Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL VS PAK 1st Test: ಪಾಕಿಸ್ತಾನ 218 ರನ್‌ಗಳಿಗೆ ಆಲೌಟ್, ಶ್ರೀಲಂಕಾಗೆ 40 ರನ್ ಮುನ್ನಡೆ

Srilanka vs pakistan

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡವು ಎರಡನೇ ದಿನದಾಟದಂತ್ಯಕ್ಕೆ 40ರನ್‌ಗಳ ಮುನ್ನಡೆ ಸಾಧಿಸಿದೆ. ಶ್ರೀಲಂಕಾದ ಬಿಗು ಬೌಲಿಂಗ್ ದಾಳಿಯ ನಡುವೆಯು ಪ್ರವಾಸಿ ತಂಡದ ನಾಯಕ ಬಾಬರ್ ಅಜಮ್ ಏಕಾಂಗಿ ಹೋರಾಟ ಪ್ರದರ್ಶಿಸಿ ಶತಕ ಸಿಡಿಸಿ ತಂಡವನ್ನ ಮುನ್ನಡೆಸಿದರು.

ಬಾಬರ್ ಶತಕದ ನೆರವಿನಿಂದ ಪಾಕಿಸ್ತಾನ ತಂಡವು 200ರ ಗಡಿದಾಟಲು ಸಾಧ್ಯವಾಗಿದ್ದು, 218ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 4ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 36ರನ್ ಕಲೆಹಾಕಿದ್ದು 40ರನ್ ಮುನ್ನಡೆ ಪಡೆದುಕೊಂಡಿದೆ.

ಬಾಬರ್ ಅಜಮ್ ಅಮೋಘ ಶತಕ, ಪಾಕಿಸ್ತಾನಕ್ಕೆ ಏಕೈಕ ಆಧಾರ

ಶ್ರೀಲಂಕಾದ 222ರನ್‌ಗಳಿಗೆ ಉತ್ತರವಾಗಿ ಮೊದಲ ದಿನದಾಟದಂತ್ಯಕ್ಕೆ2 ವಿಕೆಟ್ ನಷ್ಟಕ್ಕೆ 24ರನ್ ಕಲೆಹಾಕಿದ್ದ ಪಾಕಿಸ್ತಾನ ತಂಡವು ಎರಡನೇ ದಿನದಲ್ಲೂ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಒಂದೆಡೆ ನಾಯಕ ಬಾಬರ್ ಅಜಮ್ ದೃಢವಾಗಿ ನಿಂತು ವಿಕೆಟ್ ಉಳಿಸಿಕೊಂಡರೆ, ಮತ್ತೊಂದೆಡೆ ಬಂದಷ್ಟೇ ವೇಗವಾಗಿ ಆಟಗಾರರು ಪೆವಿಲಿಯನ್ ಸೇರಿಕೊಂಡರು.

ಎರಡನೇ ದಿನದಾಟದಲ್ಲಿ ಅಜರ್ ಅಲಿ (3), ರಿಜ್ವಾನ್ (19), ಸಲ್ಮಾನ್ 5, ನವಾಜ್ 5, ಶಾಹಿನ್ ಅಫ್ರಿದಿ 0, ಯಾಸಿರ್ ಶಾ 18, ಹಸನ್ ಅಲಿ 17ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಒಂದೆಡೆ ಬೊಂಬಾಟ್ ಇನ್ನಿಂಗ್ಸ್‌ ಆಡಿದ ಬಾಬರ್ ಅಜಮ್ ಟೆಸ್ಟ್ ಕ್ರಿಕೆಟ್‌ನಲ್ಲಿ 6 ನೇ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಧಾರವಾದ್ರು. 244 ಎಸೆತಗಳಲ್ಲಿ 119ರನ್ ಕಲೆಹಾಕಿದ ಬಾಬರ್ ಕೊನೆಯದಾಗಿ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಅಮೋಘ ಸಿಕ್ಸರ್‌ಗಳಿದ್ದವು.

ಐದು ವಿಕೆಟ್ ಪಡೆದು ಮಿಂಚಿದ ಪ್ರಭಾತ್ ಜಯಸೂರ್ಯ

ಆಸ್ಟ್ರೇಲಿಯಾ ವಿರುದ್ಧದ ಕಳೆದ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದ ಲಂಕಾದ ಪ್ರಭಾತ್ ಜಯಸೂರ್ಯ ಪಾಕಿಸ್ತಾನ ತಂಡಕ್ಕೂ ಮುಳುವಾಗಿದ್ದಾರೆ. ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. 39 ಓವರ್‌ಗಳಲ್ಲಿ 89ರನ್ ನೀಡಿ 10 ಮೇಡನ್ ಓವರ್ ಸಹಿತ 5 ವಿಕೆಟ್ ಉರುಳಿಸಿದ್ರು. ಆರ್‌. ಮೆಂಡೀಸ್ ಮತ್ತು ಮಹೀಶ್ ತೀಕ್ಷಣ ತಲಾ ಎರಡು ವಿಕೆಟ್ ಪಡೆದರು. ರಜಿತಾ ಏಕೈಕ ವಿಕೆಟ್ ಸಂಪಾದಿಸಿದರು.

ದಿನೇಶ್ ಕಾರ್ತಿಕ್‌ಗೆ ಹೊಗಳಿದ್ರೆ ಆಗಲ್ಲ, ತೆಗಳಿದ್ರೆ ಇಷ್ಟ: ಬಸು ಶಂಕರ್

ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನ ವಿಕೆಟ್ ಕಳೆದುಕೊಂಡ ಲಂಕಾ

ಕೇವಲ 4ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ ಉತ್ತಮ ಆರಂಭ ಪಡೆಯುವ ಲಕ್ಷಣ ತೋರಿತಾದ್ರೂ , ದಿನದಾಟದಂತ್ಯದಲ್ಲಿ ನಾಯಕ ದಿಮುತ್ ಕರುಣರತ್ನೆ 16ರನ್‌ಗಳಿಸಿದ್ದಾಗ ಸ್ಪಿನ್ನರ್ ಮೊಹಮ್ಮದ್ ನವಾಜ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಮತ್ತೊಂದೆಡೆ ಓಶಾದ ಫರ್ನಾಂಡೋ ಅಜೇಯ 17ರನ್ ಕಲೆಹಾಕಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕಸುನ್ ರಜಿತ ಅಜೇಯ 3ರನ್ ಕಲೆಹಾಕಿದ್ದು, ಶ್ರೀಲಂಕಾ 40ರನ್‌ಗಳ ಮುನ್ನಡೆ ಸಾಧಿಸಿದೆ.

ಪಾಕ್ vs ಶ್ರೀಲಂಕಾ: ಪಾಕಿಸ್ತಾನ ಪರ ವಿಶೇಷ ಸಾಧನೆ ಮಾಡಿದ ನಾಯಕ ಬಾಬರ್ ಅಜಂ

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ

ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ

ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್

Story first published: Sunday, July 17, 2022, 18:06 [IST]
Other articles published on Jul 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+