ಅರ್ಧಶತಕ ಸಿಡಿಸಿ ಆತುರದ ಶಾಟ್ ಹೊಡೆಯಲು ಹೋಗಿ ಔಟ್
70 ಎಸೆತಗಳಲ್ಲಿ 50 ರನ್ ಕಲೆಹಾಕಿದ ಶ್ರೀಲಂಕಾ ಓಪನರ್ ಒಶಾದ ಫರ್ನಾಂಡೊ ಸಿಕ್ಸರ್ ಸಿಡಿಸಿ ಅರ್ಧಶತಕ ಸಿಡಿಸಿದ ಬಳಿಕ ಆತುರದ ಶಾಟ್‌ಗೆ ಮೊರೆ ಹೋದ ಪರಿಣಾಮ ಮೊಹಮ್ಮದ್ ನವಾಜ್‌ಗೆ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್‌ಗಳಿದ್ದವು.
ಫರ್ನಾಂಡೊ ಔಟಾದ ಬೆನ್ನಲ್ಲೇ ಕುಸಾಲ್ ಮೆಂಡೀಸ್ ರನೌಟ್ ಆಗಿದ್ದು ಶ್ರೀಲಂಕಾಗೆ ನುಂಗಲಾರದ ತುತ್ತಾಯಿತು. 3 ರನ್ ಕಲೆಹಾಕಿದ್ದ ಮೆಂಡೀಸ್ ಅಗ್ಮ ಸಲ್ಮಾನ್ ಚುರುಕು ಫೀಲ್ಡಿಂಗ್‌ನಿಂದಾಗಿ ಪೆವಿಲಿಯನ್ ಸೇರಿಕೊಂಡರು.
100ನೇ ಟೆಸ್ಟ್ ಪಂದ್ಯದಲ್ಲಿ 42ರನ್ ಕಲೆಹಾಕಿದ ಮ್ಯಾಥ್ಯೂಸ್
ಮೊದಲೆರಡು ವಿಕೆಟ್ ಪತನದ ಬಳಿಕ ನಾಯಕ ದಿಮುತ್ ಕರುಣರತ್ನೆ ಹಾಗೂ ಏಂಜೆಲೊ ಮ್ಯಾಥ್ಯೂಸ್ ಮೂರನೇ ವಿಕೆಟ್‌ಗೆ ಜೊತೆಯಾಟ ನೀಡಲು ಪ್ರಾರಂಭಿಸಿದರು. ಲಂಕಾದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ಗೆ ಇದು 100ನೇ ಟೆಸ್ಟ್ ಪಂದ್ಯವಾಗಿರುವುದು ವಿಶೇಷ. ಆದ್ರೆ ತಂಡದ ಮೊತ್ತ 120ರ ಗಡಿ ಸಮೀಪಿಸಿದಾಗ 40 ರನ್ ಕಲೆಹಾಕಿದ್ದ ಕರುಣರತ್ನೆ ಯಾಸಿರ್ ಶಾಗೆ ವಿಕೆಟ್ ಒಪ್ಪಿಸಿದ್ದು, ಲಂಕಾಗೆ ಹಿನ್ನಡೆಯನ್ನುಂಟುಮಾಡಿತು.
100ನೇ ಟೆಸ್ಟ್ ಪಂದ್ಯವನ್ನಾಡಿದ ಮ್ಯಾಥ್ಯೂಸ್ ಉತ್ತಮ ಆಟವು 42ರನ್‌ಗೆ ಕೊನೆಗೊಂಡಿತು. ಆದ್ರೆ ನಂತರದಲ್ಲಿ ದಿನೇಶ್ ಚಾಂಡಿಮಲ್ ಮತ್ತೊಮ್ಮೆ ತಂಡಕ್ಕೆ ನೆರವಾಗುವ ಮೂಲಕ ತಂಡದ ಕುಸಿತವನ್ನ ತಪ್ಪಿಸಿದ್ರು.
ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಆಸ್ತಿ ಮೌಲ್ಯ ಎಷ್ಟಿರಬಹುದು? 2022ರ ಆದಾಯ ಎಷ್ಟು?
80ರನ್‌ಗಳ ಸೊಗಸಾದ ಇನ್ನಿಂಗ್ಸ್ ಆಡಿದ ದಿನೇಶ್
ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಆಟವಾಡಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದ ದಿನೇಶ್ ಚಾಂಡಿಮಲ್, ಪಾಕಿಸ್ತಾನ ವಿರುದ್ಧವೂ ತನ್ನ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ತಂಡಕ್ಕೆ ಆಧಾರವಾದಂತೆ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 80ರನ್‌ಗಳ ಕೊಡುಗೆ ನೀಡಿದ್ದಾರೆ.
137 ಎಸೆತಗಳನ್ನ ಎದುರಿಸಿದ ದಿನೇಶ್ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ 80 ರನ್ ಕಲೆಹಾಕಿ ಮೊಹಮ್ಮದ್ ನವಾಜ್‌ಗೆ ವಿಕೆಟ್ ಒಪ್ಪಿಸಿದ್ರು. ದಿನದಾಟದ ಕೊನೆಯಲ್ಲಿ ಉತ್ತಮವಾಗೇ ಆಡ್ತಿದ್ದ ಧನಂಜಯ ಡಿಸಿಲ್ವಾ 61 ಎಸೆತಗಳಲ್ಲಿ 33ರನ್ ಕಲೆಹಾಕಿ ಔಟಾದರು. ಈತನ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ದಿನದಾಟದಂತ್ಯಕ್ಕೆ ತಂಡಕ್ಕೆ ಆಧಾರವಾದ ವಿಕೆಟ್ ಕೀಪರ್ ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಅಜೇಯ 42 ರನ್ ಕಲೆಹಾಕಿದ್ದು, ದುನಿತ್ ವೆಲ್ಲಂಘೆ ಅಜೇಯ 6ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾ ಮೊದಲ ದಿನದಲ್ಲಿ 6 ವಿಕೆಟ್ ನಷ್ಟಕ್ಕೆ 315ರನ್ ಕಲೆಹಾಕಿದೆ.
IND vs WI 2ನೇ ಏಕದಿನ: ಟಾಸ್ ವರದಿ ಮತ್ತು ಲೈವ್ ಸ್ಕೋರ್; ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ
ಬೆಂಚ್: ಲಕ್ಷಿತಾ ಮಾನಸಿಂಘೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್


Click it and Unblock the Notifications












