Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL vs PAK 2nd Test: ಶ್ರೀಲಂಕಾ ಮೊದಲು ಬ್ಯಾಟಿಂಗ್‌, 100ನೇ ಪಂದ್ಯವಾಡುತ್ತಿರುವ ಮ್ಯಾಥ್ಯೂಸ್‌ LIVE SCORE

Srilanka

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ಲಂಕಾ ಉತ್ತಮ ಆರಂಭ ಪಡೆದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನ್ನ ಅನುಭವಿಸಿದ ಬಳಿಕ ಸರಣಿಯನ್ನು ಡ್ರಾಗೊಳಿಸಲು ಆತಿಥೇಯರು ಗೆಲ್ಲಲೇಬೇಕಾದ ಒತ್ತಡದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡಿದ ತಂಡವನ್ನೇ ದಿಮುತ್ ಕರುಣರತ್ನೆ ಮುಂದುವರಿಸಿದ್ದು, ಪಾಕಿಸ್ತಾನ ತಂಡವು ಹೆಚ್ಚಿನ ಬದಲಾವಣೆ ಮುಂದಾಗಿಲ್ಲ. ಇನ್ನು ಲಂಕಾದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ಗೆ ಇದು 100ನೇ ಟೆಸ್ಟ್ ಪಂದ್ಯವಾಗಿರುವುದು ವಿಶೇಷ. ಮೊದಲ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 53 ರನ್ ಕಲೆಹಾಕಿರುವ ಶ್ರೀಲಂಕಾ ಪರ ದಿಮುತ್ ಕರುಣರತ್ನೆ ಮತ್ತು ಒಶಾದ ಫರ್ನಾಂಡೊ ಉತ್ತಮ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಪಂದ್ಯದ ಲೈವ್‌ ಸ್ಕೋರ್ ಈ ಕೆಳಗಿದೆ.

1
54229
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ

ಬೆಂಚ್: ಲಕ್ಷಿತಾ ಮಾನಸಿಂಘೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ

ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್‌

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್‌), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ

ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಪಾಕಿಸ್ತಾನ

ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಪಾಕಿಸ್ತಾನ

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲೇ ನಡೆದಂತಹ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ನೀಡಿದ್ದ 342ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಪಾಕಿಸ್ತಾನ ದಾಖಲೆಯ ಗೆಲುವು ಪಡೆಯಿತು. ಗಾಲೆ ಮೈದಾನದಲ್ಲಿ ಇದು ಅತಿ ದೊಡ್ಡ ಟೆಸ್ಟ್ ಇನ್ನಿಂಗ್ಸ್‌ ಚೇಸ್ ಆಗಿದ್ದು, ಪ್ರವಾಸಿ ಪಾಕ್ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅಂತಿಮ ದಿನದಾಟದಲ್ಲಿ ಗೆಲುವಿಗೆ 120ರನ್ ಬಾಕಿ ಉಳಿಸಿಕೊಂಡಿದ್ದ ಪಾಕಿಸ್ತಾನ ಕೊನೆಯ ದಿನದಲ್ಲಿ ಒಂದು ವಿಕೆಟ್‌ನಷ್ಟೇ ಕಳೆದುಕೊಂಡು ಗೆಲುವಿನ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಪಾಕ್ ಪರ ಗೋಡೆಯಂತೆ ನಿಂತು ತಂಡವನ್ನ ಗೆಲುವಿನ ದಡ ತಲುಪಿಸಿದ ಅಬ್ದುಲ್ಲಾ ಶಫೀಕ್, ಅಜೇಯ 160 ರನ್ ಕಲೆಹಾಕಿ ತಂಡದ ಪರ ಹೀರೋ ಆಗಿ ಮಿಂಚಿದರು.

Story first published: Sunday, July 24, 2022, 11:37 [IST]
Other articles published on Jul 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+