T20 ವಿಶ್ವಕಪ್: ಪಾಕ್ ವಿರುದ್ಧ ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ಕೆ

ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವರ್ಸಸ್ ಜಿಂಬಾಬ್ವೆ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಟಾಸ್ ಗೆದ್ದಂತಹ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಪರಿಣಾಮ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲಿದೆ.
ಟಾಸ್ ಸೋತರು ಮೊದಲು ಬೌಲಿಂಗ್ ಮಾಡುವ ಉದ್ದೇಶ ಹೊಂದಿದ್ದ ಬಾಬರ್ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಆಸಿಫ್ ಅಲಿ ಬದಲು ಮೊಹಮ್ಮದ್ ವಾಸಿಂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ತಂಡದಲ್ಲೂ ಒಂದು ಬದಲಾವಣೆಯಾಗಿದ್ದು, ಚಟಾರ ಬದಲು ಬ್ರಾಡ್ ಇವಾನ್ಸ್ ಪ್ಲೇಯಿಂಗ್ ಇಲೆವೆನ್ ಸೇರಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸೋಲನ್ನ ಅನುಭವಿಸಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಗೆಲುವಿನ ಟ್ರ್ಯಾಕ್‌ಗೆ ಮರಳು ಯೋಜನೆಯೊಂದಿಗೆ ಕಣಕ್ಕಿಳಿದಿದೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಪಂದ್ಯವನ್ನ ತಪ್ಪಿಸಿಕೊಂಡಿರುವ ಜಿಂಬಾಬ್ವೆ ಮಳೆಯ ಕಾರಣದಿಂದಾಗಿ ಪಂದ್ಯ ರದ್ದಾದ ಪರಿಣಾಮ ಈಗಾಗಲೇ ಆಡಿರುವ ಪಂದ್ಯದಲ್ಲಿ 1 ಪಾಯಿಂಟ್ ಕಲೆಹಾಕಿದೆ. ಆದ್ರೆ ಪಾಕಿಸ್ತಾನ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ಇನ್ನೂ ಅಕೌಂಟ್ ತೆರೆಯುವ ಅನಿವಾರ್ಯತೆಯಲ್ಲಿದೆ.

ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಹಾರ್ಟ್ ಬ್ರೇಕ್
ಎಂಸಿಜಿ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಹಾರ್ಟ್ ಬ್ರೇಕ್ ಆಗಿದ್ದಂತು ನಿಜ. 160ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವಿಕೆಟ್ ಕಳೆದುಕೊಂಡರೂ ಸಹ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಶಾಕ್ ನೀಡಿತು. ಈ ಮೂಲಕ ಗೆಲ್ಲುವ ಅವಕಾಶವನ್ನ ಕಳೆದುಕೊಂಡ ಪಾಕಿಸ್ತಾನ ಆರಂಭದಲ್ಲೇ ಭಾರೀ ನಿರಾಸೆ ಅನುಭವಿಸಿತು. ಹೀಗಾಗಿ ಸೆಮಿಫೈನಲ್ ದೃಷ್ಟಿಯಲ್ಲಿ ಪಾಕ್ ಪಡೆ ಈ ಪಂದ್ಯವನ್ನ ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಟಿ20 ವಿಶ್ವಕಪ್: ಟೆಂಬಾ ಬವುಮಾ 50 ಹೊಡೆದ್ರೆ ನನ್ನ ಅಕೌಂಟ್ ಡಿಲೀಟ್ ಮಾಡುವೆ! ಸತತ ಕಳಪೆ ಆಟಕ್ಕೆ ಫ್ಯಾನ್ಸ್ ಆಕ್ರೋಶ

ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ
ಬೆಂಚ್: ಖುಶ್ದಿಲ್ ಶಾ, ಫಖರ್ ಜಮಾನ್, ಮೊಹಮ್ಮದ್ ಹಸ್ನೈನ್, ಆಸಿಫ್ ಅಲಿ
ಕೊಹ್ಲಿ ಜೊತೆ ಬ್ಯಾಟಿಂಗ್ ಸುಂದರ ಅನುಭವ: ಅದ್ಭುತ ಜೊತೆಯಾಟದ ಬಳಿಕ ಸೂರ್ಯಕುಮಾರ್ ಮಾತು

ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ಮಿಲ್ಟನ್ ಶುಂಬಾ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಬಾನಿ
ಬೆಂಚ್: ವೆಲ್ಲಿಂಗ್ಟನ್ ಮಸಕಡ್ಜಾ, ಕ್ಲೈವ್ ಮದಂಡೆ, ಟೋನಿ ಮುನ್ಯೊಂಗಾ, ಟೆಂಡೈ ಚತಾರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications