ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus 1st T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಂ, ಪಿಚ್ ರಿಪೋರ್ಟ್‌, ಸಂಭಾವ್ಯ ಪ್ಲೇಯಿಂಗ್ 11

India vs Australia

ಭಾರತ-ಆಸ್ಟ್ರೇಲಿಯಾ ತಂಡಗಳು ಮಂಗಳವಾರ(ಸೆ.20) ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗುತ್ತಿದ್ದು, ಟಿ20 ವಿಶ್ವಕಪ್‌ಗೂ ಮುನ್ನ ಸಾಕಷ್ಟು ತಯಾರಿ ನಡೆಸಲು ಈ ಸರಣಿ ಅನುಕೂಲವಾಗಲಿದೆ.

ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 25ರವರೆಗೆ ಮೂರು ಟಿ20 ಪಂದ್ಯಗಳಲ್ಲಿ ಭಾರತ- ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಬಲಿಷ್ಠ ತಂಡಗಳೆರಡು ಕಣಕ್ಕಿಳಿಯುತ್ತಿವೆ. ಮೊದಲ ಟಿ20 ಪಂದ್ಯ ಮಂಗಳವಾರ ರಾತ್ರಿ 7.30ಕ್ಕೆ ಮೊಹಾಲಿಯ ಪಂಜಾಬ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನುಳಿದ ಎರಡು ಪಂದ್ಯಗಳಿಗೆ ನಾಗ್ಪುರ ಮತ್ತು ಹೈದ್ರಾಬಾದ್ ಆತಿಥ್ಯ ವಹಿಸಲಿದೆ.

ಟಿ20 ಫಾರ್ಮೆಟ್‌ನಲ್ಲಿ ಉಭಯ ತಂಡಗಳ ಕಳೆದ ಸರಣಿಯ ಫಲಿತಾಂಶ

ಟಿ20 ಫಾರ್ಮೆಟ್‌ನಲ್ಲಿ ಉಭಯ ತಂಡಗಳ ಕಳೆದ ಸರಣಿಯ ಫಲಿತಾಂಶ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ ಚುಟುಕು ಫಾರ್ಮೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಆ್ಯರೋನ್ ಫಿಂಚ್ ಮುನ್ನಡೆಸುತ್ತಿದ್ದು, ಟೀಂ ಇಂಡಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಯೋಜನೆ ರೂಪಿಸಿದೆ.

ಕಳೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 2-1 ಅಂತರದಲ್ಲಿ ಭಾರತ ಪಂದ್ಯವನ್ನು ಜಯಿಸಿದೆ. ಆದ್ರೆ ಟಿ20 ರ್ಯಾಂಕಿಂಗ್ ವಿಚಾರದಲ್ಲಿ ನೋಡಿದ್ರೆ ಟೀಂ ಇಂಡಿಯಾ ನಂಬರ್ 1 ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 6ನೇ ಸ್ಥಾನವನ್ನ ಅಲಂಕರಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಹೆಡ್ ಟು ಹೆಡ್ ರೆಕಾರ್ಡ್‌

ಹೆಡ್ ಟು ಹೆಡ್ ರೆಕಾರ್ಡ್‌

ಟಿ20 ಫಾರ್ಮೆಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 13 ಪಂದ್ಯಗಳನ್ನು ಟೀಂ ಇಂಡಿಯಾ ಜಯಿಸಿದ್ರೆ, 9 ಪಂದ್ಯಗಳನ್ನ ಮೆನ್ ಇನ್ ಬ್ಲ್ಯೂ ಗೆದ್ದುಕೊಂಡಿದೆ. ಹೀಗಾಗಿ ಚುಟುಕು ಫಾರ್ಮೆಟ್‌ನಲ್ಲಿ ಕಾಂಗರೂ ರಾಷ್ಟ್ರಕ್ಕಿಂತ ಭಾರತವೇ ಒಂದು ಕೈ ಮೇಲಿದೆ.

ಉಭಯ ತಂಡಗಳಲ್ಲಿ ಪವರ್‌ ಹಿಟ್ಟರ್‌ಗಳಿದ್ದು, ಮೂರು ಪಂದ್ಯಗಳ ಟಿ20 ಸರಣಿ ಸಾಕಷ್ಟು ರೋಚಕತೆಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.

