For Quick Alerts
ALLOW NOTIFICATIONS  
For Daily Alerts
 

IPL 2022: ಹರಾಜಿನ ಬಳಿಕ ಸನ್‌ರೈಸರ್ಸ್ ಹೈದ್ರಾಬಾದ್ ಪೂರ್ಣ ತಂಡ ಹೇಗಿದೆ ಗೊತ್ತಾ?

SRH SQUAD 2022

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್, ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ನಿನ್ನೆಗೆ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಎಲ್ಲಾ ಫ್ರಾಂಚೈಸಿಗಳು ಹೊಸ ತಂಡಗಳನ್ನು ಕಟ್ಟಿಕೊಂಡಿವೆ. ಅದ್ರಲ್ಲೂ ಸದ್ಯ ಫಾರ್ಮ್‌ನಲ್ಲಿರುವ ಆಟಗಾರರಿಗೆ ಬಹುಬೇಡಿಕೆ ಸೃಷ್ಟಿಯಾಗಿದೆ.

ಒಟ್ಟು 590 ಆಟಗಾರರು ಹರಾಜಿನಲ್ಲಿ 204 ಆಟಗಾರರು ಮಾತ್ರ ಸೇಲ್ ಆಗಿ 10 ಫ್ರಾಂಚೈಸಿ ಸೇರಿಕೊಂಡಿದ್ದಾರೆ. ಸುರೇಶ್ ರೈನಾ, ಇಮ್ರಾನ್ ತಾಹಿರ್, ಸೇರಿದಂತೆ ಅನೇಕ ಖ್ಯಾತ ನಾಮ ಆಟಗಾರರು ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ.

ನಿವೃತ್ತಿ ಹೊಂದಿದ ಆಟಗಾರರಿಗೆ ಬೇಡಿಕೆ ಇಳಿದಿದ್ದು, ವಿಜೇತ ಕುದುರೆಗಳನ್ನು ತಂಡಕ್ಕೆ ತೆಗೆದುಕೊಳ್ಳಲಾಗಿದೆ. ಸನ್‌ರೈಸರ್ಸ್ ಹೈದ್ರಾಬಾದ್ ಕೂಡ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಹೊಸ ಆಟಗಾರರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವ್ಯಾ ಮಾರನ್ ಬಹಳ ಎಚ್ಚರಿಕೆಯಿಂದ ಹರಾಜಿನಲ್ಲಿ ಆಟಗಾರರನ್ನ ಸೆಲೆಕ್ಟ್‌ ಮಾಡಿದ್ದಾರೆ. ಯಾವೆಲ್ಲಾ ಆಟಗಾರರು ಹೈದ್ರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಯುವ ಮುನ್ನ ರೀಟೈನ್ ಆದ ಆಟಗಾರರನ್ನ ತಿಳಿದುಕೊಳ್ಳಿ.

ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ SRH

ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ SRH

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಯುವ ಆಟಗಾರ ಅಬ್ದುಲ್ ಸಮದ್ , ಯುವ ವೇಗಿ ಉಮ್ರಾನ್ ಮಲ್ಲಿಕ್‌ರನ್ನ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ರೀಟೈನ್‌ ಮಾಡಿಕೊಂಡಿದೆ. ವಿಲಿಯಮ್ಸನ್‌ಗೆ 14 ಕೋಟಿ, ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲ್ಲಿಕ್‌ಗೆ ತಲಾ 4 ಕೋಟಿ ರೂಪಾಯಿ ನೀಡಿದೆ.

ಕೇನ್ ವಿಲಿಯಮ್ಸನ್ ನಾಯಕತ್ವ

ಕೇನ್ ವಿಲಿಯಮ್ಸನ್ ನಾಯಕತ್ವ

23ರ ಹೊಸ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಅನುಭವಿ ನಾಯಕನಾಗಿರುವ ವಿಲಿಯಮ್ಸನ್‌ನಷ್ಟು ಅನುಭವ ಇರುವ ಕ್ರಿಕೆಟಿಗ ತಂಡದಲ್ಲಿ ಮತ್ತೊಬ್ಬರಿಲ್ಲ. ವೆಸ್ಟ್ ಇಂಡೀಸ್‌ನ ಸ್ಟಾರ್ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರನ್ನು ಉಪನಾಯಕರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಪೂರನ್ ಪ್ರಸ್ತುತ ಏಕದಿನ ಅಂತರಾಷ್ಟ್ರೀಯ ಮಾದರಿಯಲ್ಲಿ ತನ್ನ ದೇಶದ ರಾಷ್ಟ್ರೀಯ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಆ ಅನುಭವದೊಂದಿಗೆ ಕೇನ್ ಉಪನಾಯಕತ್ವದ ಜವಾಬ್ದಾರಿಯನ್ನು ನೀಡಲಿದ್ದಾರೆ.

