For Quick Alerts
ALLOW NOTIFICATIONS  
For Daily Alerts
 

SL vs Pak 2nd Test: ಶ್ರೀಲಂಕಾ ಮೊದಲ ಇನ್ನಿಂಗ್ಸ್ 378ರನ್‌ಗೆ ಆಲೌಟ್‌, ಪಾಕ್‌ಗೆ ಆರಂಭಿಕ ಆಘಾತ

Niroshan Dickwella

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 378 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ದಿನದಾಟದಲ್ಲಿ ಶ್ರೀಲಂಕಾ 6 ವಿಕೆಟ್‌ ನಷ್ಟಕ್ಕೆ 315 ರನ್‌ ಕಲೆಹಾಕಿದ್ದ ಶ್ರೀಲಂಕಾ ಇಂದು 63ರನ್‌ಗಳನ್ನ ಸೇರಿಸಿ 378ರನ್‌ಗಳಿಗೆ ಸರ್ವಪತನಗೊಂಡಿತು.

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ದೊಡ್ಡ ಆಘಾತವಾಗಿದೆ. ಕಳೆದ ಪಂದ್ಯದಲ್ಲಿ ಪಂದ್ಯ ಪುರಷೋತ್ತಮ ಪ್ರಶಸ್ತಿ ಪಡೆದು ಮಿಂಚಿದ್ದ ಅಬ್ದುಲ್ಲಾ ಶಫೀಕ್ ಅಸಿತಾ ಫರ್ನಾಂಡೊ ಬೌಲಿಂಗ್‌ನಲ್ಲಿ ಎರಡನೇ ಎಸೆತದಲ್ಲೇ ಕ್ಲೀನ್ ಬೌಲ್ಡ್‌ ಆಗಿದ್ದಾರೆ.

ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾದ ಡಿಕ್ವೆಲ್ಲಾ

ಮೊದಲ ದಿನದಾಟದಲ್ಲಿ ಅಜೇಯ 42 ರನ್ ಕಲೆಹಾಕಿ ತಂಡಕ್ಕೆ ಆಧಾರವಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಅರ್ಧಶತಕ ಗಡಿದಾಟುವ ಮೂಲಕ ತಂಡಕ್ಕೆ ಆಧಾರವಾದ್ರು. ಆದ್ರೆ ಡಿಕ್ವೆಲ್ಲಾ ಆಟವು ಇದಕ್ಕಿಂತ ಒಂದು ರನ್‌ ಹೆಚ್ಚು ಸೇರಿಸುವುದರಲ್ಲಿ ಮುಕ್ತಾಯಗೊಂಡಿತು. 51 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ ನಿರೋಶನ್ ಡಿಕ್ವೆಲ್ಲಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಡಿಕ್ವೆಲ್ಲಾ ವಿಕೆಟ್ ಪತನದ ಬಳಿಕ ಪ್ರಭಾತ್ ಜಯಸೂರ್ಯ 8ರನ್ ಕಲೆಹಾಕಿ ಔಟಾದರು. ಆದ್ರೆ ತಂಡಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ರಜತ ಮೆಂಡೀಸ್ 9ನೇ ಕ್ರಮಾಂಕದಲ್ಲಿ 52 ಎಸೆತಗಳಲ್ಲಿ 35ರನ್‌ಗಳ ಕೊಡುಗೆಯನ್ನ ನೀಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಮೆಂಡೀಸ್ ಯಾಸಿರ್ ಶಾ ಬೌಲಿಂಗ್‌ನಲ್ಲಿ ಬೋಲ್ಡ್ ಆಗುವ ಮೂಲಕ ಇನ್ನಿಂಗ್ಸ್‌ ಕೊನೆಗೊಳಿಸಿದರು. ಶ್ರೀಲಂಕಾ ತನ್ನ 10 ವಿಕೆಟ್ ಸಹ ಕಳೆದುಕೊಂಡಿತು.

ತಂಡದ ಸ್ಕೋರ್ ಹೆಚ್ಚಿಸಿದ್ದ ಒಶಾದ ಫರ್ನಾಂಡೊ ಮತ್ತು ಚಾಂಡಿಮಲ್

70 ಎಸೆತಗಳಲ್ಲಿ 50 ರನ್ ಕಲೆಹಾಕಿದ ಶ್ರೀಲಂಕಾ ಓಪನರ್ ಒಶಾದ ಫರ್ನಾಂಡೊ ಸಿಕ್ಸರ್ ಸಿಡಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾದ್ರೆ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಏಂಜೆಲೊ ಮ್ಯಾಥ್ಯೂಸ್ 42ರನ್ ಕೊಡುಗೆ ನೀಡಿದ್ರು. ಇದಾದ ಬಳಿಕ ತನ್ನ ಅದ್ಭುತ ಫಾರ್ಮ್ ಮುಂದುವರಿಸಿರುವ ದಿನೇಶ್ ಚಾಂಡಿಮಲ್ 80ರನ್‌ಗಳ ಕೊಡುಗೆ ನೀಡಿದ್ದಾರೆ.

137 ಎಸೆತಗಳನ್ನ ಎದುರಿಸಿದ ದಿನೇಶ್ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ 80 ರನ್ ಕಲೆಹಾಕಿ ಮೊಹಮ್ಮದ್ ನವಾಜ್‌ಗೆ ವಿಕೆಟ್ ಒಪ್ಪಿಸಿದ್ರು.

ಅತಿ ಹೆಚ್ಚು ಬಾರಿ 90+ ರನ್ ಕಲೆಹಾಕಿ ಶತಕ ಕೈತಪ್ಪಿಸಿಕೊಂಡಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ

ಮೊದಲ ಓವರ್‌ನಲ್ಲೇ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಔಟ್‌

ಗಾಲೆ ಮೈದಾನದಲ್ಲೇ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 342ರನ್ ಗುರಿ ಬೆನ್ನತ್ತುವಲ್ಲಿ ಪಾಕ್ ಪರ ಗೋಡೆಯಂತೆ ನಿಂತು ತಂಡವನ್ನ ಗೆಲುವಿನ ದಡ ತಲುಪಿಸಿದ್ದ ಅಬ್ದುಲ್ಲಾ ಶಫೀಕ್ ಶೂನ್ಯಕ್ಕೆ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಆಘಾತ ಉಂಟುಮಾಡಿದೆ. ಪಾಕಿಸ್ತಾನ ಮೊದಲ ಓವರ್‌ನಲ್ಲೇ ಅಬ್ದುಲ್ಲಾ ವಿಕೆಟ್ ಕಳೆದುಕೊಂಡಿರುವುದು ಹಿನ್ನಡೆಯಾಗಿದೆ.

ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ದುಲ್ಲಾ ಶಫೀಕ್ ಅಜೇಯ 160 ರನ್ ಕಲೆಹಾಕಿ ತಂಡದ ಪರ ಹೀರೋ ಆಗಿ ಮಿಂಚಿದ್ದರು. ಅಲ್ಲದೆ ಕೊನೆಯವರೆಗೆ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್: ಗೆಳತಿ ಎಮ್ಮಾ ಮೆಕ್ಕಾರ್ಟಿ ಜೊತೆಗೆ ವಿವಾಹ

Virat Kohli Instagramನಲ್ಲೇ ಇಷ್ಟೊಂದು ಹಣ ದುಡಿಯುತ್ತಾರಾ ? |*Cricket | OneIndia Kannada
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ

ಬೆಂಚ್: ಲಕ್ಷಿತಾ ಮಾನಸಿಂಘೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್‌), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ

ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್

Story first published: Monday, July 25, 2022, 12:32 [IST]
Other articles published on Jul 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+