ಎರಡೂ ಇನ್ನಿಂಗ್ಸ್‌ನಲ್ಲಿ ಚಾಂಡಿಮಲ್ ತಂಡಕ್ಕೆ ಆಧಾರ
ಶ್ರೀಲಂಕಾ ಪರ ಭರ್ಜರಿ ಫಾರ್ಮ್ ಮುಂದುವರಿಸಿರುವ ದಿನೇಶ್ ಚಾಂಡಿಮಲ್ ಲಂಕಾ ತಂಡಕ್ಕೆ ಆಧಾರವಾಗಿದ್ದಾರೆ. ಮೂರನೇ ದಿನದಾಟದ ಅಂತ್ಯದವರೆಗೂ ಅಜೇಯರಾಗಿ ಉಳಿದ ಚಾಂಡಿಮಲ್ 121 ಎಸೆತಗಳಲ್ಲಿ ಅಜೇಯ 86ರನ್ ಕಲೆಹಾಕಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 23ನೇ ಅರ್ಧಶತಕ ದಾಖಲಿಸಿದ ಚಾಂಡಿಮಲ್ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು. ನಾಲ್ಕನೇ ದಿನದಾಟದಲ್ಲಿ ಶತಕ ಸಿಡಿಸುವ ಅವರ ಪ್ರಯತ್ನಕ್ಕೆ ಜೊತೆಗಾರ ಪ್ರಭಾತ್ ಜಯಸೂರ್ಯ ಸಾಥ್ ಕೊಡಲಿಲ್ಲ.
ನಾಸಿರ್ ಶಾ ಬೌಲಿಂಗ್‌ನಲ್ಲಿ ಚೆಂಡಿನ ಗತಿಯನ್ನ ಅರಿಯದೇ ಪ್ರಭಾತ್ ಜಯಸೂರ್ಯ 4ರನ್‌ಗಳಿಸಿ ಬೌಲ್ಡ್ ಆದರು. ಮೂರನೇ ದಿನದಾಟದ ಕೊನೆಯಲ್ಲಿ ಚಾಂಡಿಮಲ್ ಜೊತೆಗೆ ಕ್ರೀಸ್‌ನಲ್ಲಿ ನೆಲೆಯೂರಿ ಅಂತಿಮ ವಿಕೆಟ್ ಉಳಿಸಿಕೊಂಡಿದ್ದರು. ಇನ್ನು ಚಾಂಡಿಮಲ್ 139 ಎಸೆತಗಳಲ್ಲಿ ಅಜೇಯ 94ರನ್ ಕಲೆಹಾಕಿದ್ದು, ಗಾಲೆಯಲ್ಲಿ ಐದನೇ ಶತಕ ಸಿಡಿಸುವ ಅವಕಾಶ ವಂಚಿತರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮನ್ಸ್

ಉತ್ತಮ ಆರಂಭ ಪಡೆದಿರುವ ಪಾಕಿಸ್ತಾನ
342ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿರುವ ಪಾಕಿಸ್ತಾನ ತಂಡವು ಆತ್ಮವಿಶ್ವಾಸದಿಂದ ಇನ್ನಿಂಗ್ಸ್ ಆರಂಭಿಸಿದೆ. 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 31ರನ್ ಕಲೆಹಾಕಿರುವ ಪಾಕಿಸ್ತಾನ ಪರ ಅಬ್ದುಲ್ ಶಫೀಕ್ ಅಜೇಯ 20, ಇಮಾಮ್ ಉಲ್ ಹಕ್ ಅಜೇಯ 11ರನ್ ಕಲೆಹಾಕಿದ್ದಾರೆ. ಪಾಕಿಸ್ತಾನ ತಂಡದ ಗೆಲುವಿಗೆ ಇನ್ನೂ 311 ರನ್‌ಗಳು ಬೇಕಿದೆ.
ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದು ನಾಚಿಕೆಗೇಡು: ನಾಸಿರ್ ಹುಸೇನ್

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್


Click it and Unblock the Notifications