ಐಪಿಎಲ್ 2022 ಹರಾಜು: ಕನ್ನಡಿಗರಿಗೆ ಸಿಕ್ಕಿದ್ದು ಎಷ್ಟು ಕೋಟಿ? 16 ಆಟಗಾರರು ಯಾವ ತಂಡಗಳ ಪಾಲು?

ಎಂಟು ವಿದೇಶಿ ಆಟಗಾರರು

ಎಂಟು ವಿದೇಶಿ ಆಟಗಾರರು

ಸನ್‌ರೈಸರ್ಸ್ ಫ್ರಾಂಚೈಸಿ ತನ್ನ ತಂಡದಲ್ಲಿ ವಿದೇಶಿ ಕೋಟಾವನ್ನು ಬದಲಿಸಿದೆ. ಇದು ಎಂಟರಲ್ಲಿ ಎಂಟು ಜನರನ್ನು ವಿದೇಶಿ ಆಟಗಾರರನ್ನ ತೆಗೆದುಕೊಂಡಿತು. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು ಈಗಾಗಲೇ ಫ್ರಾಂಚೈಸಿ ಉಳಿಸಿಕೊಂಡಿದೆ. ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಅವರನ್ನು ಬ್ಯಾಟಿಂಗ್ ಕಮ್ ವಿಕೆಟ್ ಕೀಪರ್ ಕೋಟಾದಲ್ಲಿ ಆಯ್ಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಏಡನ್ ಮಾಕ್ರಾಮ್ ಪ್ರಮುಖ ಬ್ಯಾಟ್ಸ್‌ಮನ್ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಅನ್‌ಸೋಲ್ಡ್ ಆದ ಸುರೇಶ್ ರೈನಾ: ಥ್ಯಾಂಕ್ಸ್ ಎಂದು ಕೈ ತೊಳೆದುಕೊಂಡ ಸಿಎಸ್‌ಕೆ

ತಂಡದಲ್ಲಿ ಆಲ್‌ರೌಂಡರ್ಸ್‌ಗಳದ್ದೇ ಮೇಲುಗೈ

ತಂಡದಲ್ಲಿ ಆಲ್‌ರೌಂಡರ್ಸ್‌ಗಳದ್ದೇ ಮೇಲುಗೈ

ವೆಸ್ಟ್ ಇಂಡೀಸ್‌ನ ರೊಮಾರಿಯೊ ಶೆಪರ್ಡ್ ಅವರನ್ನು ಆಲ್‌ರೌಂಡರ್‌ಗಳ ಕೋಟಾಕ್ಕೆ ಸೇರಿಸಲಾಗಿದೆ. ಇವರಿಗಾಗಿ ಸನ್ ರೈಸರ್ಸ್ 7 ಕೋಟಿ 74 ಲಕ್ಷ ರೂ. ಖರ್ಚು ಮಾಡಿದೆ. ಇದೇ ಕೋಟಾದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಮಾರ್ಕೊ ಜೆನ್ಸನ್ ಅವರನ್ನು 4 ಕೋಟಿ 20 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಸೇನ್ ಅಬಾಟ್, ಅಫ್ಘಾನಿಸ್ತಾನದ ಕ್ರಿಕೆಟಿಗ ಫಜಲ್ ಹಕ್ ಫಾರೂಕಿ ಅವರನ್ನು ಬೌಲರ್ ಆಗಿ ಆಯ್ಕೆ ಮಾಡಿದ್ದಾರೆ.

ಪ್ರಮುಖ ಬ್ಯಾಟ್ಸ್‌ಮನ್‌ಗಳು

ಪ್ರಮುಖ ಬ್ಯಾಟ್ಸ್‌ಮನ್‌ಗಳು

ಬ್ಯಾಟಿಂಗ್ ಕೋಟಾದಲ್ಲಿ ಕೇನ್ ವಿಲಿಯಮ್ಸನ್, ಪ್ರಿಯಂಗಾರ್ಗ್, ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಏಡೆನ್ ಮಾರ್ಕ್ರಾಮ್, ವಿಷ್ಣು ವಿನೋದ್, ರಾಹುಲ್ ತ್ರಿಪಾಠಿ ಮತ್ತು ಆರ್ ಸಮರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ. ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಪರ್ಡ್, ಅಭಿಷೇಕ್ ಶರ್ಮಾ, ಶಶಾಂಕ್ ಸಿಂಗ್ ಮತ್ತು ಮಾರ್ಕೊ ಜೆನ್ಸನ್ ಆಲ್‌ರೌಂಡರ್‌ಗಳಾಗಿ ಆಯ್ಕೆಯಾಗಿದ್ದಾರೆ.

ಐಪಿಎಲ್ 2022: ಹರಾಜಿನ ನಂತರ ಹೆಚ್ಚು ಕನ್ನಡಿಗರನ್ನು ಹೊಂದಿರುವ ಬಲಿಷ್ಠ ರಾಜಸ್ಥಾನ್ ತಂಡ ಹೀಗಿದೆ

ಬೌಲರ್‌ಗಳ ಸಂಖ್ಯೆ ಹೆಚ್ಚಿದೆ

ಬೌಲರ್‌ಗಳ ಸಂಖ್ಯೆ ಹೆಚ್ಚಿದೆ

ಆಲ್ ರೌಂಡರ್ ಗಳನ್ನು ಹೊರತುಪಡಿಸಿದರೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ಯಾಟ್ಸ್ ಮನ್ ಗಳ ಸಂಖ್ಯೆಗಿಂತ ಬೌಲರ್ ಗಳ ಸಂಖ್ಯೆಯೇ ಹೆಚ್ಚಿದೆ. ಎಂಟು ಬ್ಯಾಟ್ಸ್‌ಮನ್‌ಗಳು ಮತ್ತು ಒಂಬತ್ತು ಬೌಲರ್‌ಗಳಿದ್ದಾರೆ.

ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಶ್ರೇಯಸ್ ಗೋಪಾಲ್, ಟಿ ನಟರಾಜನ್, ಜಗದೀಶ ಸುಚಿತ್, ಸೌರಭ್ ದುಬೆ, ಕಾರ್ತಿಕ್ ತ್ಯಾಗಿ, ಫಜಲ್ ಹಕ್ ಫಾರೂಕಿ ಬೌಲರ್‌ಗಳಾಗಿದ್ದಾರೆ. ಇದು ಕೇನ್ ವಿಲಿಯಮ್ಸನ್ ತಂಡದ ಬೌಲಿಂಗ್ ಬಲ ಹೆಚ್ಚಿಸಿದೆ. ಆದ್ರೆ ಸೀಮಿತ ಬ್ಯಾಟಿಂಗ್ ಆಯ್ಕೆ ಇರುವುದರಿಂದ ವಿಲಿಯಮ್ಸನ್ ಪಡೆಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.

ಸನ್‌ರೈಸರ್ಸ್ ಹೈದ್ರಾಬಾದ್ ಸ್ಕ್ವಾಡ್ ಕುರಿತು ಇನ್ನಷ್ಟು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: ತಂಡವನ್ನ ಸೆಲೆಕ್ಟ್‌ ಮಾಡಿದ ಬಳಿಕ ಹೈದ್ರಾಬಾದ್ ತಂಡವನ್ನು ಕ್ಲಿಕ್ ಮಾಡಿದರೆ ನಿಮಗೆ ಸಂಪೂರ್ಣ ಆಟಗಾರರ ಪಟ್ಟಿ ಜೊತೆಗೆ ಅವರಿಗೆ ದೊರೆತ ಮೊತ್ತವನ್ನ ಕಾಣಬಹುದು.

https://kannada.mykhel.com/ipl-auction-2022/#team

IPL Auction 2022 : Royal Challengers Bangalore Full Squad | Oneindia Kannada
ಅನುಭವಿ ಕೋಚ್‌ ಜೊತೆಗೆ ಸಿಬ್ಬಂದಿಗಳನ್ನ ಹೊಂದಿರುವ ಎಸ್‌ಆರ್‌ಎಚ್‌

ಅನುಭವಿ ಕೋಚ್‌ ಜೊತೆಗೆ ಸಿಬ್ಬಂದಿಗಳನ್ನ ಹೊಂದಿರುವ ಎಸ್‌ಆರ್‌ಎಚ್‌

ಇನ್ನು ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಎಸ್‌ಆರ್‌ಎಚ್ ಹೊಸ ಸಿಬ್ಬಂದಿಗಳ ಜೊತೆಗೆ ಈ ಬಾರಿ ಐಪಿಎಲ್ ಸೀಸನ್‌ ಪ್ರವೇಶಿಸಿದೆ.

ಬ್ರಿಯಾನ್ ಲಾರಾ : ಬ್ಯಾಟಿಂಗ್ ಕೋಚ್
ಟಾಮ್ ಮೂಡಿ - ಮುಖ್ಯ ಕೋಚ್
ಸೈಮನ್ ಕ್ಯಾಟಿಚ್ - ಸಹಾಯಕ ಕೋಚ್
ಮುರಳೀಧರನ್ - ಸ್ಪಿನ್ ಬೌಲಿಂಗ್ ಕೋಚ್
ಡೇಲ್ ಸ್ಟೇಯ್ನ್ - ಪೇಸ್ ಬೌಲಿಂಗ್ ಕೋಚ್
ಹೇಮಂಗ್ ಬದಾನಿ - ಫೀಲ್ಡಿಂಗ್ ಕೋಚ್ ಮತ್ತು ಸ್ಕೌಟ್

Story first published: Monday, February 14, 2022, 17:46 [IST]
Other articles published on Feb 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+