
ಪೆವಿಲಿಯನ್ ಪರೇಡ್ ನಡೆಸಿದ ಅಫ್ಘಾನಿಸ್ತಾನ ಬ್ಯಾಟರ್ಸ್
ಪಂದ್ಯದ ಆರಂಭದಿಂದಲೇ ಅಫ್ಘಾನಿಸ್ತಾನದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಮೊದಲಿಗೆ ಮಾರ್ಕ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ 10ರನ್‌ಗಳಿಸಿ ಔಟಾದ ಬಳಿಕ ಅಫ್ಘಾನಿಸ್ತಾನದ ಪೆವಿಲಿಯನ್ ಪರೇಡ್ ಶುರುವಾಯಿತು.
ಆಲ್‌ರೌಂಡರ್ ಬೆನ್‌ಸ್ಟೋಕ್ಸ್ 7ರನ್‌ಗಳಿಸಿದ್ದ ಹಜರತುಲ್ಲಾ ಝಜೈ ವಿಕೆಟ್ ಕಬಳಿಸಿದ್ರು. ಉತ್ತಮವಾಗೇ 32ರನ್‌ಗಳಿಸಿ ಆಡುತ್ತಿದ್ದ ಇಬ್ರಾಹಿಂ ಜರ್ದಾನ್ ಸ್ಯಾಮ್ ಕರನ್‌ನ ಮೊದಲ ವಿಕೆಟ್ ಬಲಿಯಾದ್ರು. ಆನಂತರ ನಡೆದಿದ್ದು ಸ್ಯಾಮ್ ಕರನ್ ಮ್ಯಾಜಿಕ್ ಸ್ಪೆಲ್.
ಅಫ್ಘಾನಿಸ್ತಾ ತಂಡಕ್ಕೆ ಎಲ್ಲಿಯೂ ಚೇತರಿಸಿಕೊಳ್ಳಲು ಇಂಗ್ಲೆಂಡ್ ಅವಕಾಶ ನೀಡಲಿಲ್ಲ. ನಜೀಬುಲ್ಲಾ ಝದ್ರಾನ್ 13, ನಾಯಕ ಮೊಹಮ್ಮದ್ ನಬಿ 3, ಅಜ್ಮತುಲ್ಲಾ ಒಮರ್ಜಾಯ್ 8, ರಶೀದ್ ಖಾನ್ 0, ಮುಜೀಬ್ ಉರ್ ರಹಮಾನ್ 0, ಉಸ್ಮಾನ್ ಘನಿ 30 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾದರು. ಅಂತಿಮ ವಿಕೆಟ್ ಆಗಿ ಫಜಲ್ಹಕ್ ಫಾರೂಕಿ ಶೂನ್ಯಕ್ಕೆ ಔಟಾದರು. ಈ ಮೂಲಕ ಮೂವರು ಆಟಗಾರರು ಖಾತೆ ತೆರೆಯದೇ ಔಟಾದ ಪರಿಣಾಮ ಅಫ್ಘಾನಿಸ್ತಾನ ಇನ್ನೂ 2 ಎಸೆತ ಬಾಕಿ ಇರುವಂತೆಯೇ 112ರನ್‌ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ 113ರನ್ ಸುಲಭ ಗುರಿ ನೀಡಿದೆ.
ಅಬ್ಬಾ..! ಈತ ಡೇಂಜರಸ್ ಬೌಲರ್: ಅಭ್ಯಾಸದ ವೇಳೆಯಲ್ಲಿ ರೋಹಿತ್ ಶರ್ಮಾ ಉದ್ಗಾರ!
10 ರನ್ ನೀಡಿ 5 ವಿಕೆಟ್ ಕಬಳಿಸಿದ ಸ್ಯಾಮ್ ಕರ್ರನ್
ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅದ್ರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬೌಲಿಂಗ್ ಮಾಡಿದ ಸ್ಯಾಮ್ ಕರನ್ ಅಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನಲುಬು ಮುರಿದರು. ಅಂತಿಮ ಓವರ್‌ನಲ್ಲಿ 2 ವಿಕೆಟ್ ಸೇರಿದಂತೆ ಸ್ಯಾಮ್ ಕರನ್ 3.4 ಓವರ್‌ನಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದ ಪರ ಹೀರೋ ಆಗಿ ಮಿಂಚಿದ್ರು.
ಇಂಗ್ಲೆಂಡ್ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಬೆಸ್ಟ್ ಬೌಲಿಂಗ್ ಫಿಗರ್ ಆಗಿದ್ದು, ಇದಕ್ಕೂ ಮುನ್ನ ಆದಿಲ್ ರಶೀದ್ ವೆಸ್ಟ್ ಇಂಡೀಸ್ ವಿರುದ್ಧ 2021ರಲ್ಲಿ ಕೇವಲ 2ರನ್ ನೀಡಿ 4 ವಿಕೆಟ್ ಕಬಳಿಸಿದ್ರು.
ಹಾಲಿ ಚಾಂಪಿಯನ್ನರಿಗೆ ಮೊದಲ ಪಂದ್ಯದಲ್ಲಿಯೇ ಮುಖಭಂಗ: ಕಿವೀಸ್ ವಿರುದ್ಧ ಹೀನಾಯವಾಗಿ ಸೋತ ಆಸ್ಟ್ರೇಲಿಯಾ

ಉಭಯ ತಂಡಗಳ ಪ್ಲೇಯಿಂಗ್ 11
ಇಂಗ್ಲೆಂಡ್ ತಂಡದ ಪ್ಲೇಯಿಂಗ್ 11
ಜಾಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್
ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್ 11
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಉಸ್ಮಾನ್ ಘನಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ
ಬೆಂಚ್: ದರ್ವಿಶ್ ರಸೂಲಿ, ನವೀನ್-ಉಲ್-ಹಕ್, ಕೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ


Click it and Unblock the Notifications












