ತನ್ನ ಡೇಂಜರಸ್ ಸ್ಕೂಪ್ ಶಾಟ್ ಹಿಂದಿನ ರಹಸ್ಯ ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಂತಿಮ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 71ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎದುರಾಳಿಯನ್ನ ಬೆಚ್ಚಿ ಬೀಳಿಸುವಂತಹ ಬ್ಯಾಟಿಂಗ್ ಮಾಡಿದ್ದಾರೆ,
ತನ್ನ ವಿಭಿನ್ನ ರೀತಿಯ ಶಾಟ್‌ಗಳ ಮೂಲಕ ಎದುರಾಳಿಯ ದಿಕ್ಕೆಡಿಸುವ, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ಸೂರ್ಯಕುಮಾರ್ ಯಾದವ್ ತನ್ನ ಡೇಂಜರಸ್ ಸ್ಕೂಪ್ ಶಾಟ್ ಕುರಿತಾಗಿ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಅಜೇಯ 61 ರನ್ ಚಚ್ಚಿದ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ವಿರುದ್ಧ ಅತ್ಯಮೋಘ ಆಟವನ್ನು ಪ್ರದರ್ಶಿಸಿದರು. ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 26 ರನ್‌ಗಳಿಸಿ ನಿರ್ಗಮಿಸಿದ ಬಳಿಕ ಕ್ರೀಸ್‌ಗಿಳಿದ ಸೂರ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಜಿಂಬಾಬ್ವೆ ಬೌಲರ್‌ಗಳನ್ನ ಧೂಳೀಪಟ ಮಾಡಿದರು.
25 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದ ಸೂರ್ಯಕುಮರ್ ಯಾದವ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು. 244.00 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಮಿಂಚಿನ ಆಟವಾಡುವ ಮೂಲಕ ಟೀಂ ಇಂಡಿಯಾ ಸ್ಕೋರ್ ಅನ್ನು 180ರ ಗಡಿದಾಟಿಸಿದ್ರು.
ಕೆ.ಎಲ್ ಅರ್ಧಶತಕ ದಾಖಲಿಸಿ ಔಟಾದ ಬಳಿಕ ಸೂರ್ಯಕುಮಾರ್‌ಗೆ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಸಾಥ್ ನೀಡಲಿಲ್ಲ. ಆದ್ರೂ ಸೂರ್ಯ ತನ್ನ ಸಿಡಿಲಬ್ಬರದ ಆಟವನ್ನು ಮುಂದುವರಿಸಿದರ ಪರಿಣಾಮ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಈ ಸವಾಲಿನ ಗುರಿ ಬೆನ್ನತ್ತಿದ ಜಿಂಬಾಬ್ವೆ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದ್ದಲ್ಲದೆ ಕೇವಲ 115 ರನ್‌ಗಳಿಗೆ ಸರ್ವಪತನಗೊಂಡಿತು.

ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟುವ ಭಾರತ ಮಿಸ್ಟರ್ 360
ಹೌದು, ಸದ್ಯ ಟೀಂ ಇಂಡಿಯಾದ ಮಿಸ್ಟರ್ 360 ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ವೇಗದ ಬಾಲ್ ಆಗಿರಲಿ, ಔಟ್‌ಸೈಡ್ ಆಫ್ ಅಥವಾ ಶಾರ್ಟ್ ಬಾಲ್ ಹಾಕಿದರೂ ಆತನಿಗೆ ಎಲ್ಲಿಗೆ ಚೆಂಡನ್ನು ಎಸೆದರೂ ತಲೆಕೆಡಿಸಿಕೊಳ್ಳುವುದಿಲ್ಲ, ಚೆಂಡು ಬೌಂಡರಿ ಗೆರೆ ದಾಟಿಸುವ ಸಾಮರ್ಥ್ಯ ಹೊಂದಿದ್ದಾರೆ.
ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ತನ್ನ ಸ್ಕೂಪ್ ಶಾಟ್ ಮೂಲಕವೇ ಎದುರಾಳಿ ಬೌಲರ್‌ಗಳನ್ನ ದಂಡಿಸಿದ ಸೂರ್ಯಕುಮಾರ್ ಯಾದವ್, ಇದೀಗ ಅದ್ರ ಹಿಂದಿರುವ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.
ಪ್ರಸ್ತುತ ABD ರೀತಿಯಲ್ಲಿ ಆಡುತ್ತಿರುವ ಏಕೈಕ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್: ಕೊಬಸ್ ಒಲಿವರ್

ರಬ್ಬಲ್ ಬಾಲ್‌ನಲ್ಲಿ ಅಭ್ಯಾಸ ಮಾಡಿರುವ ಸೂರ್ಯಕುಮಾರ್ ಯಾದವ್
''ನಾನು ಕೆಲವೊಂದು ಸ್ಟ್ರೋಕ್‌ಗಳನ್ನು ಹೆಚ್ಚು ರಬ್ಬರ್ ಬಾಲ್‌ನಲ್ಲಿ ಅಭ್ಯಾಸ ಮಾಡಿದ್ದೇನೆ. ಬೌಲರ್ ಆ ಸಂದರ್ಭದಲ್ಲಿ ಯಾವ ರೀತಿಯ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಮಟ್ಟಿಗೆ ಪೂರ್ವಭಾವಿ ನಿರ್ಧರಿಸಿದ ಶಾಟ್ ಆಗಿರುತ್ತದೆ. ನಮ್ಮ ಹಿಂಬಂದಿಯಲ್ಲಿ ಬೌಂಡರಿ ಎಷ್ಟು ದೂರವಿದೆ ಎಂದು ಅರಿತಿರಬೇಕು. ನಾನು ಅಲ್ಲಿ ನಿಂತಾಗ ಕೇವಲ 60-65 ಮೀಟರ್ ದೂರದಲ್ಲಿದೆ ಎಂದು ಭಾವಿಸುತ್ತೇನೆ ಮತ್ತು ಚೆಂಡಿನ ವೇಗಕ್ಕೆ ಸರಿಯಾಗಿ ಟೈಮಿಂಗ್ ಮಾಡಿದ್ರೆ ಸಾಕು, ಸ್ವೀಪ್ ಶಾಟ್, ಸ್ಕೂಪ್ ಮೂಲಕ ಚೆಂಡನ್ನು ಬೌಂಡರಿ ಗೆರೆ ದಾಟಿಸುವೆ'' ಎಂದು ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿದ್ದು, ಗುರುವಾರ (ನ.10) ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ ಟಿಕೆಟ್ ಪಡೆಯಲು ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications