For Quick Alerts
ALLOW NOTIFICATIONS  
For Daily Alerts
 

WI vs Ire : T20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್, ಐರ್ಲೆಂಡ್‌ಗೆ ಭರ್ಜರಿ ಜಯ

Paul Stirling

ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐರ್ಲೆಂಡ್ ಸೂಪರ್ 12 ಹಂತವನ್ನು ತಲುಪಿದ್ದು, ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬಿದ್ದಿದೆ.

ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಗುರಿಯನ್ನ ಐರ್ಲೆಂಡ್ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದು, ಪಾಲ್ ಸ್ಟಿರ್ಲಿಂಗ್ ಅಜೇಯ ಆಟಕ್ಕೆ ವೀಂಡೀಸ್ ಕನಸು ನುಚ್ಚು ನೂರಾಗಿದೆ.

ಪಾಲ್ ಸ್ಟಿರ್ಲಿಂಗ್ ಅಜೇಯ ಅರ್ಧಶತಕ, ಐರ್ಲೆಂಡ್‌ಗೆ ಸುಲಭ ಜಯ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಐರ್ಲೆಂಡ್‌ ಗೆಲುವಿಗೆ 147ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನ ಬೆನತ್ತಿದ ಐರ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿತು. ಸ್ಟಾರ್ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅತ್ಯಂತ ಪ್ರೆಶರ್ ಗೇಮ್‌ನಲ್ಲಿ ಭರ್ಜರಿ ಆಟವಾಡುವ ಮೂಲಕ ತಂಡದ ಗೆಲುವಿಗೆ ನಾಂದಿ ಹಾಡಿದರು.

ತಂಡದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಭರ್ಜರಿ ಬೌಂಡರಿ ಸಿಡಿಸುವ ಮೂಲಕ 37ರನ್ ಸಿಡಿಸಿದ್ರು. ಮೊದಲ ವಿಕೆಟ್‌ಗೆ ಈ ಜೋಡಿ 73ರನ್ ಕಲೆಹಾಕಿತು. ನಾಯಕ ಬಾಲ್ಬಿರ್ನಿ ಔಟಾದ ಬಳಿಕ ಪಾಲ್‌ ಸ್ಟಿರ್ಲಿಂಗ್‌ಗೆ ಉತ್ತಮ ಸಾಥ್ ನೀಡಿದ ಲೋರ್ಕನ್ ಟಕರ್ 35 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕುವ ಮೂಲಕ ಮಿಂಚಿದರು. ಇವರ ಇನ್ನಿಂಗ್ಸ್‌ನಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಒಳಗೊಂಡಿತ್ತು.

ಇನ್ನು ತಂಡದ ಪರ ಹೀರೋ ಆಗಿ ಮಿಂಚಿದ್ದು ಓಪನರ್ ಪಾಲ್ ಸ್ಟಿರ್ಲಿಂಗ್ ಪಂದ್ಯದ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನ ಗೆಲುವಿನ ದಡ ತಲುಪಿಸಿದ್ರು. 48 ಎಸೆತಗಳಲ್ಲಿ ಅಜೇಯ 66ರನ್ ಕಲೆಹಾಕಿದ ಪಾಲ್ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಅಬ್ಬರಿಸಿದ್ರು. ಟಾಪ್ 3 ಬ್ಯಾಟರ್‌ಗಳ ಆಟದಿಂದಾಗಿ ಐರ್ಲೆಂಡ್ 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 150ರನ್ ಕಲೆಹಾಕಿ ಪಂದ್ಯವನ್ನ ಜಯಿಸಿತು.

