Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಲೀಗ್' ಕ್ರಿಕೆಟ್‌ಗೆ ಮರಳಲಿದ್ದಾರೆ 'ಟೈಗರ್' ಅಖ್ತರ್: ವೈರಲ್ ವಿಡಿಯೋ

Shoaib Akhtar announces comeback to ‘league’ cricket - Watch

ಇಸ್ಲಮಾಬಾದ್, ಫೆಬ್ರವರಿ 14: ರಾವಲ್‌ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಲೀಗ್‌ ಕ್ರಿಕೆಟ್‌ಗೆ ಮರಳುವ ನಿರ್ಧಾರ ತಾಳಿದ್ದಾರೆ. ಫೆಬ್ರವರಿ 14ರಂದು ಟ್ವಿಟರ್ ವಿಡಿಯೋದಲ್ಲಿ ಮಾತನಾಡಿರುವ ಅಖ್ತರ್ ತಾನು ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದ್ದಾರೆ.

ಅಖ್ತರ್ ಹೇಳಿರೋ ಈ ಲೀಗ್ ಕ್ರಿಕೆಟ್ ಟೂರ್ನಿ ಪಾಕಿಸ್ತಾನ ಸೂಪರ್‌ ಲೀಗ್ (ಪಿಎಸ್‌ಎಲ್) ಅನ್ನೋದೆ ಖರೆ. ಯಾಕೆಂದರೆ ಫೆಬ್ರವರಿ 14ರಂದೇ ಪಿಎಸ್‌ಎಲ್ ಟೂರ್ನಿ ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಪ್ರಾರಂಭಗೊಳ್ಳುತ್ತಿದೆ. ಆರಂಭಿಕ ಪಂದ್ಯಕ್ಕಾಗಿ ಇಸ್ಲಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಖಲಂದರ್ ತಂಡಗಳು ಅಂದು ಕಣಕ್ಕಿಳಿಯಲಿವೆ.

ಟ್ವಿಟರ್ ನಲ್ಲಿ ಮಾತನಾಡಿರುವ ಶೋಯೆಬ್, 'ಈಗಿನ ಮಕ್ಕಳು ಕ್ರಿಕೆಟ್ ಬಗ್ಗೆ ತಮಗೆ ತುಂಬಾ ಗೊತ್ತಿದೆ ಎಂದು ಭಾವಿಸಿದ್ದಾರೆ. ಅವರು ನನಗೆ ಬೌಲಿಂಗ್ ಚಾಲೆಂಜ್ ಕೂಡ ಮಾಡಬಲ್ಲರು ಎಂದು ನಾನು ಭಾವಿಸಿದ್ದೇನೆ. ಮಕ್ಕಳೆ, ನಾನೂ ಲೀಗ್ ಕ್ರಿಕೆಟ್‌ಗೆ ಮರಳುತ್ತಿದ್ದೇನೆ. ಕ್ರಿಕೆಟ್ ಆಡುತ್ತಿದ್ದೇನೆ. ಹುಷಾರಾಗಿರಿ' ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಸಾಧನೆಗಾಗಿ ಹೆಸರು ದಾಖಲಿಸಿಕೊಂಡಿರುವ ಅಖ್ತರ್, ಲೀಗ್ ಕ್ರಿಕೆಟ್‌ಗೆ ಮರಳುತ್ತಾರೆ ಎಂದು ತಿಳಿಯುತ್ತಲೇ ಅಖ್ತರ್ ಅವರ ತಂಡದ ಮಾಜಿ ಆಟಗಾರ ವಾಸೀಂ ಅಕ್ರಮ್ ಮತ್ತು ಶೋಯೆಬ್ ಮಲ್ಲಿಕ್ ಕೂಡ ಖುಷಿಗೊಂಡಿದ್ದಾರೆ, ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ ಕೂಡ. ಅಂದ್ಹಾಗೆ ಅಖ್ತರ್‌ಗೆ 'ಟೈಗರ್' ಎಂಬ ಬಿರುದೂ ಇದೆ.

Story first published: Thursday, February 14, 2019, 14:07 [IST]
Other articles published on Feb 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+