ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್: ಗೆಳತಿ ಎಮ್ಮಾ ಮೆಕ್ಕಾರ್ಟಿ ಜೊತೆಗೆ ವಿವಾಹ

Australian spinner Nathan Lyon Ties The Knot With fiancee Emma McCarthy on Sunday

ಆಸ್ಟ್ರೇಲಿಯಾದ ಅನುಭವಿ ಕ್ರಿಕೆಟಿಗ ನಾಥನ್ ಲಿಯಾನ್ ಭಾನುವಾರ ತಮ್ಮ ದೀರ್ಘ ಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಮ್ಮಾ ಮಕ್ಕಾರ್ಟಿ ಜೊತೆಗೆ ನಾಥನ್ ಲಿಯಾನ್ ಜುಲೈ 4 ಭಾನುವಾರದಂದು ವಿವಾಹವಾಗಿದ್ದಾರೆ. ತಮ್ಮ ಆಪ್ತರ ಸಮ್ಮುಖದಲ್ಲಿ ಈ ಜೋಡಿ ನವ ಜೀವನವನ್ನು ಆರಂಭಿಸಿದ್ದು ಇದರ ಕೆಲ ಫೋಟೋಗಳನ್ನು ನಾಥನ್ ಲಿಯಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಅರ್ಧಾಂಗಿ ಜೊತೆಗೆ ಕೈ ಹಿಡಿದುಕೊಂಡು ರಮಣೀಯ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ನಾಥನ್ ಲಿಯಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಆಸಿಸ್ ಸ್ಪಿನ್ನರ್ ನಾಥನ್ ಲಿಯಾನ್ ಮಿಸ್ಟರ್ & ಮಿಸಸ್ ಎಂದು ಬರೆದುಕೊಂಡಿದ್ದಾರೆ.

IND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತIND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

2017ರಲ್ಲಿ ತಮ್ಮ ಮೊದಲ ಪತ್ನಿ ಮೆಲ್ ವೇರಿಂಗ್ ಅವರೊಂದಿಗಿನ ವಿವಾಹ ಮುರಿದು ಬಿದ್ದ ಬಳಿಕ ಅದೇ ವರ್ಷ ನಾಥನ್ ಲಿಯಾನ್ ಎಮ್ಮಾ ಮೆಕ್ಕಾರ್ಟಿ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಇನ್ನು ಈ ಜೋಡಿ 2021ರಲ್ಲಿ ನಿಶ್ಚಿತಾರ್ಥವಾನ್ನು ಮಾಡಿಕೊಂಡಿದ್ದರು ಎನ್ನಲಾಗಿದ್ದು ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಇದೀಗ ಈ ಜೋಡಿ ನವ ಜೀವನವನ್ನು ಆರಂಭಿಸಿದ್ದಾರೆ. ಎಮ್ಮಾ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಯಶಸ್ವಿಯಾಗಿದ್ದಾರೆ.

ಲಂಕಾ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಲಿಯಾನ್: ಇನ್ನು ಶ್ರೀಲಂಕಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಲಂಕಾ ನೆಲದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಸ್ಪಿನ್‌ಗೆ ಸಹಕಾರಿಯಾದ ಪಿಚ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಲಿಯಾನ್ ಮೂರು ಇನ್ನಿಂಗ್ಸ್‌ಗಳಲ್ಲಿ 11 ವಿಕೆಟ್ ಪಡೆದುಕೊಂಡಿದ್ದರು. ಇದರಲ್ಲಿ ಮೊದಲ ಪಂದ್ಯದ ಮೊದಲ ಇನ್ನಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಕುಡ ಸೇರಿದೆ.

ಹೆಚ್ಚು ವಿಕೆಟ್‌ ಟೇಲರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ ಲಿಯಾನ್: ಇನ್ನು ಟೆಸ್ಟ್ ಸ್ಪೆಶಲಿಸ್ಟ್ ಎನಿಸಿಕೊಂಡಿರುವ ನಾಥನ್ ಲಿಯಾನ್ ಟೆಸ್ಟ್ ಮಾದರಿಯಲ್ಲ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಇತ್ತೀಚೆಗಷ್ಟೇ 10ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ದಿಗ್ಗಜ ಆಟಗಾರ ಕಪಿಲ್ ದೇವ್ ಅವರನ್ನು ಲಿಯಾನ್ ಹಿಂದಿಕ್ಕುವ ಮೂಲಕ 10ನೇ ಸ್ಥಾನ ಪಡೆದುಕೊಂಡಿದ್ದಾರೆ. 110 ಟೆಸ್ಟ್ ಪಂದ್ಯಗಳ್ನು ಆಡಿರುವ ಲಿಯಾನ್ 438 ವಿಕೆಟ್ ಸಂಪಾದಿಸಿದ್ದಾರೆ. ಇದರಲ್ಲಿ 20 ಐದು ವಿಕೆಟ್‌ಗಳ ಗೊಂಚಲು ಇದ್ದರೆ 10 ಹತ್ತು ವಿಕೆಟ್‌ಗಳ ಗೊಂಚಲು ಇದೆ.

2011ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ಈ ಮೂವರು ಇನ್ನೂ ಸಹ ನಿವೃತ್ತಿ ತೆಗೆದುಕೊಂಡಿಲ್ಲ!2011ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ಈ ಮೂವರು ಇನ್ನೂ ಸಹ ನಿವೃತ್ತಿ ತೆಗೆದುಕೊಂಡಿಲ್ಲ!

ಆಸಿಸ್ ನೆಲದ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತನ್ನ ಇತಿಹಾಸದಲ್ಲಿ ಅತ್ಯಂತ ಯಶಸ್ಸು ಸಾಧಿಸಿದ ಬೌಲರ್‌ಗಳ ಪಟ್ಟಿಯಲ್ಲಿ ನಾಥನ್ ಲಿಯಾನ್ ಮೂರನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಗಳಿಕೆಯ ಪ್ರಕಾರ ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಲಿಯಾನ್ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಇದ್ದು ಎರಡನೇ ಸ್ಥಾನದಲ್ಲಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಇದ್ದಾರೆ.

35 ಎಸೆತ,3 ಫೋರ್,5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟ ಹೇಗಿತ್ತು ನೋಡಿ | *Cricket | OneIndia Kanndaa

ಮುಂದಿನ ದೊಡ್ಡ ಸರಣಿ ಭಾರತದ ವಿರುದ್ಧ: ಇನ್ನು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರ ಮುಂದಿನ ಗುರಿ ಭಾರತ ಪ್ರವಾಸವಾಗಿದೆ. ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿಲಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ತವರಿನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡ ಕಳೆದ ಮೂರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸೋಲು ಅನುಭವಿಸಿದ್ದು ಇದರಲ್ಲಿ ಎರಡು ಬಾರಿ ತನ್ನ ನೆಲದಲ್ಲಿಯೇ ಸೋಲು ಕಂಡು ಮುಖಭಂಗ ಅನುಭವಿಸಿದೆ.

Story first published: Monday, July 25, 2022, 14:44 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X