ಬ್ಯಾಟಿಂಗ್ ಆಯ್ದುಕೊಂಡು ಮುಗ್ಗರಿಸಿದ ವೆಸ್ಟ್‌ ಇಂಡೀಸ್

ಬ್ಯಾಟಿಂಗ್ ಆಯ್ದುಕೊಂಡು ಮುಗ್ಗರಿಸಿದ ವೆಸ್ಟ್‌ ಇಂಡೀಸ್

ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದೆ. ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ ಆಮೆಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ನಿಜಕ್ಕೂ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಮೊದಲಿಗೆ ಓಪನರ್ ಕೈಲ್ ಮೇಯರ್ಸ್ ಕೇವಲ 1ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಜಾನ್ಸನ್ ಚಾರ್ಲ್ಸ್ 24ರನ್‌ ಗೆ ಇನ್ನಿಂಗ್ಸ್ ಮುಗಿಸಿದ್ರು. ಎವಿನ್ ಲಿವಿಸ್ ಆಟವು 13ರನ್‌ಗೆ ಕೊನೆಗೊಂಡಿತು. ನಾಯಕ ನಿಕೋಲಸ್ ಪೂರನ್ 11 ಎಸೆತಗಳಲ್ಲಿ 13ರನ್ ಕಲೆಹಾಕಿ ವಿಕೆಟ್ ಒಪ್ಪಿಸುವ ಮೂಲಕ ವಿಂಡೀಸ್‌ಗೆ ಆಘಾತವನ್ನುಂಟುಮಾಡಿದ್ರು.

ಆದ್ರೆ ತಂಡದ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ ಬ್ರಾಂಡನ್ ಕಿಂಗ್ 48 ಎಸೆತಗಳಲ್ಲಿ 62ರನ್‌ ಕಲೆಹಾಕಿದ್ದು ಬಿಟ್ರೆ, ಬೇರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 146ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.

ಸ್ಫೋಟಕ ಆಟಗಾರರನ್ನ ಒಳಗೊಂಡಿದ್ದ ವೆಸ್ಟ್‌ ಇಂಡೀಸ್‌ ಇಷ್ಟು ಕಳಪೆ ಪ್ರದರ್ಶನ ನೀಡಿದರ ಪರಿಣಾಮವೇ ಸೋಲಿಗೆ ನಾಂದಿ ಹಾಡಿದೆ. ಜೊತೆಗೆ ಬೌಲರ್‌ಗಳು ಕೂಡ ವಿಕೆಟ್ ಪಡೆಯುವಲ್ಲಿ ಹೆಣಗಾಡಿದ್ದಾರೆ. ಈ ಮೂಲಕ ಮಾಜಿ ವಿಶ್ವಕಪ್ ಚಾಂಪಿಯನ್‌ ಸೂಪರ್ 12 ಹಂತಕ್ಕೂ ತಲುಪದೆ ತವರಿಗೆ ಹಿಂದಿರುಗಬೇಕಾಗಿದೆ.

ಏಷ್ಯಾಕಪ್‌ನಲ್ಲಿ ಭಾರತ ಭಾಗವಹಿಸದಿದ್ರೆ, ಏಷ್ಯಾಕಪ್ ನಡೆಯೋದೆ ಇಲ್ಲ: ಕಾರಣ ಏನೆಂದು ತಿಳಿಸಿದ ಆಕಾಶ್ ಚೋಪ್ರಾ

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ವೆಸ್ಟ್‌ ಇಂಡೀಸ್ ಪ್ಲೇಯಿಂಗ್ 11
ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಎವಿನ್ ಲೆವಿಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ ಮತ್ತು ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಬೆಂಚ್: ಶಮರ್ ಬ್ರೂಕ್ಸ್, ರೇಮನ್ ರೀಫರ್, ಶೆಲ್ಡನ್ ಕಾಟ್ರೆಲ್, ಯಾನಿಕ್ ಕ್ಯಾರಿಯಾ


ಐರ್ಲೆಂಡ್ ಪ್ಲೇಯಿಂಗ್ 11
ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್

ಬೆಂಚ್: ಸ್ಟೀಫನ್ ಡೊಹೆನಿ, ಕಾನರ್ ಓಲ್ಫರ್ಟ್, ಗ್ರಹಾಂ ಹ್ಯೂಮ್, ಫಿಯಾನ್ ಹ್ಯಾಂಡ್

Story first published: Friday, October 21, 2022, 13:17 [IST]
Other articles published on Oct 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+