ಸೋಲಿಗೆ ಹೆದರಬೇಡಿ: ಟೀಂ ಇಂಡಿಯಾಗೆ ಸಂದೇಶ ನೀಡಿದ ರೋಹಿತ್ ಶರ್ಮಾ

ಪಿಚ್ ರಿಪೋರ್ಟ್ ಮತ್ತು ಹವಾಮಾನ

ಪಿಚ್ ರಿಪೋರ್ಟ್ ಮತ್ತು ಹವಾಮಾನ

ಮೊಹಾಲಿಯಲ್ಲಿ ಹವಾಮಾನವು 28 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, 75% ಹ್ಯುಮಿಡಿಟಿ ಇರಲಿದೆ ಹಾಗೂ 5-7 km/hr ವೇಗದಲ್ಲಿ ಗಾಳಿ ಬೀಸಲಿದೆ. ಪಂದ್ಯದ ವೇಳೆಯಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆಯಿದೆ.

ಪಂಜಾಬ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ನ ಐಎಸ್ ಬಿಂದ್ರಾ ಸ್ಟೇಡಿಯಂನ ಪಿಚ್‌ ಬ್ಯಾಟಿಂಗ್‌ಗೆ ಸ್ನೇಹಿಯಾಗಿದ್ದು, ದೊಡ್ಡ ಸ್ಕೋರ್ ಅನ್ನು ಸಹ ನಿರೀಕ್ಷಿಸಬಹುದಾಗಿದೆ. ಅರ್ಧ ಪಂದ್ಯದ ಬಳಿಕ ಪೇಸರ್‌ಗಳಿಗೆ ಹೆಚ್ಚು ನೆರವಾಗಬಹುದು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 178 ರನ್ ಆಗಿದೆ.

ಇನ್ನು ಈ ಪಿಚ್‌ನಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಗೆದ್ದಿರುವ ಉದಾಹರಣೆ ಹೆಚ್ಚಿದ್ದು, ಗೆಲುವಿನ ಪರ್ಸಂಟೇಜ್ 60ರಷ್ಟಿದೆ.

ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಭಾರತ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಭಾರತ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಜೋಶ್ ಇಂಗ್ಲಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಡೇನಿಯಲ್ ಸ್ಯಾಮ್ಸ್, ಜೋಶ್ ಹೇಜಲ್‌ವುಡ್, ಆಡಮ್ ಝಂಪಾ, ಕೇನ್ ರಿಚರ್ಡ್‌ಸನ್

ಫ್ಯಾಂಟೆಸ್‌ ಡ್ರೀಂ ಟೀಂ 1

ಫ್ಯಾಂಟೆಸ್‌ ಡ್ರೀಂ ಟೀಂ 1

ನಾಯಕ- ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ

ಉಪನಾಯಕ - ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್

ಕೀಪರ್ - ಮ್ಯಾಥ್ಯೂ ವೇಡ್

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಸ್ಟೀವನ್ ಸ್ಮಿತ್

ಆಲ್ ರೌಂಡರ್‌ಗಳು - ಗ್ಲೆನ್ ಮ್ಯಾಕ್ಸ್‌ವೆಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಡೇನಿಯಲ್ ಸ್ಯಾಮ್ಸ್

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಜೋಶ್ ಹೇಜಲ್‌ವುಡ್‌, ಪ್ಯಾಟ್ ಕಮಿನ್ಸ್

ಫ್ಯಾಂಟೆಸ್‌ ಡ್ರೀಂ ಟೀಂ 2

ಫ್ಯಾಂಟೆಸ್‌ ಡ್ರೀಂ ಟೀಂ 2

ಕೀಪರ್ - ಮ್ಯಾಥ್ಯೂ ವೇಡ್

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್

ಆಲ್ ರೌಂಡರ್‌ಗಳು - ಗ್ಲೆನ್ ಮ್ಯಾಕ್ಸ್‌ವೆಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ (ನಾಯಕ), ಡೇನಿಯಲ್ ಸಾಮ್ಸ್

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಜೋಶ್ ಹೇಜಲ್‌ವುಡ್, ಆ್ಯಡಮ್ ಝಂಪಾ

ಇನ್ನು ತಂಡಗಳ ಟೀಂ ಕಾಂಬಿನೇಷನ್ ಮತ್ತು ತವರಿನಲ್ಲಿ ಟಿ20 ಸರಣಿ ನಡೆಯುತ್ತಿರುವ ಕಾರಣ ಟೀಂ ಇಂಡಿಯಾ ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚಿದೆ

Story first published: Monday, September 19, 2022, 18:38 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X