಣೆ

ವಾಸಿಂ ಜಾಫರ್ ಮೊಹಾಲಿ ಪಂದ್ಯಕ್ಕೆ ತನ್ನ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದರು. ಅವರು ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ಮೇಲೆ ನಂಬಿಕೆ ಇಟ್ಟಿದ್ದಾರೆ ಏಷ್ಯಾಕಪ್‌ನಲ್ಲಿ ಚಾಹಲ್ ಅವರ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿತ್ತು. ಅದೇ ಸಮಯದಲ್ಲಿ, ಗಾಯಾಳು ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಅವರನ್ನು ತಂಡದ ಭಾಗವಾಗಿ ಮಾಡಲಾಗಿದೆ. ಕೆಳ ಕ್ರಮಾಂಕದಲ್ಲಿಯೂ ಅವರು ಉತ್ತಮವಾಗಿ ಬ್ಯಾಟಿಂಗ್‌ ಮಾಡಬಲ್ಲರು. ಆದಾಗ್ಯೂ, ಜಾಫರ್ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ಆಡುವ-11 ರಿಂದ ಹೊರಗಿಟ್ಟಿದ್ದಾರೆ.

ಸೋಲಿಗೆ ಹೆದರಬೇಡಿ: ಟೀಂ ಇಂಡಿಯಾಗೆ ಸಂದೇಶ ನೀಡಿದ ರೋಹಿತ್ ಶರ್ಮಾ

ವೇಗದ ಬೌಲಿಂಗ್‌ನಲ್ಲಿ ಯಾರಿಗೆಲ್ಲಾ ಸ್ಥಾನ?

ವೇಗದ ಬೌಲಿಂಗ್‌ನಲ್ಲಿ ಯಾರಿಗೆಲ್ಲಾ ಸ್ಥಾನ?

ವೇಗದ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರ ಹೆಸರನ್ನು ಜಾಫರ್ ಆಯ್ಕೆ ಮಾಡಿದರು. ಬುಮ್ರಾ ಮತ್ತು ಹರ್ಷಲ್ ಗಾಯದ ನಂತರ ಟೀಂ ಇಂಡಿಯಾಗೆ ಮರಳುತ್ತಿದ್ದು, ಇಬ್ಬರ ಆಗಮನದೊಂದಿಗೆ ಡೆತ್ ಓವರ್‌ಗಳ ಸಮಸ್ಯೆಯೂ ಅಂತ್ಯಗೊಂಡಿದೆ. ಅದೇ ಸಮಯದಲ್ಲಿ, ತಂಡವು ಭುವಿಯಿಂದಲೂ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತದೆ. ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅರ್ಷದೀಪ್ ಸಿಂಗ್‌ಗೆ ಮೊಹಾಲಿ ಟಿ20ಯಲ್ಲಿ ಜಾಫರ್ ಸ್ಥಾನ ನೀಡದೇ ಇರುವುದು ಅಚ್ಚರಿಯ ಸಂಗತಿ.

ವಾಸಿಂ ಜಾಫರ್ ಪ್ಲೇಯಿಂಗ್ 11 ಮತ್ತು ಭಾರತದ ಒಟ್ಟಾರೆ ಸ್ಕ್ವಾಡ್‌

ವಾಸಿಂ ಜಾಫರ್ ಪ್ಲೇಯಿಂಗ್ 11 ಮತ್ತು ಭಾರತದ ಒಟ್ಟಾರೆ ಸ್ಕ್ವಾಡ್‌

ವಾಸಿಂ ಜಾಫರ್ ಅವರ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್‌ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್


ಟಿ20 ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್, ಅರ್ಷ್‌ದೀಪ್‌ ಸಿಂಗ್, ರವಿಚಂದ್ರನ್ ಅಶ್ವಿನ್, ರಿಷಭ್‌ ಪಂತ್, ಉಮೇಶ್ ಯಾದವ್

Story first published: Monday, September 19, 2022, 18:46 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X