
ಟಾಪ್ ಆರ್ಡರ್ ವೈಫಲ್ಯವೇ ಪ್ರಮುಖ ಕಾರಣ
ಆಸಿಸ್ ತಂಡದ ಪರ ಟಾಪ್ ಆರ್ಡರ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಕೂಡ ಕೈ ಕೊಟ್ಟಿದ್ದು ಆಸಿಸ್ ಸೋಲಿಗೆ ಪ್ರಮುಖ ಕಾರಣವಾಯಿತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿಕೆಟ್ ಪಡೆಯುವಲ್ಲಿ ವಿಫಲಗೊಂಡಿತು.
ಆಸ್ಟ್ರೇಲಿಯಾದ ಸೋಲಿಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ತಂಡದ ಸೋಲಿಗೆ ಟಾಪ್ ಆರ್ಡರ್ ವೈಫಲ್ಯವೇ ಪ್ರಮುಖ ಎಂದಿದ್ದಾರೆ.
ಹಾಲಿ ಚಾಂಪಿಯನ್ನರಿಗೆ ಮೊದಲ ಪಂದ್ಯದಲ್ಲಿಯೇ ಮುಖಭಂಗ: ಕಿವೀಸ್ ವಿರುದ್ಧ ಹೀನಾಯವಾಗಿ ಸೋತ ಆಸ್ಟ್ರೇಲಿಯಾ

ಟಾಪ್ ಆರ್ಡರ್ ಬ್ಯಾಟರ್‌ಗಳು ಜವಾಬ್ದಾರಿ ಅರಿತು ಆಡಬೇಕಿದೆ!
'' ನನ್ನ ಪ್ರಕಾರ ಮಧ್ಯಮ ಕ್ರಮಾಂಕವು ಅತ್ಯಂತ ಪ್ರಮುಖವಾಗಿದೆ. ನಾವು ಟಾಪ್ ಆರ್ಡರ್ ಬ್ಯಾಟರ್‌ಗಳು ಕೂಡ ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದ್ದು, ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ. ಇದರಿಂದ ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಸ್ವಾಭಾವಿಕ ಆಟವಾಡಲು ಸಾಧ್ಯವಾಗುತ್ತದೆ'' ಎಂದು ಕ್ರಿಕ್ ಕ್ರ್ಯಾಕರ್ ರಿಪೋಟರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದಲ್ಲದೆ ಆತನ ಬಳಿ ಟಾಪ್ ಆರ್ಡರ್ ವೈಫಲ್ಯದ ಪರಿಣಾಮಗಳ ಕುರಿತು ಕೇಳಿದ ಪ್ರಶ್ನೆಗೆ ಫಿಂಚ್ ಉತ್ತರಿಸಿದ್ದಾರೆ. ನಾವು ಬೇಗನೆ ಔಟಾಗುವ ಮೂಲಕ ನಂತರದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದೆವು ಎಂದು 35 ವರ್ಷದ ಆಸಿಸ್ ನಾಯಕ ಫಿಂಚ್ ಒಪ್ಪಿಕೊಂಡಿದ್ದಾರೆ.
T20 ವಿಶ್ವಕಪ್: ಪರ್ತ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ದಾಳಿಗೆ ಪತರುಗುಟ್ಟಿದ ಅಫ್ಘಾನಿಸ್ತಾನ, 112ರನ್‌ಗಳಿಗೆ ಆಲೌಟ್!

ನ್ಯೂಜಿಲೆಂಡ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಡೆವೊನ್ ಕಾನ್ವೆ
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬ್ಯಾಟರ್ ಡೆವೊನ್ ಕಾನ್ವೆ ಕುರಿತು ಮಾತನಾಡದೇ ಇರುವುದು ಉತ್ತಮವಲ್ಲ. ಆಸ್ಟ್ರೇಲಿಯಾ ಬೌಲರ್‌ಗಳನ್ನ ಬೆಂಡೆತ್ತಿದ ಡೆವೊನ್ ಕಾನ್ವೆ ತನ್ನ ಜೊತೆಗಾರ ಫಿನ್ ಅಲೆನ್ ಔಟಾದ ಬಳಿಕ ಅಬ್ಬರದ ಆಟವನ್ನ ಪ್ರದರ್ಶಿಸಿದರು.
58 ಎಸೆತಗಳಲ್ಲಿ ಅಜೇಯ 92 ರನ್ ಕಲೆಹಾಕಿದ ಕಾನ್ವೆ ಕೇವಲ 8ರನ್‌ಗಳ ಅಂತರದಲ್ಲಿ ಶತಕವನ್ನ ಮಿಸ್ ಮಾಡಿಕೊಂಡರು. 158.62ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿದ್ದವು. ಇವರ ಆಟದ ನೆರವಿನಿಂದ ಹಾಗೂ ಫಿನ್ ಅಲೆನ್ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಜೇಮ್ಸ್ ನೀಶಮ್ ಫಿನಿಷಿಂಗ್ ಸಾಮರ್ಥ್ಯದಿಂದಾಗಿ ನ್ಯೂಜಿಲೆಂಡ್ ಸರಿಯಾಗಿ 200 ರನ್ ಗಡಿ ತಲುಪಿತು.
T20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು, 5 ವಿಕೆಟ್ ಪಡೆದು ಮಿಂಚಿದ ಸ್ಯಾಮ್ ಕರನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ನ್ಯೂಜಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಮಾರ್ಟಿನ್ ಗಪ್ಟಿಲ್, ಮೈಕೆಲ್ ಬ್ರೇಸ್ವೆಲ್
ಆಸ್ಟ್ರೇಲಿಯಾ ಆಡುವ ಬಳಗ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಟೀವನ್ ಸ್ಮಿತ್, ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್


Click it and Unblock the Notifications












