SL vs PAK 1st Test: ಅಬ್ದುಲ್ಲಾ ಶಫೀಕ್ ಅಜೇಯ ಶತಕ, ಪಾಕ್ ಗೆಲುವಿಗೆ 120 ರನ್ ಬಾಕಿ

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಲಂಕಾ ನೀಡಿದ್ದ 342ರನ್‌ಗಳ ಸವಾಲಿನ ಮೊತ್ತವನ್ನ ಪಾಕಿಸ್ತಾನ ತಂಡವು ಯಶಸ್ವಿಯಾಗಿ ಬೆನ್ನತ್ತುವ ಪ್ರದರ್ಶನ ನೀಡಿದೆ.
ಪಾಕಿಸ್ತಾನ ಓಪನರ್ ಅಬ್ದುಲ್ಲಾ ಶಫೀಕ್ ಅಜೇಯ ಶತಕ ಹಾಗೂ ನಾಯಕ ಬಾಬರ್ ಅಜಮ್ ಉತ್ತಮ ಆಟದ ಪ್ರದರ್ಶನದಿಂದಾಗಿ ಪಾಕಿಸ್ತಾನ ಗೆಲುವಿನತ್ತ ಹೆಜ್ಜೆಯಿಟ್ಟಿದ್ದು, ಅಂತಿಮ ದಿನದಾಟದಲ್ಲಿ ಗೆಲುವಿಗೆ 120ರನ್ ಬಾಕಿ ಉಳಿದಿದ್ದು, ಶ್ರೀಲಂಕಾ ಗೆಲುವಿಗೆ 7 ವಿಕೆಟ್‌ಗಳು ಬೇಕಿವೆ.
ಭರ್ಜರಿ ಶತಕ ಸಿಡಿಸಿದ ಪಾಕ್ ಓಪನರ್ ಅಬ್ದುಲ್ಲಾ
ಮೊದಲ ವಿಕೆಟ್‌ಗೆ ಇಮಾಮ್ ಉಲ್ ಹಕ್ ಜೊತೆಗೆ 87ರನ್‌ಗಳ ಜೊತೆಯಾಟವಾಡಿದ ಓಪನರ್ ಅಬ್ದುಲ್ಲಾ ಶಫೀಕ್ ಅಜೇಯ ಶತಕ ದಾಖಲಿಸುವ ಮೂಲಕ ಪಾಕಿಸ್ತಾನದ ಗೆಲುವಿನ ಗುರಿಯನ್ನ ಸುಲಭಗೊಳಿಸಿದ್ದಾರೆ. ನಾಲ್ಕನೇ ದಿನದಾಟದಂತ್ಯಕ್ಕೆ 289 ಎಸೆತಗಳಲ್ಲಿ ಅಜೇಯ 112 ರನ್ ಕಲೆಹಾಕಿ ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದ ಶಫೀಕ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.
ಇಮಾಮ್ ಉಲ್ ಹಕ್ 35ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ಅಜರ್ ಅಲಿ 6 ರನ್‌ಗೆ ಪ್ರಭಾತ್ ಜಯಸೂರ್ಯ ಸ್ಪಿನ್ ದಾಳಿಗೆ ಬಲಿಯಾದರು. ಇದಾದ ಬಳಿಕ ನಾಯಕ ಬಾಬರ್ ಅಜಮ್ ಓಪನರ್ ಅಬ್ದುಲ್ಲಾ ಜೊತೆಗೆ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಅರ್ಧಶತಕ ದಾಖಲಿಸಿದ್ದ ಬಾಬರ್ ವಿಕೆಟ್ ಉರುಳಿಸಿದ ಪ್ರಭಾತ್ ಜಯಸೂರ್ಯ
ಮೂರನೇ ವಿಕೆಟ್‌ಗೆ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಶಫೀಕ್ ಹಾಗೂ ಬಾಬರ್ ಅಜಮ್ ಜೋಡಿ ಅತ್ಯುತ್ತಮ ಪ್ರದರ್ಶನದೊಂದಿಗೆ ಶ್ರೀಲಂಕಾ ಬೌಲಿಂಗ್ ದಾಳಿಯನ್ನ ಎದುರಿಸಿತು. ಒಂದೆಡೆ ಅಬ್ದುಲ್ಲಾ ಶತಕದ ಗಡಿದಾಟಿದ್ರೆ, ನಾಯಕ ಬಾಬರ್ ಅಜಮ್ ಅರ್ಧಶತಕದ ಗಡಿದಾಟಿದರು.
104 ಎಸೆತಗಳಲ್ಲಿ 55ರನ್ ಕಲೆಹಾಕಿದ ಬಾಬರ್ ಅಜಮ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಅಪಾಯಕಾರಿಯಾಗಿದ್ದ ಈ ಜೊತೆಯಾಟಕ್ಕೆ ಲಂಕಾದ ಇನ್‌ಫಾರ್ಮ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಬ್ರೇಕ್ ಹಾಕಿದರು. ಪಂದ್ಯದ 80ನೇ ಓವರ್‌ನಲ್ಲಿ ಬಾಬರ್ ಕ್ಲೀನ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.
ಈ ವಿಕೆಟ್ ಪತನದ ಬಳಿಕ ದಿನದಾಟದಂತ್ಯಕ್ಕೆ ಹತ್ತು ಓವರ್‌ಗಳು ಬಾಕಿ ಉಳಿದಿದ್ದವು. ವಿಕೆಟ್ ಉರುಳದಂತೆ ಎಚ್ಚರವಹಿಸಿದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅಜೇಯ 7ರನ್ ಹಾಗೂ ಅಬ್ದುಲ್ಲಾ ಶಫೀಕ್ ಅಜೇಯ 112ರನ್ ಕಲೆಹಾಕಿ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ 3 ವಿಕೆಟ್ ನಷ್ಟಕ್ಕೆ 222ರನ್ ಕಲೆಹಾಕಿದ್ದು, ಗೆಲುವಿಗೆ 120ರನ್ ಬೇಕಿದೆ. ಲಂಕಾ ಸೋಲಿನಿಂದ ಪಾರಾಗಲು 7 ವಿಕೆಟ್‌ಗಳ ಅವಶ್ಯಕತೆಯಿದೆ.
ಕೊಹ್ಲಿ vs ರೋಹಿತ್: 2022ರಲ್ಲಿ ಹೆಚ್ಚು ರನ್ ಮತ್ತು ಅರ್ಧಶತಕಗಳು ಗಳಿಸಿರುವವರು ಯಾರು?
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 337ರನ್‌ಗಳಿಗೆ ಆಲೌಟ್
ಪಾಕಿಸ್ತಾನದ ಇನ್ನಿಂಗ್ಸ್‌ಗೂ ಮೊದಲು ದಿನದಾಟದ ಆರಂಭದಲ್ಲಿ ಶ್ರೀಲಂಕಾ 337ರನ್‌ಗಳಿಗೆ ಆಲೌಟ್ ಆಗಿತು. ಮೂರನೇ ದಿನದಾಟದಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದ್ದು 333ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ಆದ್ರೆ ನಾಲ್ಕನೇ ದಿನದಾಟದಲ್ಲಿ ಕೇವಲ 8ರನ್‌ಗಳನ್ನ ಸೇರಿಸಿದ ಲಂಕಾವು 337ರನ್‌ಗೆ ಸರ್ವಪತನಗೊಂಡಿತು. ಅಲ್ಲದೆ 341ರನ್‌ಗಳ ಮುನ್ನಡೆ ಸಾಧಿಸಿತು. ಶ್ರೀಲಂಕಾ ಪರ ಭರ್ಜರಿ ಆಟವಾಡಿದ ದಿನೇಶ್ ಚಾಂಡಿಮಲ್ ಶತಕ ದಾಖಲಿಸಲಾಗದೆ ಅಜೇಯ 94ರನ್ ಕಲೆಹಾಕಿದರು.
IND vs ENG: ರಿಷಭ್ ಪಂತ್-ಹಾರ್ದಿಕ್ ಪಾಂಡ್ಯರನ್ನು ಈ ಭಲೇ ಜೋಡಿಗೆ ಹೋಲಿಸಿದ ಸುನಿಲ್ ಗವಾಸ್ಕರ್

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications