ಬೇಬಿ ಎಬಿ ಕನಸು ನನಸಾಗಿದೆ: ಭಾರತದ ಈ ಕ್ರಿಕೆಟಿಗ ನನ್ನ ಸ್ಫೂರ್ತಿ ಎಂದ ಡೆವಾಲ್ಡ್ ಬ್ರೆವಿಸ್

ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಬೇಬಿ ಎಬಿ ಹೆಸರಿನಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ ಡೆವಾಲ್ಡ್ ಬ್ರೆವಿಸ್ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟಿಂಗ್ ದಂತಕಥೆ ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಶೈಲಿಗೆ ಗಮನಾರ್ಹವಾದ ಹೋಲಿಕೆಯು ಅವರಿಗೆ ಬೇಬಿ ಎಬಿಡಿ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ. ಎಬಿಡಿ ನಂತರ ಬ್ರೆವಿಸ್ ದಕ್ಷಿಣ ಆಫ್ರಿಕಾದ ಮುಂದಿನ ಬ್ಯಾಟಿಂಗ್ ಹೀರೋ ಆಗಲು ಸಜ್ಜಾಗಿದ್ದಾರೆ.
ಬ್ರೆವಿಸ್ ಈ ವರ್ಷದ ಅಂಡರ್ -19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 506 ರನ್‌ಗಳಿಸಿದ್ರು. ಈ ಪ್ರದರ್ಶನದ ನಂತರ, ಐಪಿಎಲ್ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಈ ಆಟಗಾರನನ್ನು 3 ಕೋಟಿ ರೂ.ಗೆ ಖರೀದಿಸಿತು. 18 ವರ್ಷದ ಬ್ರೆವಿಸ್ ಅವರು ಮುಂಬೈ ತಂಡದ ಭಾಗವಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕನಸು ನನಸಾಗಿದೆ
ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾನು ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಚಾಲೆಂಜ್ ನಲ್ಲಿ ಟೈಟಾನ್ಸ್ ಪರ ಆಡುತ್ತಿದ್ದಾಗ ಹರಾಜು ನಡೆದಿತ್ತು. ಸ್ಪರ್ಧೆಯ ಅರ್ಧದಾರಿಯಲ್ಲೇ ನನ್ನ ಹೆಸರನ್ನು ಹರಾಜಿಗೆ ಕರೆಯಲಾಯಿತು. ಕ್ವಿಂಟನ್ ಡಿಕಾಕ್ ಅವರು ಟಿವಿ ನೋಡು ಎಂದು ಹೇಳಿದ್ದು ನನಗೆ ನೆನಪಿದೆ ಎಂದು ಡೆವಾಲ್ಡ್ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ತಿಳಿಸಿದ್ದಾರೆ.

ನನ್ನ ಅಪ್ಪ, ಅಮ್ಮ ಕಣ್ಣೀರಿಟ್ಟಿದ್ದರು
ಐಪಿಎಲ್ ಬಿಡ್ಡಿಂಗ್‌ನಲ್ಲಿ ನನ್ನ ಹೆಸರು ಬರುತ್ತಿದ್ದಂತೆ ನನ್ನ ಹೆತ್ತವರು ಕೂಡ ತುಂಬಾ ಉತ್ಸುಕರಾಗಿದ್ದರು. ಅವರು ಉತ್ಸಾಹದಿಂದ ಅಳಲು ಪ್ರಾರಂಭಿಸಿದರು. ಏಕೆಂದರೆ ನಮ್ಮ ಇಡೀ ಕುಟುಂಬವು ಐಪಿಎಲ್ ಅನ್ನು ನೋಡುತ್ತಿದೆ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ನೋಡುತ್ತಿದೆ. ಮುಂಬೈ ಇಂಡಿಯನ್ಸ್ ಪರ ಆಡುವುದು ಕನಸಿನ ಮಾತು. ಅತಿ ಹೆಚ್ಚು ಬಾರಿ ಐಪಿಎಲ್ ಗೆದ್ದಿರುವ ಮುಂಬೈ ತಂಡಕ್ಕೆ ನನ್ನನ್ನು ಸೇರಿಸಿಕೊಂಡಿದ್ದು, ನನ್ನಲ್ಲಿ ಆತ್ಮವಿಶ್ವಾಸ ತುಂಬಿದೆ. ಇದು ಮುಂಬೈನ ಕ್ಯಾಬಿನೆಟ್‌ಗೆ ಮತ್ತೊಂದು ಟ್ರೋಫಿಯನ್ನ ಸೇರಿಸಲು ಸ್ಫೂರ್ತಿ ನೀಡುತ್ತದೆ ಎಂದು ಡೆವಾಲ್ಡ್ ಬ್ರೆವಿಸ್ ಹೇಳಿದ್ದಾರೆ.
ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಬಲ್ಲ 4 ವಿದೇಶಿ ಆಟಗಾರರು

ಸಚಿನ್ ತೆಂಡೂಲ್ಕರ್‌ನ ದೊಡ್ಡ ಅಭಿಮಾನಿ
ಡೆವಾಲ್ಡ್ ಬ್ರೆವಿಸ್ ಅವರು ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೇಲಿನ ಅಭಿಮಾನವನ್ನು ಬಹಿರಂಗಪಡಿಸಿದರು. ತೆಂಡೂಲ್ಕರ್ ಅವರ ಪ್ರದರ್ಶನ ನನಗೆ ಯಾವಾಗಲೂ ಸ್ಫೂರ್ತಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ದ್ವಿಶತಕ ನನ್ನ ನೆಚ್ಚಿನ ಇನ್ನಿಂಗ್ಸ್ ಆಗಿತ್ತು. ನನ್ನ ಸಹೋದರನೊಂದಿಗೆ ಈ ಪಂದ್ಯವನ್ನು ನೋಡಿದ್ದು ನನಗೆ ಇನ್ನೂ ನೆನಪಿದೆ. "ಇದು ಅದ್ಭುತ ಇನ್ನಿಂಗ್ಸ್" ಎಂದು ಬೇಬಿ ಎಬಿ ಹೇಳಿದ್ದಾರೆ.
ನಾನು ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೇ ಓದಿದ್ದೇನೆ. ಇವುಗಳಿಂದ ಸಾಕಷ್ಟು ವಿಷಯಗಳನ್ನು ನನ್ನದೇ ಆಟಕ್ಕೆ ತರಲು ನಾನು ಬಯಸುತ್ತೇನೆ. ತೆಂಡೂಲ್ಕರ್ ಅವರಿಂದ ನಾನು ಕಲಿತ ಒಂದು ಪಾಠವೆಂದರೆ ಯಾವಾಗಲೂ ವಿನಮ್ರವಾಗಿರಬೇಕು. ಏಕೆಂದರೆ ಅಹಂಕಾರವು ನಿಮ್ಮ ಅವನತಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ICC ಮಹಿಳಾ ವಿಶ್ವಕಪ್ 2022: ಗೆದ್ದವರಿಗೆ ಎಷ್ಟು ಹಣ? ಸೋತವರಿಗೆ ಎಷ್ಟು ಸಿಗಲಿದೆ?

ರೋಹಿತ್ ಶರ್ಮಾ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ಎದುರು ನೋಡುತ್ತಿರುವೆ!
ದಕ್ಷಿಣ ಆಫ್ರಿಕಾದ ಯುವ ಆಟಗಾರ ಮುಂಬೈ ಇಂಡಿಯನ್ಸ್‌ನ ನಾಯಕ ರೋಹಿತ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ. ನಾನು ರೋಹಿತ್ ಶರ್ಮಾ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅವರು ಸುಂದರವಾಗಿ ಬ್ಯಾಟಿಂಗ್ ಮಾಡುತ್ತಾರೆ ಮತ್ತು ಬೌಲರ್‌ಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications