ಏಳು ಪ್ರಮುಖ ವಿಕೆಟ್ ಕಳೆದುಕೊಂಡಿರುವ ಪಾಕಿಸ್ತಾನ
ಮೊದಲ ಟೆಸ್ಟ್ ಪಂದ್ಯದಲ್ಲಿ 342ರನ್ ಗುರಿ ಬೆನ್ನತ್ತುವಲ್ಲಿ ಪಾಕ್ ಪರ ಹೀರೋ ಆಗಿ ಮಿಂಚಿದ್ದ ಅಬ್ದುಲ್ಲಾ ಶಫೀಕ್ ಶೂನ್ಯಕ್ಕೆ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಆಘಾತ ಉಂಟುಮಾಡಿತು. ಪಾಕಿಸ್ತಾನ ಮೊದಲ ಓವರ್‌ನಲ್ಲೇ ಅಬ್ದುಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ವಿಕೆಟ್ ಪತನ ಆರಂಭಿಸಿತು. ನಾಯಕ ಬಾಬರ್ ಅಜಮ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಪ್ರಭಾತ್ ಜಯಸೂರ್ಯ ಬಿಡಲಿಲ್ಲ. 16ರನ್‌ಗೆ ಬಾಬರ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು.
ಉತ್ತಮವಾಗೇ ಆಡ್ತಿದ್ದ ಇಮಾಮ್ ಉಲ್ ಹಕ್ 32ರನ್‌ಗೆ ಧನಂಜಯ ಡಿಸಿಲ್ವಾ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು. ತಲಾ 24ರನ್ ಕಲೆಹಾಕಿದ್ದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಫವಾದ್ ಅಲಮ್ ವಿಕೆಟ್ ಎಗರಿಸುವಲ್ಲಿ ರಮೇಶ್ ಮೆಂಡೀಸ್ ಯಶಸ್ವಿಯಾದ್ರು. ಇದ್ರ ಬೆನಲ್ಲೇ 12ರನ್‌ಗೆ ಮೊಹಮ್ಮದ್ ನವಾಜ್ ಗಂಟು ಮೂಟೆ ಕಟ್ಟಿದ್ರು. ಆದ್ರೆ ತಂಡದ ಪರ ಏಕೈಕ ಹೋರಾಟ ನಡೆಸಿದ ಅಘಾ ಸಲ್ಮಾನ್ ಅರ್ಧಶತಕ ದಾಖಲಿಸಿ ತಂಡದ ಮರ್ಯಾದೆ ಕಾಪಾಡಿದರು.
ಆದ್ರೆ ದಿನದಾಟದಂತ್ಯದಲ್ಲಿ 62 ರನ್ ಕಲೆಹಾಕಿದ್ದ ಸಲ್ಮಾನ್‌ಗೆ ಪ್ರಭಾತ್ ಜಯಸೂರ್ಯ ಖೆಡ್ಡಾ ತೋಡಿದರ ಪರಿಣಾಮ ತಂಡಕ್ಕೆ ಆಧಾರವಾಗಿದ್ದ ವಿಕೆಟ್ ಕಳೆದುಕೊಂಡು ಪಾಕ್ ಎರಡನೇ ದಿನದಾಟ ಮುಗಿಸಿತು. 191ರನ್‌ಗೆ ಏಳು ವಿಕೆಟ್ ಕಳೆದುಕೊಂಡಿರುವ ಪಾಕಿಸ್ತಾನ ಇನ್ನೂ 187 ರನ್‌ಗಳ ಹಿನ್ನಡೆಯಲ್ಲಿದೆ.
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 13 ವರ್ಷಗಳ ಬಳಿಕ 1000 ರನ್ ಪೂರೈಸಿದ ಪಾಕ್ ಆಟಗಾರ!
378ರನ್‌ಗೆ ಇನ್ನಿಂಗ್ಸ್ ಮುಗಿಸಿದ ಶ್ರೀಲಂಕಾ
ಮೊದಲ ದಿನದಾಟದಲ್ಲಿ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿದ್ದ ಶ್ರೀಲಂಕಾ ಇಂದು 63ರನ್‌ಗಳನ್ನ ಸೇರಿಸಿ 378ರನ್‌ಗಳಿಗೆ ಸರ್ವಪತನಗೊಂಡಿತು. ಮೊದಲ ದಿನದಾಟದಲ್ಲಿ ಅಜೇಯ 42 ರನ್ ಕಲೆಹಾಕಿ ತಂಡಕ್ಕೆ ಆಧಾರವಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಅರ್ಧಶತಕ ಗಡಿದಾಟುವ ಮೂಲಕ ತಂಡಕ್ಕೆ ಆಧಾರವಾದ್ರು. ಆದ್ರೆ ಡಿಕ್ವೆಲ್ಲಾ ಆಟವು 51 ರನ್‌ಗೆ ಕೊನೆಗೊಂಡಿತು.
ಡಿಕ್ವೆಲ್ಲಾ ವಿಕೆಟ್ ಪತನದ ಬಳಿಕ ಪ್ರಭಾತ್ ಜಯಸೂರ್ಯ 8ರನ್ ಕಲೆಹಾಕಿ ಔಟಾದರು. ಆದ್ರೆ ತಂಡಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ರಜತ ಮೆಂಡೀಸ್ 9ನೇ ಕ್ರಮಾಂಕದಲ್ಲಿ 52 ಎಸೆತಗಳಲ್ಲಿ 35ರನ್‌ಗಳ ಕೊಡುಗೆಯನ್ನ ನೀಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಮೆಂಡೀಸ್ ಯಾಸಿರ್ ಶಾ ಬೌಲಿಂಗ್‌ನಲ್ಲಿ ಬೋಲ್ಡ್ ಆಗುವ ಮೂಲಕ ಇನ್ನಿಂಗ್ಸ್ ಕೊನೆಗೊಳಿಸಿದರು. ಶ್ರೀಲಂಕಾ 378ರನ್‌ಗೆ ತನ್ನ 10 ವಿಕೆಟ್‌ಗಳನ್ನ ಕಳೆದುಕೊಂಡಿತು.
ಕಳೆದ 6 ಪಂದ್ಯಗಳಲ್ಲಿ 52ರನ್ ಕಲೆಹಾಕಿದ್ದ ಶಾಯ್ ಹೋಪ್, ಭಾರತದ ವಿರುದ್ಧ ಸೆಂಚುರಿ ಸಿಡಿಸಿದ್ದೇಗೆ?

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ
ಬೆಂಚ್: ಲಕ್ಷಿತಾ ಮಾನಸಿಂಘೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್


Click it and Unblock the Notifications












