ಟಿ20 ವಿಶ್ವಕಪ್: ಯುವರಾಜ್ ಸಿಂಗ್ ಬಳಿಕ 2ನೇ ವೇಗದ ಅರ್ಧಶತಕ ದಾಖಲಿಸಿದ ಮಾರ್ಕಸ್ ಸ್ಟೋಯ್ನಿಸ್

ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಮಾರ್ಕಸ್ ಸ್ಟೋಯ್ನಿಸ್ ಬಿರುಗಾಳಿ ಬ್ಯಾಟಿಂಗ್‌ಗೆ ಶ್ರೀಲಂಕಾ ಪತರುಗುಟ್ಟಿದೆ. ಶ್ರೀಲಂಕಾ ನೀಡಿದ್ದ 158 ರನ್ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆದಿದ್ದಲ್ಲದೆ, ಅಭಿಮಾನಿಗಳು ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ಕಣ್ತುಂಬಿಕೊಂಡಿದ್ದಾರೆ.
ಒಂದು ಹಂತದಲ್ಲಿ ಆಸ್ಟ್ರೇಲಿಯಾದ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ, ನಾಯಕ ಆ್ಯರೋನ್ ಫಿಂಚ್ ರನ್‌ಗಳಿಸಲು ಪರದಾಟ ನಡೆಸಿದ್ದಾಗ ಆಸಿಸ್ ತಂಡದ ಪರ ಅಬ್ಬರಿಸಿದ್ದು ಮಾರ್ಕಸ್ ಸ್ಟೋಯ್ನಿಸ್. ಪರ್ತ್‌ನ ದೊಡ್ಡ ಪಿಚ್‌ನಲ್ಲಿ ಮುಗಿಲೆತ್ತರದ ಸಿಕ್ಸರ್ ಬಾರಿಸಿದ ಸ್ಟೋಯ್ನಿಸ್ ತನ್ನ ತೋಳಿನ ಬಲವನ್ನು ಸಾಭೀತುಪಡಿಸಿದ್ರು.
ಆಸ್ಟ್ರೇಲಿಯಾ ಪರ ಆರಂಭದಲ್ಲೇ ಡೇವಿಡ್ ವಾರ್ನರ್ 11, ಮಿಚೆಲ್ ಮಾರ್ಷ್ 18 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನ ಗೆಲುವಿನ ದಡ ತಲುಪಿಸುವ ವಿಶ್ವಾಸ ಮೂಡಿಸಿದ್ರು. ಆದ್ರೆ ಮ್ಯಾಕ್ಸಿ 12 ಎಸೆತಗಳಲ್ಲಿ 2 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 23ರನ್‌ಗೆ ಔಟಾದರು. ಒಂದೆಡೆ ರನ್ ಕಲೆಹಾಕಲು ತಡಬಡಾಯಿಸುತ್ತಿದ್ದ ಆ್ಯರೋನ್ ಫಿಂಚ್ 42 ಎಸೆತಗಳಲ್ಲಿ ಅಜೇಯ 32ರನ್ ಕಲೆಹಾಕಿದ್ದರು. ಈ ವೇಳೆಯಲ್ಲಿ ತಂಡಕ್ಕೆ ಮಿಂಚಿನ ಸಂಚಲನ ಮೂಡಿಸಿದ ಆಸಿಸ್ ಆಲ್‌ರೌಂಡರ್ ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಆಸ್ಟ್ರೇಲಿಯಾ ಪರ ಅತಿ ವೇಗದ ಅರ್ಧಶತಕ ಸಿಡಿಸಿದ ಸ್ಟೋಯ್ನಿಸ್
ಆಸ್ಟ್ರೇಲಿಯಾ ಪರ ಅತಿ ವೇಗದ ಅರ್ಧಶತಕ ಸಿಡಿಸಿದ ಕೀರ್ತಿ ಇದೀಗ ಮಾರ್ಕಸ್ ಸ್ಟೋಯ್ನಿಸ್‌ಗೆ ಸಲ್ಲುತ್ತದೆ. 17 ಎಸೆತಗಳಲ್ಲಿ ಅರ್ಧಶತಕ ಗಡಿದಾಟಿದ ಮಾರ್ಕಸ್ ಸ್ಟೋಯ್ನಿಸ್ ಟಿ20 ವಿಶ್ವಕಪ್‌ನಲ್ಲಿ ಅತಿ ವೇಗದ ಎರಡನೇ ಅರ್ಧಶತಕ ದಾಖಲಿಸಿದ್ರು. ಪಂದ್ಯದ ಕೊನೆಯಲ್ಲಿ 18 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದ ಮಾರ್ಕಸ್ ಸ್ಟೋಯ್ನಿಸ್ ಅಬ್ಬರಕ್ಕೆ ಲಂಕಾ ಮಂಕಾಯಿತು. ಸ್ಟೋಯ್ನಿಸ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?
ಟಿ20 ವಿಶ್ವಕಪ್‌ನಲ್ಲಿ 2ನೇ ಅತಿ ವೇಗದ ಜಂಟಿ ಅರ್ಧಶತಕ ಸಿಡಿಸಿದ ಸ್ಟೋಯ್ನಿಸ್
ಮಾರ್ಕಸ್ ಸ್ಟೋಯ್ನಿಸ್ ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಬಳಿಕ ಎರಡನೇ ಅತಿ ವೇಗದ ಅರ್ಧಶತಕ ಸಿಡಿಸಿದ್ದಾರೆ. ಆದ್ರೆ ಇದಕ್ಕೂ ಮುನ್ನ ನೆದರ್ಲ್ಯಾಂಡ್ಸ್‌ನ ಸ್ಟೀಫನ್ ಮೈಬರ್ಗ್ 2014ರ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ರು. ಅದಾದ ಬಳಿಕ ಸ್ಟೋಯ್ನಿಸ್ ಅಷ್ಟೇ ಎಸೆತದಲ್ಲಿ ಅರ್ಧಶತಕ ಗಡಿದಾಟಿದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪರ ವೇಗವಾಗಿ 50ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
India Vs Pakistan: ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಕೊಹ್ಲಿಗೆ ಸ್ಪೂರ್ತಿ ನೀಡಿದ್ದು ಈ ಆಟಗಾರ

ಟಿ20 ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿ
ಟಿ20 ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರಿನಲ್ಲಿದೆ. 2007ರ ಟಿ20 ವಿಶ್ವಕಪ್‌ನಲ್ಲಿ ಯುವಿ ಇಂಗ್ಲೆಂಡ್ ವಿರುದ್ಧ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ರು. ಇದುವರೆಗೂ ವಿಶ್ವಕಪ್‌ನಲ್ಲಿ ಯುವಿ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಹಾಗಿದ್ರೆ ಟಿ20 ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದವರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಯಾವ ತಂಡದ ವಿರುದ್ಧ ಎಷ್ಟು ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.
ಯುವರಾಜ್ ಸಿಂಗ್ (ಭಾರತ) vs ಇಂಗ್ಲೆಂಡ್ 12 ಎಸೆತ
ಸ್ಟೀಫನ್ ಮೈಬರ್ಗ್ (ನೆದರ್ಲ್ಯಾಂಡ್ಸ್) vs ಐರ್ಲೆಂಡ್ 17 ಎಸೆತ
ಮಾರ್ಕಸ್ ಸ್ಟೋಯ್ನಿಸ್(ಆಸ್ಟ್ರೇಲಿಯಾ) vs ಶ್ರೀಲಂಕಾ 17 ಎಸೆತ
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) vs ಪಾಕಿಸ್ತಾನ 18 ಎಸೆತ
ಕೆ.ಎಲ್ ರಾಹುಲ್ (ಭಾರತ) vs ಸ್ಕಾಟ್ಲೆಂಡ್ 18 ಎಸೆತ
ಶೋಯೆಬ್ ಮಲ್ಲಿಕ್ (ಪಾಕಿಸ್ತಾನ) vs ಸ್ಕಾಟ್ಲೆಂಡ್ 18 ಎಸೆತ
ಮೊಹಮ್ಮದ್ ಅಶ್ರಫುಲ್ (ಬಾಂಗ್ಲಾದೇಶ) vs ವೆಸ್ಟ್ ಇಂಡೀಸ್ 20 ಎಸೆತ
ಯುವರಾಜ್ ಸಿಂಗ್ (ಭಾರತ) vs ಆಸ್ಟ್ರೇಲಿಯಾ 20 ಎಸೆತ
ಮಹೇಲಾ ಜಯವರ್ಧನೆ (ಶ್ರೀಲಂಕಾ) vs ಶ್ರೀಲಂಕಾ 21 ಎಸೆತ
ಎಲ್ಟನ್ ಚಿಗುಂಬುರ (ಜಿಂಬಾಬ್ವೆ) vs ಯುಎಇ 21 ಎಸೆತ
ಕ್ವಿಂಟನ್ ಡಿಕಾಕ್ (ದಕ್ಷಿಣ ಆಫ್ರಿಕಾ) vs ಇಂಗ್ಲೆಂಡ್ 21 ಎಸೆತ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications