ಕಿಂಗ್ ಖಾನ್ ರಿಂದ ಮಕ್ಕಳಿಗೆ ಐಪಿಎಲ್ ಎಬಿಸಿಡಿ
ಕೋಲ್ಕತ್ತಾ, ಏ.9: ಇಂಡಿಯನ್ ಪ್ರಿಮಿಯರ್ ಲೀಗ್ ನ ಅತ್ಯಂತ ಜನಪ್ರಿಯ ಹಾಗೂ ವಿವಾದಿತ ತಂಡದ ಮಾಲೀಕರಾಗಿರುವ ನಟ ಶಾರುಖ್ ಖಾನ್ ಅವರು ಏಳು ಬೀಳು ಏನೇ ಬರಲಿ, ಐಪಿಎಲ್ ಮಾತ್ರ ಜೊತೆಗಿರಲಿ ಎಂಬ ಮಂತ್ರ ಜಪಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಇನ್ನೊಂದು ವಾಕ್ಯ ಸೇರ್ಪಡೆಯಾಗಿದೆ. ಸೋಲಿರಲಿ, ಗೆಲುವಿರಲಿ ಮಕ್ಕಳ ಮುಂದೆಯೇ ಆಟ ಮುಂದುವರೆಯಲಿ ಎಂಬುದನ್ನು ಕಿಂಗ್ ಖಾನ್ ಪಾಲಿಸುತ್ತಿದ್ದಾರೆ.
'ನನ್ನ ಮಕ್ಕಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಆಟದ ಅಸಲಿ ಮಜಾ ಅನುಭವಿಸಬೇಕು, ಐಪಿಎಲ್ ಇದಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದೆ. ನನ್ನ ಮಕ್ಕಳು ಕೂಡಾ ತುಂಬಾ ಉತ್ಸಾಹದಿಂದ ನನ್ನ ಜೊತೆ ಸ್ಟೇಡಿಯಂಗೆ ಬರುತ್ತಿದ್ದಾರೆ. []
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಆಟದಲ್ಲಿನ ಸೋಲು ಗೆಲುವಿನ ರುಚಿ ಈಗಲೇ ಮಕ್ಕಳಿಗೆ ತಿಳಿಯಲಿ ಎಂಬುದು ನನ್ನ ಉದ್ದೇಶ' ಎಂದು ಶಾರುಖ್ ಖಾನ್ ಅವರು ಐಪಿಎಲ್ 8ರ ಮೊದಲ ಗೆಲುವಿನ ಖುಷಿಯಲ್ಲಿ ಹೇಳಿದರು. ಮುಂಬೈನ ವಾಂಖೆಡೆ ಮೈದಾನದಲ್ಲಿ ಮಕ್ಕಳ ಮುಂದೆ ಆದ ಅವಮಾನದ ಕಹಿಯನ್ನು ಮರೆತಿರುವ ಶಾರುಖ್ ಈಗ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದಾರೆ. [ ]
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 2015ರ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸುಲಭವಾಗಿ ಬಗ್ಗುಬಡಿದು ವಿಜಯೋತ್ಸವ ಆಚರಿಸಿತು.[ಪಂದ್ಯದ ವರದಿ ಇಲ್ಲಿ ಓದಿ]

ಶಾರುಖ್ ಮಗ ಆಕರ್ಷಣೆ
ಬಹುಶಃ ಮೈದಾನದಲ್ಲಿದ್ದ ಅತ್ಯಂತ ಕಿರಿಯ ಅಭಿಮಾನಿ (ಎರಡು ವರ್ಷಕ್ಕಿಂತ ಕೆಳಗೆ) ಶಾರುಖ್ ಅವರ ಮಗ ಆಬ್ ರಾಮ್ (AbRam) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಪಂದ್ಯದ ನಂತರ ಪಿಚ್ ನತ್ತ ಓಡಲು ಯತ್ನಿಸಿದ ಅಬ್ ರಾಮ್ ಕೊನೆಗೆ ಕೆಕೆಆರ್ ನಾಯಕ ಗೌತಮ್ ಗಂಭೀರ್ ತಬ್ಬಿ ಹಿಡಿದುಕೊಳ್ಳಲು ಯತ್ನಿಸಿದ್ದು ಗಮನ ಸೆಳೆಯಿತು.
ಮಕ್ಕಳೊಡನೆ ಮೈದಾನದಲ್ಲಿ ಶಾರುಖ್
ಕೋಲ್ಕತ್ತಾ ಜೊತೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಶಾರುಖ್ ಖಾನ್ ಅವರು ಕೋಲ್ಕತ್ತಾ ಜನತೆ ನೀಡಿರುವ ಪ್ರೀತಿಯನ್ನು ತಮ್ಮ ಮಕ್ಕಳಿಗೂ ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ. ಶಾರುಖ್ ಅವರ ನಡೆಗೆ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮೈದಾನಕ್ಕೆ ಕರೆತರುವುದು ಜವಾಬ್ದಾರಿ ಹೆಚ್ಚಿಸಿದೆ
ಮಕ್ಕಳನ್ನು ಮೈದಾನಕ್ಕೆ ಕರೆ ತರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದ ಶಾರುಖ್ ಖಾನ್.
ಶಾರುಖ್ ಪುತ್ರನ ಆಟ ನೋಡಿ
ಶಾರುಖ್ ಪುತ್ರ ಅಬ್ ರಾಮ್ ಈಡೆನ್ ಗಾರ್ಡನ್ ಅಂಗಳದಲ್ಲಿ ಆಟವಾಡಿದ ವಿಡಿಯೋ
ಪಂದ್ಯ ನೋಡುವಂತೆ ಬರ್ಖಾ ದತ್ ಗೆ ಕರೆ
ರಾಜಕೀಯ ಸುದ್ದಿಯನ್ನು ಬಿಡಿ, ನಮ್ಮ ತಂಡದ ಆಟ ನೋಡಿ ಎಂದು ಬರ್ಖಾ ದತ್ ಗೆ ಟ್ವೀಟ್ ಮಾಡಿದ ಶಾರುಖ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications