T20 ವಿಶ್ವಕಪ್: ಮಾರ್ಕಸ್ ಸ್ಟೋಯ್ನಿಸ್ ಅಬ್ಬರಕ್ಕೆ ಶ್ರೀಲಂಕಾ ತತ್ತರ, ಗೆಲುವಿನ ಖಾತೆ ತೆರೆದ ಆಸ್ಟ್ರೇಲಿಯಾ

ಪರ್ತ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಅಬ್ಬರದ ಆಟಕ್ಕೆ ಶ್ರೀಲಂಕಾ ತತ್ತರಿಸಿ ಹೋಗಿದ್ದು, ಹಾಲಿ ಚಾಂಪಿಯನ್ ತಂಡವು 7 ವಿಕೆಟ್‌ಗಳ ಗೆಲುವಿನ ಜೊತೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಕೌಂಟ್ ತೆರೆದಿದೆ.
ಶ್ರೀಲಂಕಾ ನೀಡಿದ್ದ 158ರನ್ ಟಾರ್ಗೆಟ್ ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿದೆ. ಆಸ್ಟ್ರೇಲಿಯಾ ಪರ ಆರಂಭದಲ್ಲೇ ಡೇವಿಡ್ ವಾರ್ನರ್ 11, ಮಿಚೆಲ್ ಮಾರ್ಷ್ 18 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನ ಗೆಲುವಿನ ದಡ ತಲುಪಿಸುವ ವಿಶ್ವಾಸ ಮೂಡಿಸಿದ್ರು. ಆದ್ರೆ ಮ್ಯಾಕ್ಸಿ 12 ಎಸೆತಗಳಲ್ಲಿ 2 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 23ರನ್‌ಗೆ ಔಟಾದರು. ಇದಾದ ಬಳಿಕ ನಡೆದಿದ್ದು ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ.

17 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಮಾರ್ಕಸ್ ಸ್ಟೋಯ್ನಿಸ್
ಆಸ್ಟ್ರೇಲಿಯಾ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಸುಲಭವಾಗಿ ಎದುರಾಳಿ ಲಂಕಾದಿಂದ ಗೆಲುವನ್ನು ಕಸಿದುಕೊಂಡರು. 17 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಮಾರ್ಕಸ್ ಸ್ಟೋಯ್ನಿಸ್ ಆಸಿಸ್ ಪರ ವೇಗದ ಅರ್ಧಶತಕದ ದಾಖಲೆ ಬರೆದರು. ಜೊತೆಗೆ ಟಿ20 ವಿಶ್ವಕಪ್‌ನಲ್ಲಿ ಇದು ಎರಡನೇ ವೇಗದ ಅರ್ಧಶತಕವಾಗಿದೆ.
18 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದ ಮಾರ್ಕಸ್ ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 21 ಎಸೆತಗಳು ಬಾಕಿ ಇರುವಂತೆಯೇ 16.3 ಓವರ್‌ಗಳಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಸ್ಟೋಯ್ನಿಸ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಶ್ರೀಲಂಕಾದ ಪರ ಅತ್ಯಂತ ದುಬಾರಿಯೆನಿಸಿದ ವಹಿಂದು ಹಸರಂಗ 3 ಓವರ್‌ಗಳಲ್ಲಿ ವಿಕೆಟ್ ಪಡೆಯದೇ 53ರನ್ ನೀಡಿದರು. ಮಹೀಶ್ ತೀಕ್ಷಣ, ಚಮಿಕಾ ಕರುಣರತ್ನೆ, ಧನಂಜಯ ಡಿಸಿಲ್ವಾ ತಲಾ 1 ವಿಕೆಟ್ ಪಡೆದರು.
ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?

ನಿಧಾನಗತಿಯ ಆರಂಭ, 157 ರನ್ ಕಲೆಹಾಕಿದ ಶ್ರೀಲಂಕಾ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ಆರಂಭ ಉತ್ತಮವಾಗಿರಲಿಲ್ಲ. ಓಪನರ್ ಕುಸಾಲ್ ಮೆಂಡೀಸ್ ಕೇವಲ 5ರನ್‌ಗೆ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಘಾತದಿಂದಾಗಿ ಶ್ರೀಲಂಕಾ ಪವರ್‌ಪ್ಲೇ ಓವರ್‌ಗಳಲ್ಲಿ ಸ್ಫೋಟಕ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಪವರ್ ಪ್ಲೇ ಬಳಿಕ ಪಥುಮಾ ನಿಸ್ಸಾಂಕ ಹಾಗೂ ಧನಂಜಯ ಡಿಸಿಲ್ವಾ ರನ್‌ಗೆ ಕೊಂಚ ವೇಗ ನೀಡಿದರು. ಪರಿಣಾಮ ಶ್ರೀಲಂಕಾ 10 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 63ರನ್ ಕಲೆಹಾಕಿತು. ಮುಂದಿನ 10 ಓವರ್‌ಗಳಲ್ಲಿ ಹೆಚ್ಚು ರನ್ ಕಲೆಹಾಕುವ ಲಂಕಾದ ಯೋಜನೆಗೆ ಆಸಿಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಉತ್ತಮವಾಗಿ ಆಡ್ತಿದ್ದ ಧನಂಜಯ ಡಿ ಸಿಲ್ವಾ 26ರನ್‌ಗಳಿಸಿ ಆಸ್ಟರ್ ಅಗರ್‌ಗೆ ವಿಕೆಟ್ ಒಪ್ಪಿಸಿದ್ರು.
ತಂಡಕ್ಕೆ ಆಧಾರವಾಗಿದ್ದ ಪಥುಮ್ ನಿಸ್ಸಾಂಕಾ 40 ರನ್‌ಗಳಿಸಿದ್ದಾಗ ರನೌಟ್‌ಗೆ ಬಲಿಯಾದರು. ಆದ್ರೆ ಕೊನೆಯ ಐದು ಓವರ್‌ಗಳಲ್ಲಿ ಲಂಕಾದ ಸ್ಕೋರನ್ನು 150ಗಡಿ ದಾಟಿಸಿದ ಕೀರ್ತಿ ಚರಿತ್ ಅಸಲಂಕಾಗೆ ಸಲ್ಲುತ್ತದೆ. 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಅಜೇಯ 38 ರನ್ ಕಲೆಹಾಕಿದರು. ಕೊನೆಯಲ್ಲಿ ಕರುಣರತ್ನೆ ಅಜೇಯ 14ರನ್ ಸಿಡಿಸಿದ್ರು.
ಅಂತಿಮವಾಗಿ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿದ್ದು, ಆಸ್ಟ್ರೇಲಿಯಾ ಗೆಲುವಿಗೆ 158 ರನ್ ನೀಡಿತಾದ್ರೂ, ಡಿಫೆಂಡ್ ಮಾಡಿಕೊಳ್ಳಲಾಗದೆ ಸೋಲನ್ನಪ್ಪಿದೆ.
ಆಸ್ಟ್ರೇಲಿಯಾ ಪರ ಹೇಜಲ್‌ವುಡ್, ಪ್ಯಾಟ್ ಕಮಿನ್ಸ್, ಸ್ಟಾರ್ಕ್, ಅಗರ್, ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.
India Vs Pakistan: ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಕೊಹ್ಲಿಗೆ ಸ್ಪೂರ್ತಿ ನೀಡಿದ್ದು ಈ ಆಟಗಾರ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೋ, ಲಹಿರು ಕುಮಾರ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications